ಉತ್ತರ ಕನ್ನಡದ ಜೀವಸೆಲೆ ಅಘನಾಶಿನಿ ಆಪತ್ತಿನಲ್ಲಿದೆ: ಹೆಚ್​ಡಿ ಕುಮಾರಸ್ವಾಮಿ ಟ್ವೀಟ್

ನದಿಗಳನ್ನು ಉಳಿಸಿಕೊಳ್ಳುವುದರ ಜತೆಗೆ, ಆ ನದಿಗಳ ನೀರನ್ನು ಬದುಕಿಗೆ ಬಳಸಿಕೊಳ್ಳುವ ಶುಭಸಂಕಲ್ಪದೊಂದಿಗೆ ನಾವು ಜನತಾ ಜಲಧಾರೆ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಟ್ವೀಟ್​ ಮೂಲಕ ಹೇಳಿದ್ದಾರೆ.

ಉತ್ತರ ಕನ್ನಡದ ಜೀವಸೆಲೆ ಅಘನಾಶಿನಿ ಆಪತ್ತಿನಲ್ಲಿದೆ: ಹೆಚ್​ಡಿ ಕುಮಾರಸ್ವಾಮಿ ಟ್ವೀಟ್
ಜೆಡಿಎಸ್ ನಾಯಕ ಹೆಚ್​.ಡಿ. ಕುಮಾರಸ್ವಾಮಿ

ಬೆಂಗಳೂರು: ರಾಜ್ಯದ ಅತ್ಯಂತ ಸೂಕ್ಷ್ಮನದಿ, ಅಪರೂಪದ ಜೀವವೈವಿಧ್ಯತೆ ಒಡಲು ಅಘನಾಶಿನಿ (Aghanashini River) ಉಳಿವಿಗಾಗಿ ವಿಜಯ ಕರ್ನಾಟಕ ಪತ್ರಿಕೆಯ ಸರಣಿ ವರದಿಗಾರಿಕೆ ಶ್ಲಾಘನೀಯ. ನೆಲ-ಜಲದ ಬಗ್ಗೆ ಕಾಳಜಿಯುಳ್ಳ ಇಂಥ ಜಾಗೃತ ಬರಹಗಳು ಎಲ್ಲರ ಕಣ್ತೆರೆಸುವುದರ ಜತೆಗೆ ನದಿಗಳು ಮತ್ತು ಜಲಮೂಲಗಳನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ದಾರಿದೀಪಗಳೇ ಸರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ (HD Kumaraswamy) ಸರಣಿ ಟ್ವೀಟ್​ ಮಾಡಿದ್ದಾರೆ.

ಉತ್ತರ ಕನ್ನಡದ ಜೀವಸೆಲೆ ಅಘನಾಶಿನಿ ಆಪತ್ತಿನಲ್ಲಿದೆ. ಆ ನದಿ ಉಳಿಸಿಕೊಳ್ಳುವ ಬಗ್ಗೆ ಒಟ್ಟಾಗಿ ಹೋರಾಡಬೇಕಿದೆ. ಈ ಪ್ರಯತ್ನಕ್ಕೆ ನನ್ನ ಮತ್ತು ಜೆಡಿಎಸ್‌ ಪಕ್ಷದ ಬೆಂಬಲ ಇದೆ. ನದಿಗಳನ್ನು ಉಳಿಸಿಕೊಳ್ಳುವುದರ ಜತೆಗೆ, ಆ ನದಿಗಳ ನೀರನ್ನು ಬದುಕಿಗೆ ಬಳಸಿಕೊಳ್ಳುವ ಶುಭಸಂಕಲ್ಪದೊಂದಿಗೆ ನಾವು ಜನತಾ ಜಲಧಾರೆ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಟ್ವೀಟ್​ ಮೂಲಕ ಹೇಳಿದ್ದಾರೆ.

ಸ್ಥಳೀಯರ ಜೀವನಾಧಾರವಾಗಿದ್ದ ಚಿಪ್ಪಿಕಲ್ಲಿನ ಅಂಕೆ ಇಲ್ಲದ ಗಣಿಗಾರಿಕೆ ಅಘನಾಶಿನಿಯ ಅಸ್ತಿತ್ವಕ್ಕೇ ಧಕ್ಕೆ ತಂದಿದೆ. ಇಂಥ ನದಿಯನ್ನು ಕಳೆದುಕೊಂಡರೆ ಅದೊಂದು ರಾಷ್ಟ್ರೀಯ ದುರಂತವೇ ಹೌದು. ಸರಕಾರ ಕೂಡಲೇ ಅಘನಾಶಿನಿ ರಕ್ಷಣೆಗೆ ಅತ್ಯುನ್ನತ ಕಾರ್ಯಪಡೆ ರಚಿಸಿ ನದಿ ಉಳಿವಿಗೆ ವಿಜ್ಞಾನಿಗಳು ನೀಡಿರುವ ವರದಿಗಳನ್ನು ಪರಿಗಣಿಸಿ ಕ್ರಮ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ರಾಜ್ಯದಲ್ಲಿ ಅತಿ ವಿಶಾಲ ಅಳಿವೆಯುಳ್ಳ, ಅತ್ಯಂತ ಶುದ್ಧ ನದಿಯಾದ ಅಘನಾಶಿನಿಯನ್ನು ಉಳಿಸಲೇಬೇಕು. ಇಲ್ಲಿ ನಡೆಯುತ್ತಿರುವ ಚಿಪ್ಪಿಕಲ್ಲು ಗಣಿಗಾರಿಕೆಯನ್ನು ಸಂಪೂರ್ಣ ನಿಲ್ಲಿಸಬೇಕು ಎಂಬುವುದು ಸರಕಾರಕ್ಕೆ ನನ್ನ ಆಗ್ರಹ. ಈ ಹೋರಾಟದಲ್ಲಿ ನಾನೂ ಅಘನಾಶಿನಿಯ ದನಿಯಾಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:

HD Kumaraswamy: ಮೇಕೆದಾಟು ಪಾದಯಾತ್ರೆ ನಾವು ಪ್ಲಾನ್‌ ಮಾಡಿದ್ದನ್ನೇ ಅವರು ಶುರು ಮಾಡಕೊಂಡ್ರು -ಹೆಚ್‌ಡಿ ಕುಮಾರಸ್ವಾಮಿ

Kameng River: ನಿಗೂಢವಾಗಿ ಕಪ್ಪು ಬಣ್ಣಕ್ಕೆ ತಿರುಗಿದ ಕಮೆಂಗ್ ನದಿ; ಸಾವಿರಾರು ಮೀನುಗಳು ಸಾವು

Published On - 9:41 am, Tue, 11 January 22

Click on your DTH Provider to Add TV9 Kannada