ತಬ್ಲಿಘಿಗಳು ಕೊವಿಡ್ ಮೊದಲ ಅಲೆಗೆ ಕಾರಣರಾದರೆ, ಕಾಂಗ್ರೆಸ್‌ 3ನೇ ಅಲೆಗೆ ಕಾರಣವಾಗುತ್ತಿದ್ದಾರೆ: ರಾಜ್ಯ ಬಿಜೆಪಿ ಟ್ವೀಟ್

ಕೊವಿಡ್‌ ಮೊದಲನೇ ಅಲೆಯ ಸಂದರ್ಭದಲ್ಲಿ ದೇಶವನ್ನು ಕಾಡಿದ್ದ ತಬ್ಲಿಘಿಗಳ ರೀತಿ ಈಗ ಡಿಕೆಶಿ ಸೋದರರು ಪಾದಯಾತ್ರೆಯ ನೆಪದಲ್ಲಿ ರಾಜ್ಯದಲ್ಲಿ ಕೊರೋನಾ ಹಂಚುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

ತಬ್ಲಿಘಿಗಳು ಕೊವಿಡ್ ಮೊದಲ ಅಲೆಗೆ ಕಾರಣರಾದರೆ, ಕಾಂಗ್ರೆಸ್‌ 3ನೇ ಅಲೆಗೆ ಕಾರಣವಾಗುತ್ತಿದ್ದಾರೆ: ರಾಜ್ಯ ಬಿಜೆಪಿ ಟ್ವೀಟ್
ಬಿಜೆಪಿ (ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಕಾಂಗ್ರೆಸ್ ಪಕ್ಷ (Congress) ಹಮ್ಮಿಕೊಂಡಿರುವ ಸುಳ್ಳಿನ ಜಾತ್ರೆ ಈಗ ಕೊರೊನಾ ಮೂರನೇ ಅಲೆಯ (Corona third wave) ಸೂಪರ್ ಸ್ಪ್ರೆಡರ್ ಆಗುತ್ತಿದೆ. ಕೊವಿಡ್‌ ಮೊದಲನೇ ಅಲೆಯ ಸಂದರ್ಭದಲ್ಲಿ ದೇಶವನ್ನು ಕಾಡಿದ್ದ ತಬ್ಲಿಘಿಗಳ ರೀತಿ ಈಗ ಡಿಕೆಶಿ ಸೋದರರು ಪಾದಯಾತ್ರೆಯ ನೆಪದಲ್ಲಿ ರಾಜ್ಯದಲ್ಲಿ ಕೊರೋನಾ ಹಂಚುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

ನಿಮ್ಮ ಸುಳ್ಳಿನಜಾತ್ರೆ ಪ್ರಹಸನದಲ್ಲಿ ಇಪ್ಪತ್ತು ನಿಮಿಷ, ಅರ್ಧಗಂಟೆಯ ನಡಿಗೆ ನಾಟಕವಾಡುತ್ತಿರುವ ಕಾಂಗ್ರೆಸ್ ಪುಢಾರಿಗಳು ಬೆಂಗಳೂರಿಗೆ ವಾಪಾಸ್ ಆಗುತ್ತಿದ್ದಾರೆ. ಅವರೆಲ್ಲರೂ ಕೊವಿಡ್ ಸೋಂಕಿನ ಸಂಭಾವ್ಯ ವಾಹಕಗಳು. ರಾಜಧಾನಿಗೆ ಕೊರೊನಾ ಹಬ್ಬಿಸುವುದು ನಿಮ್ಮ ಉದ್ದೇಶವೇ? ಎಂದು ರಾಜ್ಯ ಬಿಜೆಪಿ ಟ್ವೀಟ್​ ಮೂಲಕ ಪ್ರಶ್ನೆ ಮಾಡಿದೆ.

ಬೆಂಗಳೂರಿಗೆ ನೀರು ಹಂಚುವುದಕ್ಕಾಗಿ ಈ ಪಾದಯಾತ್ರೆ ಎಂದು ಸುಳ್ಳಿನಜಾತ್ರೆ ಮಾಡುತ್ತಿರುವ ಕಾಂಗ್ರೆಸ್, ವಾಸ್ತವದಲ್ಲಿ ಬೆಂಗಳೂರಿಗೆ ಕೊವಿಡ್ ರಫ್ತು ಮಾಡುತ್ತಿದೆ. ಈ ಮೂಲಕ ಕೊವಿಡ್ ಸೋಂಕಿತ ಕಾಂಗ್ರೆಸಿಗರು ಊರಿಗೆಲ್ಲ ಸೋಂಕು ಹಂಚುತ್ತಿದ್ದಾರೆ. ರಾಜ್ಯದಲ್ಲಿ ಕೊವಿಡ್ ಮೂರನೇ ಅಲೆ ಉಲ್ಬಣವಾದರೆ ಕಾಂಗ್ರೆಸ್ ತಬ್ಲಿಘಿಗಳೇ ನೇರ ಹೊಣೆ ಎಂದು ಬಿಜೆಪಿ ಟ್ವೀಟ್​ ಮೂಲಕ ತಿಳಿಸಿದೆ.

ಕಾಂಗ್ರೆಸ್‌ ಪ್ರಾಯೋಜಿತ ಸುಳ್ಳಿನ ಜಾತ್ರೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರಿಗೆ ಕೊವಿಡ್‌ ಸೋಂಕು ದೃಢಪಟ್ಟಿದೆ. ಕಾಂಗ್ರೆಸ್‌ ಬೆಂಗಳೂರಿಗೆ ನೀರು ಕೊಡುತ್ತೇವೆ ಹೇಳಿ, ಈಗ ಬೆಂಗಳೂರಿಗೆ ಕೊವಿಡ್‌ ಸೋಂಕು ಹಂಚುತ್ತಿದೆ. ಡಿಕೆಶಿ ಅವರೇ, ಕೋವಿಡ್‌ಯಾತ್ರೆ ಮುಂದುವರೆಸಿ ಬೆಂಗಳೂರನ್ನು ಕೊವಿಡ್‌ ಹಬ್‌ ಮಾಡುವ ಯೋಜನೆಯಿದೆಯೇ? ಎಂದು ರಾಜ್ಯ ಬಿಜೆಪಿ ಟ್ವೀಟ್​ ಮಾಡಿದೆ.

ಇದನ್ನೂ ಓದಿ: ಉತ್ತರ ಕನ್ನಡದ ಜೀವಸೆಲೆ ಅಘನಾಶಿನಿ ಆಪತ್ತಿನಲ್ಲಿದೆ: ಹೆಚ್​ಡಿ ಕುಮಾರಸ್ವಾಮಿ ಟ್ವೀಟ್

ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಎಚ್ ಎಮ್ ರೇವಣ್ಣಗೆ ಕೊವಿಡ್ ಪಾಸಿಟಿವ್

Published On - 1:25 pm, Tue, 11 January 22

Click on your DTH Provider to Add TV9 Kannada