ಸಿಎಂ ಬಸವರಾಜ ಬೊಮ್ಮಾಯಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಇಂದು (ಜನವರಿ 10) ಸಿಎಂ ಬೊಮ್ಮಾಯಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಸಾಹಿತಿ ಡಾ. ಚಂದ್ರಶೇಖರ ಪಾಟೀಲ ಅಂತ್ಯಕ್ರಿಯೆಯಲ್ಲಿ ಭಾಗಿ ಆಗಿದ್ದರು. ಬೂಸ್ಟರ್ ಡೋಸ್ ಕೊರೊನಾ ಲಸಿಕೆ ಕಾರ್ಯಕ್ರಮ ಉದ್ಘಾಟಿಸಿದ್ದರು. ಆಡಳಿತ ಸುಧಾರಣೆ ಕುರಿತು ಸಭೆ ನಡೆಸಿದ್ದರು. ವಿಶ್ರಾಂತ ಕುಲಪತಿಗಳ ನಿಯೋಗದ ಜತೆ ಸಭೆಯಲ್ಲಿ ಭಾಗಿಯಾಗಿದ್ದರು. ಈ ಮಧ್ಯೆ, ಬಸವರಾಜ ಬೊಮ್ಮಾಯಿ ಕೊರೊನಾ ಪಾಸಿಟಿವ್ ಆಗಿದ್ದಾರೆ. ಈಗಾಗಲೇ ಕರ್ನಾಟಕ ಬಿಜೆಪಿಯ ಆರ್. ಅಶೋಕ್, ಬಿ.ಸಿ. ನಾಗೇಶ್, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಕೊವಿಡ್19 ಸೋಂಕಿತರಾಗಿದ್ದಾರೆ.
I have tested positive for COVID -19 today with mild symptoms. My health is fine, I am under home quarantine. I request everyone who have recently come in my contact to isolate themselves and get tested.
— Basavaraj S Bommai (@BSBommai) January 10, 2022
ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂಗೆ ಕೂಡ ಕೊರೊನಾ ಸೋಂಕು ದೃಢವಾಗಿದೆ. ತೀವ್ರ ಜ್ವರದಿಂದ ಬಳಲುತ್ತಿರುವ ಸಿಎಂ ಇಬ್ರಾಹಿಂಗೆ ಕೊರೋನಾ ಪಾಸಿಟಿವ್ ಬಂದಿದೆ. ಮೊನ್ನೆ (ಜನವರಿ 8) ಕನಕಪುರದ ಡಿ.ಕೆ ಶಿವಕುಮಾರ್ ನಿವಾಸದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದ ಇಬ್ರಾಹಿಂಗೆ ನಿನ್ನೆ ಜ್ವರ ಕಾಣಿಸಿಕೊಂಡಿತ್ತು. ಜ್ವರ ಬಂದ ಹಿನ್ನೆಲೆ ಇಬ್ರಾಹಿಂ ಕೊವಿಡ್ ಟೆಸ್ಟ್ಗೆ ಒಳಗಾಗಿದ್ದರು. ಇದೀಗ, ಕೊವಿಡ್ ಪರೀಕ್ಷೆಯಲ್ಲಿ ಸಿಎಂ ಇಬ್ರಾಹಿಂಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.
ಇದನ್ನೂ ಓದಿ: Coronavirs 3rd Wave: ಕೊರೊನಾ 3ನೇ ಅಲೆಯ ಏರಿಳಿತದ ಬಗ್ಗೆ ಮಣೀಂದ್ರ ಅಗರ್ವಾಲ್ ಲೆಕ್ಕಾಚಾರ
ಇದನ್ನೂ ಓದಿ: ಆರೋಗ್ಯ ಸಚಿವರ ಬಾಮೈದನಿಂದಲೇ ಕೊರೊನಾ ನಿಯಮ ಉಲ್ಲಂಘನೆ; 500 ಮಹಿಳೆಯರನ್ನು ಸೇರಿಸಿ ಓಂಶಕ್ತಿ ಯಾತ್ರೆ ಆಯೋಜನೆ