ಬಾಲಕರ ವಸತಿ ನಿಲಯದ ಸುತ್ತಮುತ್ತ ಬಿಯರ್ ಬಾಟಲ್​ಗಳ ರಾಶಿ; ಬೆಂಗಳೂರು ವಿಶ್ವವಿದ್ಯಾಲಯದಲ್ಲಿನ ಈ ಸ್ಥಿತಿಗೆ ಯಾರು ಹೊಣೆ?

ಅಧಿಕಾರಿಗಳು ಒಂದು ಕಡೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಇನ್ನೊಂದು ಕಡೆ ಜನ ಸಾಮಾನ್ಯರು, ಯುವಕರು ಸುತ್ತಮುತ್ತಲ್ಲ ಪರಿಸರ ಸ್ವಚ್ಛವಾಗಿಟ್ಟುಕೊಳ್ಳದೆ ನಿರ್ಲಕ್ಷಿಸಿದ್ದಾರೆ. ಇದಕ್ಕೆ ನಿದರ್ಶನ ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿನ ಸುತ್ತಮುತ್ತಲ ಪರಿಸರ.

ಬಾಲಕರ ವಸತಿ ನಿಲಯದ ಸುತ್ತಮುತ್ತ ಬಿಯರ್ ಬಾಟಲ್​ಗಳ ರಾಶಿ; ಬೆಂಗಳೂರು ವಿಶ್ವವಿದ್ಯಾಲಯದಲ್ಲಿನ ಈ ಸ್ಥಿತಿಗೆ ಯಾರು ಹೊಣೆ?
ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿನ ಸುತ್ತಮುತ್ತಲ ಪರಿಸರ
Follow us
TV9 Web
| Updated By: preethi shettigar

Updated on:Jan 11, 2022 | 12:03 PM

ಬೆಂಗಳೂರು: ನಮ್ಮ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ನಾವು ನಮ್ಮ ಪರಿಸರವನ್ನು ಸದಾ ಚೆಂದಗೊಳಿಸಬೇಕು ಎಂದು ಎಷ್ಟೇ ಪಾಠ, ಜಾಗೃತಿ, ಬೀದಿ ನಾಟಕಗಳನ್ನು ಮಾಡಿದರೂ ಜನರಲ್ಲಿ ಸ್ವಲ್ಪವೂ ಈ ಬಗ್ಗೆ ಕಾಳಜಿ ಇದ್ದಂತೆ ಕಾಣುತ್ತಿಲ್ಲ. ಎಲ್ಲೆಂದರಲ್ಲಿ ಕಸ (Garbage) ಹಾಕುವುದು, ತ್ಯಾಜ್ಯ ವಿಲೇವಾರಿ ಮಾಡದೆ ನಿರ್ಲಕ್ಷ್ಯವಹಿಸುವುದು ಸರ್ವೆ ಸಾಮಾನ್ಯ ಎನ್ನುವಂತಾಗಿದೆ. ಅಧಿಕಾರಿಗಳು ಒಂದು ಕಡೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಇನ್ನೊಂದು ಕಡೆ ಜನ ಸಾಮಾನ್ಯರು, ಯುವಕರು ಸುತ್ತಮುತ್ತಲ್ಲ ಪರಿಸರ ಸ್ವಚ್ಛವಾಗಿಟ್ಟುಕೊಳ್ಳದೆ ನಿರ್ಲಕ್ಷಿಸಿದ್ದಾರೆ. ಇದಕ್ಕೆ ನಿದರ್ಶನ ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿನ (Bengaluru University) ಸುತ್ತಮುತ್ತಲ ಪರಿಸರ.

ಪಶ್ಚಿಮ ಘಟ್ಟಗಳು ಟ್ವಿಟರ್​​ ಖಾತೆ ಈ ಕುರಿತು ಟ್ವೀಟ್​ ಮಾಡಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿರುವ ಬಾಲಕರ ವಿದ್ಯಾರ್ಥಿ ನಿಲಯದ ಸುತ್ತಮುತ್ತಲಿನ ಪರಿಸರದ ಸ್ಥಿತಿಗತಿಯ ಬಗ್ಗೆ ಆ ಮೂಲಕ ಬೆಳಕು ಚೆಲ್ಲಿದೆ. ಟ್ವೀಟ್​ನಲ್ಲಿ ಬಾಲಕರ ವಸತಿ ನಿಲಯದ ಸುತ್ತ ಬಿಯರ್​ ಬಾಟಲ್​, ಪ್ಲಾಸ್ಟಿಕ್​ ಮತ್ತು ಇನ್ನಿತರ ತ್ಯಾಜ್ಯಗಳು ಹೇಗೆ ರಾಶಿ ಹಾಕಲಾಗಿದೆ ಎನ್ನುವುದನ್ನು ಫೋಟೋ ಸಮೇತ ಹಂಚಿಕೊಳ್ಳಲಾಗಿದೆ. ಜತೆಗೆ ಟ್ವೀಟ್​ನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತಾ, ಸಚಿವ ಅಶ್ವತ್​ ನಾರಾಯಣ್​ ಮತ್ತು ಇನ್ನಿತರ ಮಾಧ್ಯಮವನ್ನು ಟ್ಯಾಗ್​ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪರಿಸರ ಕಾಳಜಿಯ ಕೊರತೆಯಾದರೆ ಖಂಡಿತಾ ಮುಂದಿನ ದಿನಗಳಲ್ಲಿ ಇದು ದೊಡ್ಡ ಅನಾಹುತಕ್ಕೆ ದಾರಿಯಾಗಲಿದೆ.

ಸಂಶಯಕ್ಕೆ ಕಾರಣವಾದ ನವಿಲಿನ ಗರಿಗಳು ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸತತ ಮೂರನೇ ಬಾರಿಗೆ ನವಿಲಿನ ಗರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಆದರೆ ಈ ಬಗ್ಗೆ ನಿಖರವಾದ ಮಾಹಿತಿ ಇನ್ನು ಲಭ್ಯವಾಗಿಲ್ಲ. ಸದ್ಯ ಈ ಬಗ್ಗೆ  ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿದ್ದು, ಅಧಿಕಾರಿಗಳು ಅದರಲ್ಲೂ ಮುಖ್ಯವಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಪಶ್ಚಿಮ ಘಟ್ಟಗಳು ಟ್ವೀಟ್​ ಮಾಡಿದೆ.

ಇದನ್ನೂ ಓದಿ: ಜಿಲ್ಲಾಸ್ಪತ್ರೆಯ ಐಸಿಯು ವಾರ್ಡ್ ಪಕ್ಕದಲ್ಲೇ ಕಸದ ರಾಶಿ; ಸಿಬ್ಬಂದಿಯ ನಿರ್ಲಕ್ಷದ ವಿರುದ್ಧ ಜನರ ಆಕ್ರೋಶ

ದೊಡ್ಡಬಳ್ಳಾಪುರದಲ್ಲಿ ಅವೈಜ್ಞಾನಿಕ ಘನತ್ಯಾಜ್ಯ ಘಟಕ: ವಿಧಾನಸಭೆಯಲ್ಲಿ ಶಾಸಕ ವೆಂಕಟರಮಣಯ್ಯ ತೀವ್ರ ಆಕ್ಷೇಪ

Published On - 11:55 am, Tue, 11 January 22