ಬೆಂಗಳೂರಿಗೆ ಲಾಕ್ಡೌನ್ ಅನಿವಾರ್ಯ ಎಂಬ ಪರಿಸ್ಥಿತಿ ಬಂದೇಬಿಡ್ತಾ? ಯಾವ ಏರಿಯಾದಲ್ಲಿ ಕೋವಿಡ್ ಆರ್ಭಟ ಇದೆ? ವಿವರ ಇಲ್ಲಿದೆ

ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಲೇ ಮುಂದೆ ನುಗ್ಗಿದೆ. ಪಾಸಿಟಿವಿಟಿ ರೇಟ್ 13% ಕ್ಕೆ ಏರಿಕೆಯಾಗಿದೆ. ನಿನ್ನೆ 70 ಸಾವಿರ ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಈ ಪೈಕಿ 9221 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಬೆಂಗಳೂರಿನಲ್ಲಿ ಬರೋಬ್ಬರಿ 50 ಸಾವಿರ ಆಕ್ಟಿವ್ ಕೊರೊನಾ ಕೇಸ್ಗಳಿವೆ.

ಬೆಂಗಳೂರಿಗೆ ಲಾಕ್ಡೌನ್ ಅನಿವಾರ್ಯ ಎಂಬ ಪರಿಸ್ಥಿತಿ ಬಂದೇಬಿಡ್ತಾ? ಯಾವ ಏರಿಯಾದಲ್ಲಿ ಕೋವಿಡ್ ಆರ್ಭಟ ಇದೆ? ವಿವರ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 11, 2022 | 9:16 AM

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪರಿಸ್ಥಿತಿ ಕಳವಳಕಾರಿಯಾಗಿದೆ. ನಾಡಿನ ಮುಖ್ಯಮಂತ್ರಿಗೇ ಕೊರೊನಾ ಬಂದಿದ್ದು, ರಾಜಧಾನಿಯ ಪರಿಸ್ಥಿಯೂ ಆತಂಕಕಾರಿಯಾಗಿದೆ. ಇಡೀ ರಾಜ್ಯದಲ್ಲಿ ಕೊರೊನಾ ಹೇಗಿದೆ ಎಂದು ನೋಡಿದಾಗ ಬೆಂಗಳೂರಿನಲ್ಲಿಯೇ ಸೋಂಕು ಪ್ರಮಾಣ ಅಧಿಕವಾಗಿದೆ. ಅದರಲ್ಲೂ ಮಹಾದೇವಪುರ ವಿಧಾನಸಭಾ ಕ್ಷೇತ್ರವೇ ಕೋವಿಡ್ ಟಾಪ್ ಒನ್ ಕ್ಷೇತ್ರವಾಗಿದೆ. 5,792 ಆಕ್ಟಿವ್ ಕೇಸ್ ಗಳು ಈ ಕ್ಷೇತ್ರದಲ್ಲಿವೆ. ಟಾಪ್ ಸೆಕೆಂಡ್ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವಾಗಿದೆ (2,635 ಕೇಸುಗಳು). ಈ ಮಧ್ಯೆ ಮಕ್ಕಳನ್ನೂ ಹೆಚ್ಚಾಗಿ ಬಾಧಿಸುತ್ತಿದೆ ಈ ಮಹಾಮಾರಿ ಕೊರೊನಾ. ಇದನ್ನೆಲ್ಲಾ ನೋಡಿದರೆ ಬೆಂಗಳೂರಿಗೆ ಲಾಕ್ಡೌನ್ ಅನಿವಾರ್ಯತೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಬನ್ನೀ ಒಂದು ರೌಂಡ್ ರಾಜಧಾನಿ ಸುತ್ತು ಹಾಕೋಣ.

ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಲೇ ಮುಂದೆ ನುಗ್ಗಿದೆ. ಪಾಸಿಟಿವಿಟಿ ರೇಟ್ 13% ಕ್ಕೆ ಏರಿಕೆಯಾಗಿದೆ. ನಿನ್ನೆ 70 ಸಾವಿರ ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಈ ಪೈಕಿ 9221 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಬೆಂಗಳೂರಿನಲ್ಲಿ ಬರೋಬ್ಬರಿ 50 ಸಾವಿರ ಆಕ್ಟಿವ್ ಕೊರೊನಾ ಕೇಸ್ಗಳಿವೆ.

ಬೆಂಗಳೂರಿಗೆ ಲಾಕ್ಡೌನ್ ಅನಿವಾರ್ಯತೆ ಬೀಳುವ ಸಾಧ್ಯತೆ ಹೆಚ್ಚು ಹಾಲಿ ಸೋಂಕಿತರ ಪ್ರಮಾಣ ಏರಿಕೆಯಾದರು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಆದರೆ ಫೆಬ್ರವರಿ ತಿಂಗಳಲ್ಲಿ ನಿತ್ಯ 30-40 ಸಾವಿರ ಸೋಂಕಿತರು ಪತ್ತೆಯಾಗುವ ನಿರೀಕ್ಷೆ ಇದೆ. ಏಕಾಏಕಿ ಹೆಲ್ತ್ ಎಮರ್ಜೆನ್ಸಿ ಬಂದಲ್ಲಿ, ಆರೋಗ್ಯ ವ್ಯವಸ್ಥೆ ಮೇಲೆ ಒತ್ತಡ ಬೀಳವ ಸಾಧ್ಯತೆ ಇದೆ. ಆಸ್ಪತ್ರೆಗೆ ದಾಖಲು, ಸಾವು ನೋವಿನ ಪ್ರಮಾಣ ಏರಿಕೆಯಾಗುವ ಆತಂಕ ಉಂಟಾಗಿದೆ. ಸೋಂಕಿನ ಪ್ರಮಾಣ ಜೊತೆಗೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಏರಿಕೆಯಾದಲ್ಲಿ ಒಂದು ವಾರ ಲಾಕ್ಡೌನ್ ಖಚಿತ. ಪಾಸಿಟಿವಿಟಿ ರೇಟ್ ಏರಿಕೆ ಇರುವ ಜಿಲ್ಲೆಗಳಿಗೂ ಅನ್ವಯ ಆಗುವಂತೆ ಲಾಕ್ಡೌನ್ ಮಾಡುವ ಯೋಚನೆ ಇದೆ. ಬೆಂಗಳೂರನ್ನ ಕೇಂದ್ರೀಕರಿಸಿ ಲಾಕ್ಡೌನ್ ಜಾರಿ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಜನವರಿ ಅಂತ್ಯದವರೆಗೆ ನೈಟ್ ಕರ್ಫ್ಯೂ ಹಾಗೂ ವಿಕೇಂಡ್ ಕರ್ಫ್ಯೂ ಮುಂದುವರೆಯುವ ಸಾಧ್ಯತೆ ಇದೆ.

ಹತ್ತು ದಿನದಲ್ಲಿ ಹತ್ತು ಪಟ್ಟು ಹೆಚ್ಚಾದ ಸೋಂಕು ಜನವರಿ 1 ರಂದು ಬೆಂಗಳೂರಿನಲ್ಲಿ 810 ಸೋಂಕಿತರು ಪತ್ತೆಯಾಗಿದ್ದರು. ನಿನ್ನೆ 9221 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಸೋಂಕಿನ ಪ್ರಮಾಣ ಏರಿಕೆಯಾದ್ರು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಶೇ.1% ರಷ್ಟಿದೆ. ಆದರೆ ಫೆಬ್ರವರಿ ಮೊದಲ ವಾರ ಹಾಗೂ ಎರಡನೇ ವಾರ ನಿರ್ಣಾಯಕ ಎಂದು ತಜ್ಞರು ಎಚ್ಚರಿಸಿದ್ದಾರೆ. ನಿತ್ಯ 30-40 ಸಾವಿರ ಸೋಂಕಿತರು ಪತ್ತೆಯಾಗಲಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.

ಚೈನ್ ಲಿಂಕ್ ಬ್ರೇಕ್ ಮಾಡಲು ಫೆಬ್ರವರಿಯಲ್ಲಿ ಒಂದು ವಾರ ಲಾಕ್ಡೌನ್ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ನೈಟ್ ಕರ್ಫ್ಯೂ, ವಿಕೇಂಡ್ ಕರ್ಫ್ಯೂ ಜಾರಿಯಲ್ಲಿದ್ದು ನಿತ್ಯ 9 ಸಾವಿರ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಸದ್ಯ ಲಾಕ್ಡೌನ್ ಕುರಿತು ತಜ್ಞರು ಹಾಗೂ ಅಧಿಕಾರಿಗಳು ಪೂರ್ವಭಾವಿ ಚರ್ಚೆ ನಡೆಸಿದ್ದಾರೆ. ಕೊರೊನಾ ಕೈಮೀರಿದಾಗ ಸಿಎಂ ಹಾಗೂ ಸಚಿವರಿಂದ ಅಂತಿಮವಾಗಿ ನಿರ್ಧಾರ ಮಾಡಲಿದ್ದಾರೆ. ಸದ್ಯ ಈಗ ಲಾಕ್ಡೌನ್ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಮಾಡಿಲ್ಲ.

ಬೆಂಗಳೂರು ನಗರದಲ್ಲಿ ಕೊರೊನಾದಿಂದ ಮಕ್ಕಳಿಗೆ ಕಂಟಕ ಕೇವಲ ಐದೇ ದಿನದಲ್ಲಿಯೇ 5,263 ಮಕ್ಕಳಿಗೆ ಕೊರೊನಾ ತಗುಲಿದೆ. ಜನವರಿ 5ರಿಂದ 19ರವರೆಗೆ 5,263 ಮಕ್ಕಳಿಗೆ ಕೊರೊನಾ ಪಾಸಿಟಿವ್ ಆಗಿದೆ. 1ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ರಜೆ ನೀಡಲಾಗಿದೆ. ಆದ್ರೆ ಮನೆಯಲ್ಲಿದ್ದರೂ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. 3ನೇ ಅಲೆಯಲ್ಲಿ ಮಕ್ಕಳಿಗೆ ಅತಿ ಹೆಚ್ಚು ಸೋಂಕು ಪತ್ತೆಯಾಗುತ್ತಿದ್ದು ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಜನವರಿ 1ರಂದು ನಗರದಲ್ಲಿ ಕೇವಲ 99 ಮಕ್ಕಳಿಗೆ ಸೋಂಕು ತಗುಲಿತ್ತು ಆದರೆ ಈಗ 5,263 ಮಕ್ಕಳಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.

ಯಾವ ಯಾವ ಕ್ಷೇತ್ರಗಳಲ್ಲಿ ಕೊರೊನಾ ಹೇಗಿದೆ ಇನ್ನು ಮಹದೇವಪುರ ಕ್ಷೇತ್ರದಲ್ಲೇ ಅತಿ ಹೆಚ್ಚು ಸಕ್ರಿಯ ಪ್ರಕರಣಗಳು ಪತ್ತೆಯಾಗುತ್ತಿವೆ. ಬೆಂಗಳೂರು ದಕ್ಷಿಣ ಕ್ಷೇತ್ರ ನಗರದಲ್ಲಿ 2ನೇ ಸ್ಥಾನದಲ್ಲಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 5,792 ಸಕ್ರಿಯ ಕೇಸ್ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 2,635 ಸಕ್ರಿಯ ಕೇಸ್ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 2,524 ಸಕ್ರಿಯ ಕೇಸ್ ಸಿ.ವಿ.ರಾಮನ್‌ನಗರ 2,371, ಕೆ.ಆರ್.ಪುರಂನಲ್ಲಿ 2,127 ಕೇಸ್ ಬ್ಯಾಟರಾಯನಪುರ 1,910, ಬಿಟಿಎಂ ಲೇಔಟ್ 1,907 ಕೇಸ್ ಆರ್.ಆರ್.ನಗರ 1,894, ಮಲ್ಲೇಶ್ವರಂ 1,508 ಸಕ್ರಿಯ ಕೇಸ್ ಶಾಂತಿನಗರ 1,495, ಜಯನಗರ 1,215 ಸಕ್ರಿಯ ಪ್ರಕರಣ ಸರ್ವಜ್ಞನಗರ 1,201, ಬಸವನಗುಡಿ 1,065 ಸಕ್ರಿಯ ಕೇಸ್ ಹೆಬ್ಬಾಳ 1,037, ಯಶವಂತಪುರದಲ್ಲಿ 1,031 ಸಕ್ರಿಯ ಕೇಸ್ ಶಿವಾಜಿನಗರ 1,000, ಪದ್ಮನಾಭನಗರ 900 ಸಕ್ರಿಯ ಕೇಸ್ ಗೋವಿಂದರಾಜನಗರ 861, ಗಾಂಧಿನಗರ 844 ಸಕ್ರಿಯ ಕೇಸ್ ಮಹಾಲಕ್ಷ್ಮೀ ಲೇಔಟ್ 843, ವಿಜಯನಗರ 831 ಸಕ್ರಿಯ ಕೇಸ್ ರಾಜಾಜಿನಗರ 815, ಯಲಹಂಕ ಕ್ಷೇತ್ರದಲ್ಲಿ 813 ಸಕ್ರಿಯ ಕೇಸ್ ಚಿಕ್ಕಪೇಟೆ 712, ದಾಸರಹಳ್ಳಿ ಕ್ಷೇತ್ರದಲ್ಲಿ 636 ಸಕ್ರಿಯ ಕೇಸ್ ಪುಲಕೇಶಿನಗರ 426, ಚಾಮರಾಜಪೇಟೆಯಲ್ಲಿ 409 ಸಕ್ರಿಯ ಕೇಸ್

ನಗರದ 10 ವಾರ್ಡ್ಗಳಲ್ಲಿ ಕೊರೊನಾ ಸ್ಫೋಟ ಬರೀ ಏಳುದಿನಲ್ಲಿ ಕೊರೊನಾ ಸೋಂಕಿನ ಪ್ರಮಾಣ 200 ರ ಸಮೀಪ ದಾಟಿದ 10 ವಾರ್ಡ್ಗಳು ಬೆಳ್ಳಂದೂರು ವಾರ್ಡ್ -267 ಬೇಗೂರು -128 ಹಗಂದೂರ್ -127 ದೊಡ್ಡ ನೆಕ್ಕುಂಡಿಯಲ್ಲಿ -106 ವರ್ತೂರು -103 ಹೆಚ್.ಎಸ್.ಆರ್. ಲೇಔಟ್ ಜಲ್ಲಿ -100 ಹೊರಮಾವು -93 ನ್ಯೂ ತಿಪ್ಪಸಾಂದ್ರ -91 ಕೋರಮಂಗಲ -84

ಬೆಂಗಳೂರಿನಲ್ಲಿ ಕೊವಿಡ್ ಕಂಟೇನ್‌ಮೆಂಟ್ ಜೋನ್‌ ಹೆಚ್ಚಳ ಕಂಟೇನ್‌ಮೆಂಟ್ ಜೋನ್‌ಗಳ ಸಂಖ್ಯೆ 412ಕ್ಕೆ ಏರಿಕೆಯಾಗಿದೆ. ಮಹದೇವಪುರ ವಲಯ 142, ಬೊಮ್ಮನಹಳ್ಳಿ ವಲಯ 100 ದಕ್ಷಿಣ ವಲಯದಲ್ಲಿ 49, ಪಶ್ಚಿಮ ವಲಯದಲ್ಲಿ 44 ಜೋನ್ ಪೂರ್ವ ವಲಯದಲ್ಲಿ 33, ಯಲಹಂಕ ವಲಯ 33 ಜೋನ್ ದಾಸರಹಳ್ಳಿ ವಲಯ 6, R.R.ನಗರ ವಲಯದಲ್ಲಿ 4 ಜೋನ್

ಇದನ್ನೂ ಓದಿ: ‘ಈ ಪರಿಸ್ಥಿತಿ ಬರಲಿದೆ ಎಂಬುದನ್ನು ಮೊದಲೇ ನಿರೀಕ್ಷಿಸಿದ್ದೆವು; ‘ಕೆಜಿಎಫ್​ 2’ ರಿಲೀಸ್​ ಬಗ್ಗೆ ಯಶ್ ಮಾತು

Published On - 8:35 am, Tue, 11 January 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ