ಬೆಂಗಳೂರಿನಲ್ಲಿ ಪೊಲೀಸರಿಗೆ ಚಾಕು ಇರಿದು ಪರಾರಿ ಆಗಲು ಯತ್ನಿಸಿದ ರೌಡಿಶೀಟರ್ ಮೇಲೆ ಫೈರಿಂಗ್

ಪರಾರಿಯಾಗಲು ಯತ್ನಿಸಿದ ರೌಡಿಶೀಟರ್ ಮೇಲೆ ಗುಂಡು ಹಾರಿಸಿದ ಘಟನೆ ಬೆಂಗಳೂರಿನ ಹೊಸಕೆರೆಹಳ್ಳಿ ಕೆರೆ ಕೋಡಿಯ ಬಳಿ ನಡೆದಿದೆ. ಆರೋಪಿ ಬಂಧನಕ್ಕೆ ತೆರಳಿದ್ದ ವೇಳೆ ಪಿಸಿ ಮೋಹನ್ಗೆ ಚಾಕು ಇರಿದು ಪರಾರಿಯಾಗಲು ಯತ್ನಿಸಿದ್ದ.

ಬೆಂಗಳೂರಿನಲ್ಲಿ ಪೊಲೀಸರಿಗೆ ಚಾಕು ಇರಿದು ಪರಾರಿ ಆಗಲು ಯತ್ನಿಸಿದ ರೌಡಿಶೀಟರ್ ಮೇಲೆ ಫೈರಿಂಗ್
ರೌಡಿಶೀಟರ್ ನರಸಿಂಹ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಪೊಲೀಸ್ (Police) ತುಪಾಯಿ ಸದ್ದು ಮಾಡಿದೆ. ಎಸ್ಕೇಪ್ ಆಗಲು ಯತ್ನಿಸಿದ ರೌಡಿಶೀಟರ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಗಿರಿನಗರ ಪಿಎಸ್ಐ ಸುನೀಲ್ ಎಂಬುವವರು ರೌಡಿಶೀಟರ್ ನರಸಿಂಹ ಅಲಿಯಾಸ್ ನರಸಿಮ್ಮ ರೆಡ್ಡಿ ಮೇಲೆ ಗುಂಡು ಹಾರಿಸಿದ್ದಾರೆ. ಕೊಲೆ, ದರೋಡೆ, ಕಿಡ್ನಾಪ್, ಮನೆಗಳ್ಳತನ ಹೀಗೆ 30 ಕ್ಕೂ ಹೆಚ್ಚು ಪ್ರಕರಣದಲ್ಲಿ ಆರೋಪಿಯಾಗಿದ್ದ ನರಸಿಂಹ ಬಂಧನಕ್ಕೆ ತೆರಳಿದ್ದ ವೇಳೆ ಪರಾರಿಯಾಗಲು ಯತ್ನಿಸಿದ್ದ.

ಪರಾರಿಯಾಗಲು ಯತ್ನಿಸಿದ ರೌಡಿಶೀಟರ್ ಮೇಲೆ ಗುಂಡು ಹಾರಿಸಿದ ಘಟನೆ ಬೆಂಗಳೂರಿನ ಹೊಸಕೆರೆಹಳ್ಳಿ ಕೆರೆ ಕೋಡಿಯ ಬಳಿ ನಡೆದಿದೆ. ಆರೋಪಿ ಬಂಧನಕ್ಕೆ ತೆರಳಿದ್ದ ವೇಳೆ ಪಿಸಿ ಮೋಹನ್ಗೆ ಚಾಕು ಇರಿದು ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚನೆ ನೀಡುತ್ತಾರೆ. ಶರಣಾಗದೆ ಪರಾರಿಗೆ ಯತ್ನಿಸಿದಾಗ ಕಾಲಿಗೆ ಗುಂಡು ಹಾರಿಸಲಾಗಿದೆ. ಗಾಯಾಳು ಪಿಸಿ, ಆರೋಪಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿ ನರಸಿಂಹ 2021 ಅಕ್ಟೋಬರ್ 5ಕ್ಕೆ 2 ಕಾರು ಹಾಗೂ ಒಂದು ಬೈಕ್​ಗೆ ಬೆಂಕಿ‌ ಹಚ್ಚಿದ್ದ.  ಪುರೋಹಿತರಾಗಿದ್ದ ಸುಬ್ಬರಾವ್ ಎಂಬುವವರಿಗೆ ಸೇರಿದ್ದ ಕಾರು ಮತ್ತು ಬೈಕ್​ ಬೆಂಕಿ ಇಟ್ಟಿದ್ದ.  ಅಲ್ಲದೇ ಪಕ್ಕದ ಮನೆಯವರು ನಿಲ್ಲಿಸಿದ್ದ ಬಲಿನೊ ಕಾರಿಗೂ ಬೆಂಕಿ ಅಂಟಿಕೊಂಡಿತ್ತು . ಆಸ್ತಿ ಪತ್ರಗಳನ್ನು‌ ನೀಡುವಂತೆ ಬೆದರಿಸಿದ್ದ. ನೀಡದೇ ಇದ್ದಾಗ ಬೆಂಕಿ‌ ಇಟ್ಟಿದ್ದ.  ಮನೆಗೆ ಬೆಂಕಿ ಇಟ್ಟು ಮನೆ ಮಂದಿಯನ್ನು ಸುಟ್ಟು ಹಾಕಲು ಮುಂದಾಗಿದ್ದ.  ಆದರೆ ಅದು ಸಾಧ್ಯವಾಗದೇ, ವಾಹನಕ್ಕೆ ಬೆಂಕಿ ಇಟ್ಟಿದ್ದ. ಬೆಳಗಿನ ಜಾವ 2.40 ಕ್ಕೆ ಬಂದು ಈತನ ತಂಡ ಕೃತ್ಯ ಎಸಗಿತ್ತು.  ಇದೇ ಕೇಸ್ ಸಂಬಂಧ ಆರೋಪಿ ನರಸಿಂಹ ಬಂಧನಕ್ಕೆ ಗಿರಿನಗರ ಪೊಲೀಸರು ಬಲೆ ಬೀಸಿದ್ದರು.

ಜೆಡಿಎಸ್ ಮುಖಂಡ ನರಸೇಗೌಡ ಮನೆಯಲ್ಲಿ ಕಳವು ತುಮಕೂರಿನ ಜೆಡಿಎಸ್ ಮುಖಂಡ ನರಸೇಗೌಡ ಮನೆಯಲ್ಲಿ ಕಳ್ಳತನವಾಗಿದೆ. ನರಸೇಗೌಡ ಕುಟುಂಬ ಬೆಂಗಳೂರಿಗೆ ತೆರಳಿತ್ತು ಈ ವೇಳೆ ಕಳ್ಳರು ಕೈ ಚಳಕ ತೋರಿಸಿದ್ದಾರೆ. ಮನೆಯಲ್ಲಿದ್ದ ಸುಮಾರು 2.5 ಲಕ್ಷ ರೂ ನಗದು, 500 ಗ್ರಾಂ ಒಡವೆ ಕಳ್ಳತನವಾಗಿದೆ. ಸದ್ಯ ಈ ಪ್ರಕರಣ ಜಯನಗರ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ

ಪಾದಯಾತ್ರೆಯಲ್ಲಿ ಇಂದಿನಿಂದ ಡಿಕೆ ಶಿವಕುಮಾರ್ 3 ದಿನ‌ ಮೌನ! ಸುಪ್ರೀಂಕೋರ್ಟ್​ನಲ್ಲಿಂದು ತಮಿಳುನಾಡು ಮೇಲ್ಮನವಿ ವಿಚಾರಣೆ

Karnataka Weather Today: ಉತ್ತರ ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ; ಒಡಿಶಾ, ಬಂಗಾಳದಲ್ಲಿ ಆರೆಂಜ್ ಅಲರ್ಟ್​ ಘೋಷಣೆ

Published On - 9:02 am, Tue, 11 January 22

Click on your DTH Provider to Add TV9 Kannada