ರಾಜಧಾನಿಯಲ್ಲಿ ಕೊರೊನಾ ಕಾಟ: ಸೋಂಕಿತ ಮಕ್ಕಳು ಮತ್ತು ಗರ್ಭಿಣಿಯರಿಗಾಗಿ ಪ್ರತ್ಯೇಕ 2 ಆಸ್ಪತ್ರೆ ಕಾಯ್ದಿರಿಸಿದ ಕರ್ನಾಟಕ ಸರ್ಕಾರ

ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮಕ್ಕಳು ಮತ್ತು ಮಹಿಳೆಯರಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಸೋಂಕಿತ ಮಕ್ಕಳು ಮತ್ತು ಗರ್ಭಿಣಿಯರ ಚಿಕಿತ್ಸೆಗಾಗಿ ಪ್ರತ್ಯೇಕವಾಗಿ ಎರಡು ಆಸ್ಪತ್ರೆಗಳನ್ನು ಕಾಯ್ದಿರಿಸಿದೆ.

ರಾಜಧಾನಿಯಲ್ಲಿ ಕೊರೊನಾ ಕಾಟ: ಸೋಂಕಿತ ಮಕ್ಕಳು ಮತ್ತು ಗರ್ಭಿಣಿಯರಿಗಾಗಿ ಪ್ರತ್ಯೇಕ 2 ಆಸ್ಪತ್ರೆ ಕಾಯ್ದಿರಿಸಿದ ಕರ್ನಾಟಕ ಸರ್ಕಾರ
ಮಕ್ಕಳು ಮತ್ತು ಗರ್ಭಿಣಿಯರ ಚಿಕಿತ್ಸೆಗಾಗಿ ಪ್ರತ್ಯೇಕವಾಗಿ ಎರಡು ಆಸ್ಪತ್ರೆ

ಬೆಂಗಳೂರು: ಕೊರೊನಾ ಮೂರನೇ ಅಲೆ ಮತ್ತು ಒಮಿಕ್ರಾನ್ (Omicron)​ ಆತಂಕ ದಿನೇ ದಿನೇ ಹೆಚ್ಚುತ್ತಿದೆ. ಕೊವಿಡ್​ 19 (Covid 19) ಭೀತಿಯಿಂದ ಹೊರಬರಲು ರಾಜ್ಯ ಸರ್ಕಾರ  (State Government) ಈಗಾಗಲೇ ಮುಂಜಾಗೃತಾ ಕ್ರಮವನ್ನು ತೆಗೆದುಕೊಂಡು ವಿಕೆಂಡ್​ ಕರ್ಫ್ಯೂ (Weekend Curfew) ಜಾರಿಗೆ ತಂದಿದೆ. ಆದರೆ ಸೋಂಕಿತರ ಸಂಖ್ಯೆ ಮಾತ್ರ ಏರಿಕೆಯತ್ತ ಸಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವೇಗಗತಿಯಲ್ಲಿ ಏರಿಕೆ ಕಂಡಿದೆ. ಹೀಗಾಗಿ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮಕ್ಕಳು ಮತ್ತು ಮಹಿಳೆಯರಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಸೋಂಕಿತ ಮಕ್ಕಳು ಮತ್ತು ಗರ್ಭಿಣಿಯರ ಚಿಕಿತ್ಸೆಗಾಗಿ ಪ್ರತ್ಯೇಕವಾಗಿ ಎರಡು ಆಸ್ಪತ್ರೆಗಳನ್ನು ಕಾಯ್ದಿರಿಸಿದೆ.

ಮಕ್ಕಳು ಮತ್ತು ಗರ್ಭಿಣಿಯರಿಗಾಗಿ ಆಸ್ಪತ್ರೆ ಮೀಸಲು:

1) ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ಬೆಂಗಳೂರು

2) ಗೌಸಿಯಾ ಹೆರಿಗೆ ಆಸ್ಪತ್ರೆ, (ಶಿವಾಜಿನಗರ) ಬೆಂಗಳೂರು

ಆರೋಗ್ಯ ಇಲಾಖೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದು, ಮಕ್ಕಳು ಮತ್ತು ಗರ್ಭಿಣಿಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡರೆ ತಕ್ಷಣ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

ಬೆಂಗಳೂರು ನಗರದಲ್ಲಿ ಕೊರೊನಾದಿಂದ ಮಕ್ಕಳಿಗೆ ಕಂಟಕ

ಕೇವಲ ಐದೇ ದಿನದಲ್ಲಿಯೇ 5,263 ಮಕ್ಕಳಿಗೆ ಕೊರೊನಾ ತಗುಲಿದೆ. ಜನವರಿ 5ರಿಂದ 19ರವರೆಗೆ 5,263 ಮಕ್ಕಳಿಗೆ ಕೊರೊನಾ ಪಾಸಿಟಿವ್ ಆಗಿದೆ. 1ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ರಜೆ ನೀಡಲಾಗಿದೆ. ಆದ್ರೆ ಮನೆಯಲ್ಲಿದ್ದರೂ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. 3ನೇ ಅಲೆಯಲ್ಲಿ ಮಕ್ಕಳಿಗೆ ಅತಿ ಹೆಚ್ಚು ಸೋಂಕು ಪತ್ತೆಯಾಗುತ್ತಿದ್ದು ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಜನವರಿ 1ರಂದು ನಗರದಲ್ಲಿ ಕೇವಲ 99 ಮಕ್ಕಳಿಗೆ ಸೋಂಕು ತಗುಲಿತ್ತು ಆದರೆ ಈಗ 5,263 ಮಕ್ಕಳಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.

ಯಾವ ಯಾವ ಕ್ಷೇತ್ರಗಳಲ್ಲಿ ಕೊರೊನಾ ಹೇಗಿದೆ

ಇನ್ನು ಮಹದೇವಪುರ ಕ್ಷೇತ್ರದಲ್ಲೇ ಅತಿ ಹೆಚ್ಚು ಸಕ್ರಿಯ ಪ್ರಕರಣಗಳು ಪತ್ತೆಯಾಗುತ್ತಿವೆ. ಬೆಂಗಳೂರು ದಕ್ಷಿಣ ಕ್ಷೇತ್ರ ನಗರದಲ್ಲಿ 2ನೇ ಸ್ಥಾನದಲ್ಲಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 5,792 ಸಕ್ರಿಯ ಕೇಸ್ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 2,635 ಸಕ್ರಿಯ ಕೇಸ್ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 2,524 ಸಕ್ರಿಯ ಕೇಸ್ ಸಿ.ವಿ.ರಾಮನ್‌ನಗರ 2,371, ಕೆ.ಆರ್.ಪುರಂನಲ್ಲಿ 2,127 ಕೇಸ್ ಬ್ಯಾಟರಾಯನಪುರ 1,910, ಬಿಟಿಎಂ ಲೇಔಟ್ 1,907 ಕೇಸ್ ಆರ್.ಆರ್.ನಗರ 1,894, ಮಲ್ಲೇಶ್ವರಂ 1,508 ಸಕ್ರಿಯ ಕೇಸ್ ಶಾಂತಿನಗರ 1,495, ಜಯನಗರ 1,215 ಸಕ್ರಿಯ ಪ್ರಕರಣ ಸರ್ವಜ್ಞನಗರ 1,201, ಬಸವನಗುಡಿ 1,065 ಸಕ್ರಿಯ ಕೇಸ್ ಹೆಬ್ಬಾಳ 1,037, ಯಶವಂತಪುರದಲ್ಲಿ 1,031 ಸಕ್ರಿಯ ಕೇಸ್ ಶಿವಾಜಿನಗರ 1,000, ಪದ್ಮನಾಭನಗರ 900 ಸಕ್ರಿಯ ಕೇಸ್ ಗೋವಿಂದರಾಜನಗರ 861, ಗಾಂಧಿನಗರ 844 ಸಕ್ರಿಯ ಕೇಸ್ ಮಹಾಲಕ್ಷ್ಮೀ ಲೇಔಟ್ 843, ವಿಜಯನಗರ 831 ಸಕ್ರಿಯ ಕೇಸ್ ರಾಜಾಜಿನಗರ 815, ಯಲಹಂಕ ಕ್ಷೇತ್ರದಲ್ಲಿ 813 ಸಕ್ರಿಯ ಕೇಸ್ ಚಿಕ್ಕಪೇಟೆ 712, ದಾಸರಹಳ್ಳಿ ಕ್ಷೇತ್ರದಲ್ಲಿ 636 ಸಕ್ರಿಯ ಕೇಸ್ ಪುಲಕೇಶಿನಗರ 426, ಚಾಮರಾಜಪೇಟೆಯಲ್ಲಿ 409 ಸಕ್ರಿಯ ಕೇಸ್

ಇದನ್ನೂ ಓದಿ: ಕೋವಿಡ್ ಪಾಸಿಟಿವ್: ಮಣಿಪಾಲ್ ಆಸ್ಪತ್ರೆಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ‌, ಪುತ್ರನಿಗೂ ಕೊರೊನಾ

ಶೇ 5-10 ಕೊವಿಡ್ ಪ್ರಕರಣಗಳಿಗೆ ಆಸ್ಪತ್ರೆ ಅಗತ್ಯವಿರುತ್ತದೆ, ಈ‌ ಪರಿಸ್ಥಿತಿ ಬಹಳ ವೇಗವಾಗಿ ಬದಲಾಗಬಹುದು: ರಾಜೇಶ್ ಭೂಷಣ್

Published On - 12:40 pm, Tue, 11 January 22

Click on your DTH Provider to Add TV9 Kannada