ಪೂಜೆ ವಿಚಾರವಾಗಿ ಎರಡು ಬಣಗಳ ನಡುವೆ ಜಗಳ; ತ್ರಿಶೂಲದಿಂದ ಹಲ್ಲೆಗೆ ಯತ್ನ, ಅವಾಚ್ಯ ಪದಗಳಿಂದ ‘ಪೂಜೆ’
ಎಂದಿನಂತೆ ನಿನ್ನೆ ಕೂಡ ದೇವಾಲಯದಲ್ಲಿ ಪೂಜೆ ನಡೆಯುತ್ತಿತ್ತು. ಆದ್ರೆ ಆರತಿ ತಟ್ಟೆ ಹಿಡಿದು ಪೂಜೆ ಮಾಡ್ತಿದ್ದ ಪೂಜಾರಿಯ ಚಿಕ್ಕಪ್ಪ ಮತ್ತು ಪೂಜಾರಿಯ ನಡುವೆ ಗಲಾಟೆ ನಡೆದಿದೆ. ಈ ವೇಳೆ ಪೂಜಾರಿಯನ್ನು ತಳ್ಳಿ ಆತನ ಚಿಕ್ಕಪ್ಪ ತ್ರಿಶೂಲ ಕಿತ್ತುಕೊಂಡು ಹಲ್ಲೆ ಮಾಡಲು ಯತ್ನಿಸಿದ್ದಾರೆ.
ಹಾವೇರಿ: ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿರುವ ಐತಿಹಾಸಿಕ ಮಾಲತೇಶ ದೇಗುಲದಲ್ಲಿ ಪೂಜೆ ವೇಳೆ ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಪರಸ್ಪರ ಹಲ್ಲೆ ನಡೆದಿದ್ದು ಪೂಜೆ ಮಾಡುತ್ತಿದ್ದ ಪೂಜಾರಿಯ ಚಿಕ್ಕಪ್ಪ, ಪೂಜಾರಿಯನ್ನು ತಳ್ಳಿ ತ್ರಿಶೂಲ ಕಿತ್ತುಕೊಂಡು ಹಲ್ಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ಸಂತೋಷ ಭಟ್ ಪೂಜಾರರಿಂದ 7 ಜನರ ವಿರುದ್ಧ ದೂರು ದಾಖಲಾಗಿದೆ.
ಎಂದಿನಂತೆ ನಿನ್ನೆ ಕೂಡ ದೇವಾಲಯದಲ್ಲಿ ಪೂಜೆ ನಡೆಯುತ್ತಿತ್ತು. ಆದ್ರೆ ಆರತಿ ತಟ್ಟೆ ಹಿಡಿದು ಪೂಜೆ ಮಾಡ್ತಿದ್ದ ಪೂಜಾರಿಯ ಚಿಕ್ಕಪ್ಪ ಮತ್ತು ಪೂಜಾರಿಯ ನಡುವೆ ಗಲಾಟೆ ನಡೆದಿದೆ. ಈ ವೇಳೆ ಪೂಜಾರಿಯನ್ನು ತಳ್ಳಿ ಆತನ ಚಿಕ್ಕಪ್ಪ ತ್ರಿಶೂಲ ಕಿತ್ತುಕೊಂಡು ಹಲ್ಲೆ ಮಾಡಲು ಯತ್ನಿಸಿದ್ದಾರೆ. ಪರಸ್ಪರರ ನಡುವೆ ನಡೆದ ವಾಗ್ವಾದ, ಮಾತಿನ ಚಕಮಕಿ, ತಳ್ಳಾಟ, ನೂಕಾಟದ ದೃಶ್ಯಗಳು ದೇವಸ್ಥಾನದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಸದ್ಯ ಘಟನೆ ಸಂಬಂಧ ಸಂತೋಷ ಭಟ್ ಪೂಜಾರರಿಂದ ಏಳು ಜನರ ವಿರುದ್ಧ ದೂರು ದಾಖಲಾಗಿದೆ. ಉಪ್ಪಾರ ಉರ್ಫ್ ಬಣಕಾರ ಹಾಗೂ ಪೂಜಾರ ಕುಟುಂಬದವರ ನಡುವೆ ಪೂಜೆಗಾಗಿ ಕಿತ್ತಾಟ ನಡೆದಿದೆ. ಶಿವಪ್ಪ ಉಪ್ಪಾರ ಉರ್ಫ್ ಬಣಕಾರ, ಪ್ರಕಾಶ ಉಪ್ಪಾರ, ಸುನೀಲ ಉಪ್ಪಾರ, ಮಹಾದೇವಪ್ಪ ಉಪ್ಪಾರ, ಗುರುರಾಜ ಉಪ್ಪಾರ, ಮೃತ್ಯುಂಜಯ ಉಪ್ಪಾರ ಮತ್ತು ಸುಭಾಸ ಉಪ್ಪಾರ ಎಂಬುವರ ವಿರುದ್ಧ ದೂರು ದಾಖಲಾಗಿದೆ.
ನಿನ್ನೆ ಬೆಳಿಗ್ಗೆ 7.22 ಗಂಟೆಗೆ ದೇವಸ್ಥಾನದಲ್ಲಿ ಪೂಜೆ ವೇಳೆ ಗಲಾಟೆ ನಡೆದಿದೆ. ನಾವು ಪೂಜೆ ಮಾಡುತ್ತೇವೆ, ನಾವು ಪೂಜೆ ಮಾಡುತ್ತೇವೆ ಅಂತಾ ಕಿತ್ತಾಟ ಶುರುವಾಗಿದೆ. ದೇವಸ್ಥಾನಕ್ಕೆ ಹೋದಾಗ ನನ್ನ ಗಂಡ ಮೃತ್ಯುಂಜಯ ಬಣಕಾರ ಹಾಗೂ ಮೈದುನನ್ನ ಸಂತೋಷ ಭಟ್ ಹಾಗೂ ಇತರರು ಸೇರಿಕೊಂಡು ಕೊಲೆ ಮಾಡಲು ಯತ್ನಿಸಿದ್ದಲ್ಲದೇ ಆರೋಪಿಗಳು ಮೈಕೈ ಮುಟ್ಟಿ, ಅವಾಚ್ಯವಾಗಿ ಬೈದಾಡಿ ಜೀವಬೆದರಿಕೆ ಹಾಕಿದ್ದಾರೆ ಅಂತಾ ಸಂತೋಷ ಭಟ್ ಸೇರಿದಂತೆ ಒಂಬತ್ತು ಜನರು ವಿರುದ್ಧ ಬಣಕಾರ ಕುಟುಂಬದ ಮಹಿಳೆ ಪ್ರತಿದೂರು ದಾಖಲಿಸಿದ್ದಾಳೆ. ಕಳೆದ ಹಲವು ವರ್ಷಗಳಿಂದ ಉಪ್ಪಾರ ಉರ್ಫ್ ಬಣಕಾರ ಹಾಗೂ ಪೂಜಾರ ಕುಟುಂಬದ ನಡುವೆ ಮಾಲತೇಶ ದೇವಸ್ಥಾನದ ಪೂಜೆ ವಿಚಾರವಾಗಿ ನಡೆಯುತ್ತಿರುವ ಜಗಳ ನಿನ್ನೆ ಕೊಲೆ ಯತ್ನದವರೆಗೂ ಹೋಗಿದೆ.
ಇದನ್ನೂ ಓದಿ: ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಕೊಂದೇಬಿಡುತ್ತೇನೆ ಎಂದು 2020ರಿಂದ ಬೆನ್ನತ್ತಿದ್ದ 72ವರ್ಷದ ವೃದ್ಧ ಅರೆಸ್ಟ್ !