AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಲ್ಲಾಸ್ಪತ್ರೆಯ ಐಸಿಯು ವಾರ್ಡ್ ಪಕ್ಕದಲ್ಲೇ ಕಸದ ರಾಶಿ; ಸಿಬ್ಬಂದಿಯ ನಿರ್ಲಕ್ಷದ ವಿರುದ್ಧ ಜನರ ಆಕ್ರೋಶ

ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಐಸಿಯು ವಾರ್ಡ್ ಪಕ್ಕದಲ್ಲೇ ಕಸದ ರಾಶಿ ಕಂಡುಬಂದಿದ್ದು, ಪಿಪಿಇ ಕಿಟ್ ಸೇರಿ ಎಲ್ಲಾ ರೀತಿಯ ಕಸವನ್ನು ವಾರ್ಡ್‌ ಪಕ್ಕದಲ್ಲೇ ರಾಶಿ ಹಾಕಲಾಗಿದೆ. ಕೊವಿಡ್ ವಾರ್ಡ್​ ಪಕ್ಕದಲೇ ಈ ರೀತಿಯ ಅವ್ಯವಸ್ಥೆ ಕಂಡುಬಂದಿದೆ.

ಜಿಲ್ಲಾಸ್ಪತ್ರೆಯ ಐಸಿಯು ವಾರ್ಡ್ ಪಕ್ಕದಲ್ಲೇ ಕಸದ ರಾಶಿ; ಸಿಬ್ಬಂದಿಯ ನಿರ್ಲಕ್ಷದ ವಿರುದ್ಧ ಜನರ ಆಕ್ರೋಶ
ಐಸಿಯು ವಾರ್ಡ್ ಪಕ್ಕದಲ್ಲೇ ಕಸದ ರಾಶಿ
preethi shettigar
|

Updated on:May 15, 2021 | 1:26 PM

Share

ಚಿಕ್ಕಮಗಳೂರು: ಕೊರೊನಾ ಎರಡನೇ ಅಲೆಗೆ ಇಡೀ ದೇಶವೇ ನಲುಗಿ ಹೋಗಿದೆ. ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಆದರೆ ಆಸ್ಪತ್ರೆಯಲ್ಲಿ ಮಾತ್ರ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎನ್ನುವ ಕೂಗು ಕೇಳಿ ಬರುತ್ತಿದ್ದು, ಬೇಡ್ ಮತ್ತು ಆಕ್ಸಿಜನ್​ಗಾಗಿ ಹಾಹಾಕಾರ ಸೃಷ್ಟಿಯಾಗಿದೆ. ಹೀಗಿರುವಾಗಲೇ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯ ಬೆಳಕಿಗೆ ಬಂದಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಐಸಿಯು ವಾರ್ಡ್ ಪಕ್ಕದಲ್ಲೇ ಕಸದ ರಾಶಿ ಕಂಡುಬಂದಿದ್ದು, ಪಿಪಿಇ ಕಿಟ್ ಸೇರಿ ಎಲ್ಲಾ ರೀತಿಯ ಕಸವನ್ನು ವಾರ್ಡ್‌ ಪಕ್ಕದಲ್ಲೇ ರಾಶಿ ಹಾಕಲಾಗಿದೆ. ಕೊವಿಡ್ ವಾರ್ಡ್​ ಪಕ್ಕದಲೇ ಈ ರೀತಿಯ ಅವ್ಯವಸ್ಥೆ ಕಂಡುಬಂದಿದೆ. ಇದನ್ನು ಪ್ರಶ್ನೆ ಮಾಡಿದರೆ ಜಿಲಾಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಸಿಬ್ಬಂದಿಯ ನಿರ್ಲಕ್ಷದ ವಿರುದ್ಧ ಸದ್ಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಪೆಕ್ ಕೊವಿಡ್ ಆಸ್ಪತ್ರೆಯಲ್ಲಿ ನಿಯಮ ಉಲ್ಲಂಘನೆ ಕೊವಿಡ್ ಮೃತ ದೇಹವನ್ನು ಕವರ್ ಮಾಡದೆ ಕುಟುಂಸ್ಥರಿಗೆ ಹಸ್ತಾಂತರ ಮಾಡಿರುವ ಘಟನೆ ರಾಯಚೂರು ಒಪೆಕ್ ಆಸ್ಪತ್ರೆಯಲ್ಲಿ ನಡೆದಿದೆ. ಪಿಪಿಇ ಕಿಟ್ ಸಹ ನೀಡದೆ ಸಂಬಂಧಿಕರೆ ಅಂತ್ಯಸಂಸ್ಕಾರ ಮಾಡುವಂತೆ ಸಿಬ್ಬಂದಿ ಶವ ಒಪ್ಪಿಸಿದ್ದು, ಬಳಿಕ ಮೃತ ಸೊಂಕಿತನ ಸಂಬಂಧಿಕರು ಕ್ರೂಸರ್ ವಾಹನದಲ್ಲಿ ಶವ ಸಾಗಣೆ ಮಾಡಿದ್ದಾರೆ. ಕೊರೊನಾ ಸೊಂಕಿತರು ಮನೆಯಲ್ಲೆ ಸತ್ರು ಪರವಾಗಿಲ್ಲ. ಓಪೆಕ್ ಕೊವಿಡ್ ಆಸ್ಪತ್ರೆಗೆ ಬರಬೇಡಿ ಎಂದು ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ.

ಸೊಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಲು ವೈದ್ಯರು ಬರುತ್ತಿಲ್ಲವೆಂದು ಆರೋಪಿಸಿರುವ ರೋಗಿಗಳು. ಕೇವಲ ನರ್ಸ್​ ಮತ್ತು ಕಂಪೌಂಡರಗಳ ಮೇಲೆ ಆಸ್ಪತ್ರೆ ನಡೆಸಲಾಗುತ್ತಿದೆ. ಓಪೆಕ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಕೆಟ್ಟರು ದುರಸ್ತಿ ಮಾಡೊರಿಲ್ಲವೆಂದು ಎಂದು ಆರೋಪ ಮಾಡಲಾಗಿದೆ. ಅಲ್ಲದೇ ಇದೇ ರೀತಿ ಪಿಪಿಇ ಕಿಟ್ ಇಲ್ಲದೇ 14 ಸೊಂಕಿತರ ಶವ ಸಾಗಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿನ ಕೊವಿಡ್ ವಾರ್ಡ್​ನಲ್ಲಿ ನೀರಿಗಾಗಿ ಹಾಹಾಕಾರ: ಕುಂದಾನಗರಿ ಇದೀಗ ಕೊರೊನಾ ನಗರಿಯಾಗಿ ಮಾರ್ಪಡುತ್ತಿದ್ದು, ಇಲ್ಲಿನ ಎಲ್ಲಾ ಆಸ್ಪತ್ರೆಗಳು ಹೌಸ್​ಫುಲ್ ಆಗಿವೆ. ಆಕ್ಸಿಜನ್ ಬೆಡ್​ಗಳು ಸಿಗದೆ ನಿತ್ಯವೂ ಜನ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಇಲ್ಲಿ ಕುಡಿಯಲು ನೀರಿಲ್ಲ, ತೊಳೆದುಕೊಳ್ಳಲು ನೀರಿಲ್ಲ ಎನ್ನುವಂತಾಗಿದ್ದು, ರೋಗಿಗಳು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಸಾಮಾನ್ಯವಾಗಿ ರೋಗಿಗಳೊಂದಿಗೆ ಬಂದವರೇ ಕುಡಿಯಲು ನೀರಿನ ಬಾಟಲ್ ಹಿಡಿದುಕೊಂಡು ಬರುತ್ತಿದ್ದಾರೆ. ಆದ್ರೇ ಕೊವಿಡ್ ರೋಗಿಗಳಿಗೆ ಯಾರು ಅಟೆಂಡರ್ ಕೂಡ ಇರಲ್ಲ. ಹತ್ತಿರಕ್ಕೆ ಯಾರು ಬರಲ್ಲ ಈ ಸಂದರ್ಭದಲ್ಲಿ ಎಲ್ಲಾ ವ್ಯವಸ್ಥೆ ಮಾಡಬೇಕಿದ್ದ ಬಿಮ್ಸ್ ಆಸ್ಪತ್ರೆ ಮಾತ್ರ ಕೊರೊನಾ ರೋಗಿಗಳನ್ನ ಸಾವಿನ ಕೂಪಕ್ಕೆ ತಳ್ಳುತ್ತಿದೆ ಕೊರೊನಾ ಸೋಂಕಿತತು ತಿಳಿಸಿದ್ದಾರೆ.

ಇದನ್ನೂ ಓದಿ:

ಆಕ್ಸಿಜನ್ ಆಯ್ತು ಇದೀಗ ಜೀವ ಜಲಕ್ಕಾಗಿ ಹಾಹಾಕಾರ‌; ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಕುಡಿಯಲು ನೀರು ಸಿಗದೆ ಪರದಾಟ

20 ವರ್ಷಗಳ ಕಾಲ ನಿಷ್ಕ್ರಿಯವಾಗಿದ್ದ ಬ್ರಿಟಿಷರ ಕಾಲದ ಆಸ್ಪತ್ರೆ ಕೊರೊನಾ ಕೇರ್ ಸೆಂಟರ್ ಆಗಲಿದೆ.!

Published On - 12:51 pm, Sat, 15 May 21