ಕೊವಿಡ್: ಸಿಎಂ ಬೊಮ್ಮಾಯಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಪರೀಕ್ಷೆ, ಒಂದು ವಾರ ಹೋಂ ಕ್ವಾರಂಟೈನ್, ಪುತ್ರ-ಸೊಸೆಗೂ ಕೊರೊನಾ
ಕೋವಿಡ್ ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಣಿಪಾಲ್ ಆಸ್ಪತ್ರೆಗೆ ತೆರಳಿದರು. ಬೆಂಗಳೂರಿನ ಹಳೆ ಮದ್ರಾಸ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಪರೀಕ್ಷೆ, ಚಿಕಿತ್ಸೆಗೆ ಒಳಪಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಕೋವಿಡ್ ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಣಿಪಾಲ್ ಆಸ್ಪತ್ರೆಗೆ ತೆರಳಿದರು. ಬೆಂಗಳೂರಿನ ಹಳೆ ಮದ್ರಾಸ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಪರೀಕ್ಷೆ, ಚಿಕಿತ್ಸೆಗೆ ಒಳಪಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಣಿಪಾಲ್ ಆಸ್ಪತ್ರೆಯ ಹನ್ನೊಂದನೇ ಮಹಡಿಯಲ್ಲಿ ಸಿಎಂಗೆ ಪರೀಕ್ಷೆಗಳು ನಡೆದಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿಗೂ ಕೋವಿಡ್ ಪಾಸಿಟಿವ್ ಆಗಿದೆ. ರೋಗ ಲಕ್ಷಣ ಇರುವ ಬಗ್ಗೆ ಟ್ವೀಟ್ ಮೂಲಕ ಭರತ್ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಸಿದ್ದರಾಮಯ್ಯ ದೂರವಾಣಿ ಕರೆ: ಸಿಎಂ ಬಸವರಾಜ ಬೊಮ್ಮಾಯಿಗೆ ಕೊರೊನಾ ದೃಢ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದರು. ಶೀಘ್ರ ಗುಣಮುಖರಾಗುವಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಸಿದ್ದರಾಮಯ್ಯ ಹಾರೈಸಿದರು. ಇನ್ನು ಸಿದ್ದರಾಮಯ್ಯ ಕರೆ ಮಾಡಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧನ್ಯವಾದ ತಿಳಿಸಿದರು.
ಸಿಎಂ ಬಸವರಾಜ ಬೊಮ್ಮಾಯಿಗೆ ಕೋವಿಡ್ ಸೋಂಕು ಪತ್ತೆಯಾದ ಹಿನ್ನೆಲೆ ನಿನ್ನೆ ರಾತ್ರಿಯೇ ಸಿಎಂ ಬೊಮ್ಮಾಯಿ ಆಪ್ತ ಸಿಬ್ಬಂದಿ, ಪಿಎಗಳು, ಅಂಗ ರಕ್ಷಕರು, ಖಾಸಗಿ ನಿವಾಸದ ಸಿಬ್ಬಂದಿಗಳಿಗೆ ಕೋವಿಡ್ ಪರೀಕ್ಷೆ ಮಾಡಿಸಲಾಗಿದೆ. ನಿನ್ನೆ ರಾತ್ರಿ ಸಿಎಂ ಖಾಸಗಿ ನಿವಾಸದಲ್ಲಿ ಸ್ಯಾನಿಟೈಸೇಷನ್ ಕಾರ್ಯ ಸಹ ಮಾಡಲಾಗಿದೆ.
ಸಿಎಂ ಬೊಮ್ಮಾಯಿ ಒಂದು ವಾರ ಹೋಮ್ ಕ್ವಾರಂಟೈನ್: ಕೊವಿಡ್ ಸೋಂಕಿತ ಸಿಎಂ ಬೊಮ್ಮಾಯಿ ಅವರು ಒಂದು ವಾರ ಕಾಲ ಬೆಂಗಳೂರಿನ ಆರ್.ಟಿ.ನಗರದ ನಿವಾಸದಲ್ಲಿ ಹೋಮ್ ಕ್ವಾರಂಟೈನ್ ಆಗಲಿದ್ದಾರೆ. ಅವರು ಮನೆಯಿಂದಲೇ ಆಡಳಿತ ನಿರ್ವಹಣೆ ಮಾಡಲಿದ್ದಾರೆ. ಆಡಳಿತ, ಕೊವಿಡ್ ನಿರ್ವಹಣೆ ಸಂಬಂಧ ಮನೆಯಿಂದ ವರ್ಚುವಲ್ ಸಭೆಗಳನ್ನು ನಡೆಸಲಿದ್ದಾರೆ.
ಇನ್ನು ಸಿಎಂ ಬೊಮ್ಮಾಯಿ ಪುತ್ರ ಭರತ್ ಮತ್ತು ಸೊಸೆ ಇಬ್ಬನಿ ಅವರಿಗೆ ಕೊವಿಡ್ ಹಿನ್ನೆಲೆ ಇತರೆ ಪರೀಕ್ಷೆಗಳು ನಡೆದಿದ್ದು, ಅವುಗಳ ವರದಿ ಇನ್ನಷ್ಟೇ ಬರಬೇಕಿದೆ. ಪರೀಕ್ಷಾ ವರದಿಗಳ ಬಂದ ಬಳಿಕ ಭರತ್ ಮತ್ತು ಇಬ್ಬನಿ ಇಬ್ಬರೂ ಮನೆಗೆ ವಾಪಸಾಗಲಿದ್ದಾರೆ. ಸಿಎಂ ಪುತ್ರ ಮತ್ತು ಸೊಸೆ ಸದ್ಯ ಮಣಿಪಾಲ್ ಆಸ್ಪತ್ರೆಯಲ್ಲೇ ಇದ್ದಾರೆ.
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಗೆ ಕೊರೊನಾ ಪಾಸಿಟಿವ್: ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದೆ. ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಪುತ್ರಿಗೆ ಕೂಡ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
CM Bommai Admitted To Manipal Hospital After Testing Covid Positive! ಮಣಿಪಾಲ್ ಆಸ್ಪತ್ರೆಗೆ ದಾಖಲಾದ CM
ಭರತ್ ಬೊಮ್ಮಾಯಿ ಟ್ವೀಟ್:
Hello everyone,
I have tested positive for covid with very mild symptoms. I have isolated myself at home. I would like the people who have come in contact with me to kindly get themselves tested.
Stay home stay safe. #COVID19 #MaskUpIndia
— Bharath Bommai (@BommaiBharath) January 11, 2022
Basavaraj Bommai: ಸಿಎಂ ಬಸವರಾಜ ಬೊಮ್ಮಾಯಿಗೆ ಕೊರೊನಾ ಪಾಸಿಟಿವ್
Published On - 10:54 am, Tue, 11 January 22