ಮಂಗಳೂರಿನ ಉದ್ಯಮಿ ಬಿ ಆರ್ ಶೆಟ್ಟಿಗೆ ತಪ್ಪದ ಸಂಕಷ್ಟ: 131 ದಶಲಕ್ಷ ಡಾಲರ್ ಕಟ್ಟುವಂತೆ ಸೂಚಿಸಿದ ಲಂಡನ್ ಕೋರ್ಟ್
ಮನವಿಯನ್ನು ಪುರಸ್ಕರಿಸಿರುವ ಲಂಡನ್ ಕೋರ್ಟ್ ಇದೀಗ ಮಂಗಳೂರಿನ ಉದ್ಯಮಿ ಬಿ ಆರ್ ಶೆಟ್ಟಿಗೆ 131 ದಶಲಕ್ಷ ಡಾಲರ್ ಕಟ್ಟುವಂತೆ ಸೂಚಿಸಿದೆ. ಇದರೊಂದಿಗೆ ದಿವಾಳಿಯೆದ್ದಿರುವ ಮಂಗಳೂರಿನ ಬಿ ಆರ್ ಶೆಟ್ಟಿಗೆ ಸಂಕಷ್ಟಗಳ ಸರಮಾಲೆ ಮುಂದುವರಿದಿದೆ. ಇದಕ್ಕೂ ಮುನ್ನ ದುಬೈ ಕೋರ್ಟ್ ಸಹ ಬಾರ್ಕ್ಲೇಸ್ ಕಂಪನಿ ಪರ ಆದೇಶ ನೀಡಿತ್ತು.

ಭಾರತದ ಮಂಗಳೂರಿನ ಉದ್ಯಮಿ ಬಿ ಆರ್ ಶೆಟ್ಟಿ ತಮ್ಮ ಕಂಪನಿಯ ಜೊತೆ 2020ರಲ್ಲಿ ಮಾಡಿಕೊಂಡಿದ್ದ ವಿದೇಶ ವಿನಿಮಯ ಬಿಸಿನೆಸ್ ಅಗ್ರಿಮೆಂಟ್ ಪ್ರಕಾರ (foreign exchange business) ಹಣ ಪಾವಿತಿಸುವಲ್ಲಿ ವಿಫಲವಾಗಿದ್ದಾರೆ. ಹಾಗಾಗಿ ಅವರಿಂದ ಹಣ ಕೊಡಿಸಬೇಕು ಎಂದು ಬಾರ್ಕ್ಲೇಸ್ ಕಂಪನಿ ಲಂಡನ್ ಕೋರ್ಟ್ (London court ) ಮೊರೆ ಹೋಗಿತ್ತು. ಮನವಿಯನ್ನು ಪುರಸ್ಕರಿಸಿರುವ ಲಂಡನ್ ಕೋರ್ಟ್ ಇದೀಗ ಮಂಗಳೂರಿನ ಉದ್ಯಮಿ ಬಿ ಆರ್ ಶೆಟ್ಟಿಗೆ 131 ದಶಲಕ್ಷ ಡಾಲರ್ ಕಟ್ಟುವಂತೆ ಸೂಚಿಸಿದೆ. ಇದರೊಂದಿಗೆ ದಿವಾಳಿಯೆದ್ದಿರುವ ಮಂಗಳೂರಿನ ಬಿ ಆರ್ ಶೆಟ್ಟಿಗೆ (Bavaguthu Raghuram Shetty) ಸಂಕಷ್ಟಗಳ ಸರಮಾಲೆ ಮುಂದುವರಿದಿದೆ. ಇದಕ್ಕೂ ಮುನ್ನ ದುಬೈ ಕೋರ್ಟ್ ಸಹ ಬಾರ್ಕ್ಲೇಸ್ ಕಂಪನಿ ( Barclays) ಪರ ಆದೇಶ ನೀಡಿತ್ತು.
ಉದ್ಯಮಿ ಬಿ ಆರ್ ಶೆಟ್ಟಿ ವಿರುದ್ಧ ಬಾರ್ಕ್ಲೇಸ್ ಕಂಪನಿ ಕಾನೂನು ಸಮರ ಗೆದ್ದಿದ್ದು ಶೆಟ್ಟಿ 131 ದಶಲಕ್ಷ ಡಾಲರ್ ಪಾವತಿ ಮಾಡಬೇಕಿದೆ. ಯುಕೆ ಕೋರ್ಟ್ನಲ್ಲಿ ವಿಚಾರಣೆ ವೇಳೆ ಉದ್ಯಮಿ ಬಿ ಆರ್ ಶೆಟ್ಟಿ ಪರ ವಕೀಲರು ತಮ್ಮ ಕಕ್ಷಿದಾರ ಸಂಸ್ಥೆಯು ಆರ್ಥಿಕವಾಗಿ ಪರದಾಡುತ್ತಿದ್ದಾರೆ (financially paralyzed) ಎಂದು ಅಲವತ್ತುಕೊಂಡಿದ್ದರು. ಹಾಗಾಗಿ ತಮ್ಮ ಕ್ಷಿದಾರ ಸಂಸ್ಥೆಗೆ ಕಾನೂನಾತ್ಮಕವಾಗಿ ವಿನಾಯಿತಿ ನೀಡಬೇಕು ಎಂದು ಮೊರೆಯಿಟ್ಟಿದ್ದರು. ಆದರೆ ಕೋರ್ಟ್ ಶೆಟ್ಟಿ ವಕೀಲರ ಮನವಿಯನ್ನು ಇದೀಗ ತಿರಸ್ಕರಿಸಿದೆ.
ಮಂಗಳೂರಿನ ಉದ್ಯಮಿ, 79 ವರ್ಷದ ಬಿ ಆರ್ ಶೆಟ್ಟಿ ಆರ್ಥಿಕ ದಿವಾಳಿತನಕ್ಕೆ ಗುರಿಯಾಗಿದ್ದು, ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ಅವರು ಸದ್ಯ ಮಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಇರುವ ಬಿ ಆರ್ ಶೆಟ್ಟಿಯ ಖಾತೆಗಳನ್ನು, ಆಸ್ತಿಪಾಸ್ತಿಗಳನ್ನು ಸ್ಥಗಿತಗೊಳಿಸುವಂತೆ ಬಾರ್ಕ್ಲೇಸ್ ಕಂಪನಿ ವಕೀಲರು ಕೋರ್ಟ್ಗೆ ಮೊರೆಯಿಟ್ಟಿದ್ದರು.
ಇದನ್ನೂ ಓದಿ: ಉಡುಪಿ ಜಿಲ್ಲೆಯ ಉಚಿತ ಹೆರಿಗೆ ಆಸ್ಪತ್ರೆಯ ನಿರ್ವಹಣೆಯನ್ನು ಕೈಬಿಟ್ಟ ಬಿ.ಆರ್.ಶೆಟ್ಟಿ; 250 ಸಿಬ್ಬಂದಿ ಬದುಕು ಅತಂತ್ರ
Published On - 1:35 pm, Tue, 11 January 22