ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಎಚ್ ಎಮ್ ರೇವಣ್ಣಗೆ ಕೊವಿಡ್ ಪಾಸಿಟಿವ್
ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಎಚ್ ಎಮ್ ರೇವಣ್ಣಗೆ ಕೊರೊನಾ ಸೋಂಕು ತಗುಲಿದೆ. ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರೇವಣ್ಣಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು: ಮೇಕೆದಾಟು ಯೋಜನೆ ಆಗ್ರಹಿಸಿ ಕರ್ನಾಟಕ ಕಾಂಗ್ರೆಸ್ ನಾಯಕರು ಜನವರಿ 9ರಿಂದ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ ಕಠಿಣ ನಿಯಮ ಜಾರಿಯಲ್ಲಿದ್ದರೂ ಲೆಕ್ಕಿಸದ ಕಾಂಗ್ರೆಸ್ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಬಂದು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಸರ್ಕಾರ ಕೊರೊನಾ ಸೋಂಕಿನ ಬಗ್ಗೆ ಎಚ್ಚರಿಕೆ ನೀಡಿದ್ದರೂ ಲೆಕ್ಕಿಸದ ನಾಯಕರು ಪಾದಯಾತ್ರೆ ಮುಂದುವರಿಸಿದ್ದಾರೆ. ಹೀಗೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಎಚ್ ಎಮ್ ರೇವಣ್ಣಗೆ ಕೊರೊನಾ ಸೋಂಕು ತಗುಲಿದೆ. ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರೇವಣ್ಣಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕೊವಿಡ್ ನಿಯಮಗಳನ್ನ ಉಲ್ಲಂಘಿಸಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸುಮಾರು 41 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಾತನೂರು ಪೊಲೀಸ್ ಠಾಣೆಯಲ್ಲಿ ಕನಕಪುರ ತಹಶೀಲ್ದಾರ್ ವಿಶ್ವನಾಥ್ ದೂರು ಆಧರಿಸಿ ಎ1 ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎ2 ಡಿ.ಕೆ.ಸುರೇಶ್, ಎ3 ಕೃಷ್ಣ ಭೈರೇಗೌಡ, ಎ4 ಆಂಜನೇಯ, ಎ5 ನಾರಾಯಣಸ್ವಾಮಿ, ಎ6 ಮೋಟಮ್ಮ, ಎ7 ಪಿ.ಟಿ.ಪರಮೇಶ್ವರ್ ನಾಯ್ಕ್, ಎ8 ಆರ್.ಧ್ರುವನಾರಾಯಣ, ಎ9 ಆರ್.ನರೇಂದ್ರ, ಎ10 ಸಿ.ಪುಟ್ಟರಂಗಶೆಟ್ಟಿ, ಎ11 ವೀಣಾ ಅಚ್ಚಪ್ಪ, ಎ12 ಅಂಜಲಿ ನಿಂಬಾಳ್ಕರ್, ಎ13 ಲಕ್ಷ್ಮೀ ಹೆಬ್ಬಾಳ್ಕರ್, ಎ14 ಕೀರ್ತಿರಾಜ್, ಎ15 ಬಿ.ವಿ.ಶ್ರೀನಿವಾಸ್, ಎ16 ಶಿವಣ್ಣ, ಎ17 ಶಿವರಾಜ ತಂಗಡಗಿ, ಎ18 ಮಧು ಬಂಗಾರಪ್ಪ, ಎ19 ಐವನ್ ಡಿಸೋಜಾ, ಎ20 ಕುಸುಮಾ, ಎ21 ಶರತ್ ಬಚ್ಚೇಗೌಡ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇನ್ನು ಎ22 ಪ್ರಿಯಾಕೃಷ್ಣ, ಎ23 ಸಲೀಂ ಅಹ್ಮದ್, ಎ24 ಪದ್ಮಾವತಿ, ಎ25 ರಘುನಂದನ್, ಎ26 ಕೆಂಪರಾಜ್, ಎ27 ವಿನಯ್ ಕುಲಕರ್ಣಿ, ಎ28 ಎಂ.ಬಿ.ಪಾಟೀಲ್, ಎ29 ಡಾ.ರಂಗನಾಥ್, ಎ30 ಉಮಾಶ್ರೀ, ಎ31 ಪ್ರಿಯಾಂಕ್ ಖರ್ಗೆ, ಎ32 ಈಶ್ವರ ಖಂಡ್ರೆ, ಎ33 ಎಸ್.ರವಿ, ಎ34 ನಲಪಾಡ್ ಹ್ಯಾರಿಸ್, ಎ35 ಟಿ.ಬಿ.ಜಯಚಂದ್ರ, ಎ36 ಬಿ.ಕೆ.ಹರಿಪ್ರಸಾದ್, ಎ37 ಕೃಷ್ಣಮೂರ್ತಿ, ಎ38 ವಿಜಯ್ ದೇವ್, ಎ39 ಸತೀಶ್ ಜಾರಕಿಹೊಳಿ, ಎ40 ರಿಜ್ವಾನ್ ಅರ್ಷದ್ ಮತ್ತು ಎ41 ಇತರೆ ಎಂದು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ
Published On - 12:38 pm, Tue, 11 January 22