ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​​ರನ್ನು ಕೊಂದೇಬಿಡುತ್ತೇನೆ ಎಂದು 2020ರಿಂದ ಬೆನ್ನತ್ತಿದ್ದ 72ವರ್ಷದ ವೃದ್ಧ ಅರೆಸ್ಟ್ !

ವೆಲ್ನಿಕಿ ನ್ಯೂಯಾರ್ಕ್​ನ ರಾಕ್​ವೇ ಬೀಚ್​​ನ ನಿವಾಸಿಯಾಗಿದ್ದು, ಒಂದು ಬಾರಿ ಟ್ರಂಪ್​​ರನ್ನು ಹಿಟ್ಲರ್​ ಎಂದೂ ಕರೆದಿದ್ದ. ಟ್ರಂಪ್​ ಸಾಯುವುದಾದರೆ ನಾನು ಏನು ಮಾಡಲೂ ಸಿದ್ಧ ಎಂಬುದನ್ನು ಒತ್ತಿಒತ್ತಿ ಹೇಳುತ್ತಿದ್ದ.

ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​​ರನ್ನು ಕೊಂದೇಬಿಡುತ್ತೇನೆ ಎಂದು 2020ರಿಂದ ಬೆನ್ನತ್ತಿದ್ದ 72ವರ್ಷದ ವೃದ್ಧ ಅರೆಸ್ಟ್ !
ಡೊನಾಲ್ಡ್​ ಟ್ರಂಪ್​
Follow us
TV9 Web
| Updated By: Lakshmi Hegde

Updated on: Jan 11, 2022 | 11:09 AM

ನ್ಯೂಯಾರ್ಕ್​: ಯುಎಸ್​ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ (Donald Trump) ಕೊಲೆ ಬೆದರಿಕೆ ಹಾಕಿದ್ದ 72ವರ್ಷದ ವ್ಯಕ್ತಿಯನ್ನು ಯುಎಸ್​ ಗುಪ್ತ ಸೇವಾ ಅಧಿಕಾರಿಗಳು ಬಂಧಿಸಿದ್ದಾರೆ. ಈ ವ್ಯಕ್ತಿಯ ಹೆಸರು ಥಾಮಸ್​ ವೆಲ್ನಿಕಿ ಎಂದಾಗಿದ್ದು, ಈತ ಉದ್ದೇಶಪೂರ್ವಕವಾಗಿಯೇ, ಟ್ರಂಪ್​​ರನ್ನು ಅಪಹರಣ ಮಾಡಿ ಕೊಲ್ಲುವುದಾಗಿ, ಅವರಿಗೆ ದೈಹಿಕವಾಗಿ ಹಾನಿಯನ್ನುಂಟು ಮಾಡುವುದಾಗಿ ಹೇಳಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಥಾಮಸ್​ ವಿರುದ್ಧ ಕ್ರಿಮಿನಲ್​ ದೋಷಾರೋಪಣೆ ಸಲ್ಲಿಸಿದ್ದಾರೆ. ಈ ವ್ಯಕ್ತಿ ಟ್ರಂಪ್​ರನ್ನು ಕೊಲ್ಲುವುದಾಗಿ ಪದೇಪದೆ ಬೆದರಿಕೆ ಹಾಕಿದ್ದಲ್ಲದೆ, ಅಮೆರಿಕ ಸಂಸತ್ತಿನಲ್ಲಿರುವ ಟ್ರಂಪ್​ ಬೆಂಬಲಿಗರನ್ನು ಯಾರೇ ಹತ್ಯೆ ಮಾಡಲು ಮುಂದಾದರೂ ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದ ಎನ್ನಲಾಗಿದೆ.

ವೆಲ್ನಿಕಿ 2020ರ ಜುಲೈನಿಂದ 2021ರ ನವೆಂಬರ್​ವರೆಗೆ ಹೀಗೆ ನಿರಂತರವಾಗಿ ಬೆದರಿಕೆ ಕರೆ ಮಾಡುತ್ತಲೇ ಇದ್ದ. ಆತ ಯುಎಸ್​ನ ಗುಪ್ತ ಸೇವಾ ದಳಕ್ಕೂ ಕರೆ ಮಾಡಿ ಟ್ರಂಪ್​​ರನ್ನು ಮತ್ತು ಅವರ ಬೆಂಬಲಿಗರಾದ 13 ಮಂದಿಯನ್ನು ಕೊಲೆ ಮಾಡುವುದಾಗಿ ಹೇಳುತ್ತಿದ್ದ ಎಂದು ಅಧಿಕಾರಿಗಳು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ಅಂದಹಾಗೆ ಈತ ನ್ಯೂಯಾರ್ಕ್​ನ ರಾಕ್​ವೇ ಬೀಚ್​​ನ ನಿವಾಸಿಯಾಗಿದ್ದು, ಒಂದು ಬಾರಿ ಟ್ರಂಪ್​​ರನ್ನು ಹಿಟ್ಲರ್​ ಎಂದೂ ಕರೆದಿದ್ದ. ಟ್ರಂಪ್​ ಸಾಯುವುದಾದರೆ ನಾನು ಏನು ಮಾಡಲೂ ಸಿದ್ಧ ಎಂಬುದನ್ನು ಒತ್ತಿಒತ್ತಿ ಹೇಳುತ್ತಿದ್ದ. ಟ್ರಂಪ್​ ಒಬ್ಬ ನಿರಂಕುಶವಾದ ಎಂದು ಪ್ರತಿಪಾದಿಸುತ್ತಿದ್ದ ವೆಲ್ನಿಕಿ 2020 ಜುಲೈನಲ್ಲಿ, ನನಗೆ ಯಾರನ್ನೂ ನೋಯಿಸಲು ಇಷ್ಟವಿಲ್ಲ. ಆದರೆ ಫ್ಯಾಸಿಸಂನ್ನು ನಾನು ಒಪ್ಪುವುದಿಲ್ಲ. ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತರೂ ಅವರು ಅಧಿಕಾರ ತೊರೆಯಲು ನಿರಾಕರಿಸಿದರೆ ಅವರು ಸಾಯಲಿ ಎಂದೇ ನಾನು ಬಯಸುತ್ತೇನೆ. ಅದಕ್ಕಾಗಿ ನಾನೂ ಸಹ ಅಗತ್ಯಬಿದ್ದರೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುತ್ತೇನೆ ಎಂದಿದ್ದ. 2021ರ ಜನವರಿಯಲ್ಲಿ ಲಾಂಗ್​ ಐಸ್​ಲ್ಯಾಂಡ್​ ಸಿಕ್ರೆಟ್​ ಸರ್ವೀಸ್​ ಆಫೀಸ್​ಗೆ ತನ್ನ ಧ್ವನಿ ಮೇಲ್​ ಮಾಡಿದ್ದ ಈತ, ಮತ್ತೆ ಟ್ರಂಪ್​ ಮತ್ತು 12 ಸದಸ್ಯರನ್ನು ಕೊಲ್ಲುವುದಾಗಿಯೇ ತಿಳಿಸಿದ್ದ. 2021ರ ಸೆಪ್ಟೆಂಬರ್​, ನವೆಂಬರ್​​ನಲ್ಲಿಯೂ ಇದನ್ನೇ ಮಾಡಿದ್ದ.  ಸದ್ಯ ಆತನನ್ನು ಬಂಧಿಸಿರುವ ಯುಎಸ್ ಗುಪ್ತ ಸೇವಾ ಅಧಿಕಾರಿಗಳು ನಿನ್ನೆ ಮಧ್ಯಾಹ್ನವೇ ಕೋರ್ಟ್​ಗೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ: ಕೋವಿಡ್ ಪಾಸಿಟಿವ್: ಮಣಿಪಾಲ್ ಆಸ್ಪತ್ರೆಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ‌, ಪುತ್ರನಿಗೂ ಕೊರೊನಾ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್