ಪ್ರಿಯಕರನಿಗಾಗಿ ಪತಿಯ ಕೊಲೆ ಮಾಡಿ ಮೂರ್ಛೆ ರೋಗದಿಂದ ಸಾವು ಎಂದು ಕತೆ ಕಟ್ಟಿದ್ದ ಖರ್ತನಾಕ್ ಲೇಡಿಯ ಬಂಧನ
ಮಕ್ಕಳ ಎದುರಲ್ಲೆ ಕೊಲೆ ಮಾಡಿದ್ದ ಪತ್ನಿ ಶೈಲಜಾಗೆ ಆಕೆಯ ತಾಯಿ ತಾಯಿ ಮತ್ತು ಪ್ರಿಯಕರ ಸಾಥ್ ನೀಡಿದ್ದರು. ಮಗಳ ಕೊಲೆ ಸಂಚಿಗೆ ಶೈಲಜಾ ತಾಯಿ ಲಕ್ಷ್ಮಮ್ಮ ಸಾಥ್ ನೀಡಿದ್ದಳು.
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯಲ್ಲಿ ನಡೆದಿದ್ದ ಕೊಲೆ ರಹಸ್ಯ ಬಯಲಾಗಿದೆ. ಪ್ರಿಯಕರಿನಿಗಾಗಿ ಪತ್ನಿಯಿಂದ ಪತಿಯ ಕೊಲೆ ನಡೆದಿದೆ ಎಂಧು ತಿಳಿದುಬಂದಿದೆ. ಪತಿಯನ್ನು ಕೊಲೆ ಮಾಡಿ ಆತ ಮೂರ್ಛೆ ರೋಗದಿಂದ ಸಾವನ್ನಪಿರುವುದಾಗಿ ನಂಬಿಸಿದ್ದ ಖರ್ತನಾಕ್ ಲೇಡಿಯನ್ನು ಬಂಧಿಸಲಾಗಿದೆ. ಕೊಲೆಯಾದ 15 ದಿನಗಳ ಬಳಿಕ ತಾಯಿಯ ಕೊಲೆ ಸಂಚನ್ನು ದಂಪತಿಯ ಬಯಲು ಮಾಡಿದ್ದಾನೆ. ನಗರ ನಿವಾಸಿ ರಾಘವೇಂದ್ರ ( 40 ) ಕೊಲೆಯಾಗಿದ್ದ ದುರ್ದೈವಿ.
12 ವರ್ಷಗಳಿಂದೆ ಆಂಧ್ರ ಮೂಲದ ಶೈಲಜಾ ಎಂಬುವಳನ್ನ ರಾಘವೇಂದ್ರ ವಿವಾಹವಾಗಿದ್ದ. ಗಂಡ ಮಗ್ಗದ ನೇಕಾರಿಕೆ ಮಾಡ್ತಿದ್ರೆ ಪತ್ನಿ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗ್ತಿದ್ದಳು. ಈ ವೇಳೆ ಗಾರ್ಮೇಂಟ್ಸ್ ನಲ್ಲಿ ಕೆಲಸ ಮಾಡ್ತಿದ್ದ ಆಂಧ್ರ ಪ್ರದೇಶ ಮೂಲದ ಹನುಮಂತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳಂತೆ. ಅಕ್ರಮ ಸಂಬಂಧ ಗಂಡನಿಗೆ ಗೊತ್ತಾಗಿ ಹಲವು ಭಾರಿ ಮನೆಯಲ್ಲಿ ಜಗಳಗಳು ನಡೆದಿವೆ. ಜಗಳದ ಹಿನ್ನೆಲೆ ಡಿಸೆಂಬರ್ 26 ರಂದು ಸಂಚು ರೂಪಿಸಿದ ಶೈಲಜಾ, ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಮಕ್ಕಳ ಎದುರಲ್ಲೆ ಕೊಲೆ ಮಾಡಿದ್ದ ಪತ್ನಿ ಶೈಲಜಾಗೆ ಆಕೆಯ ತಾಯಿ ತಾಯಿ ಮತ್ತು ಪ್ರಿಯಕರ ಸಾಥ್ ನೀಡಿದ್ದರು. ಮಗಳ ಕೊಲೆ ಸಂಚಿಗೆ ಶೈಲಜಾ ತಾಯಿ ಲಕ್ಷ್ಮಮ್ಮ ಸಾಥ್ ನೀಡಿದ್ದಳು. ಶೈಲಜಾ-ರಾಘವೇಂದ್ರ ದಂಪತಿಯ ಪುತ್ರನ ಹೇಳಿಕೆಯ ಮೇರೆಗೆ ಪ್ರಕರಣ ದಾಖಲಾಗುತ್ತಿದ್ದಂತೆ ಪತ್ನಿ ಶೈಲಜಾ, ಪ್ರಿಯಕರ ಮತ್ತು ತಾಯಿ ಎಸ್ಕೇಪ್ ಆಗಿದ್ದರು. ಇದೀಗ ಮೂವರೂ ಆರೋಪಿಗಳನ್ನು ಹೆಡೆಮುರಿಕಟ್ಟಿ ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
Also Read:
ಪೂಜೆ ವಿಚಾರವಾಗಿ ಎರಡು ಬಣಗಳ ನಡುವೆ ಜಗಳ; ತ್ರಿಶೂಲದಿಂದ ಹಲ್ಲೆಗೆ ಯತ್ನ, ಅವಾಚ್ಯ ಪದಗಳಿಂದ ‘ಪೂಜೆ’
Published On - 12:23 pm, Tue, 11 January 22