ಹಾವೇರಿ: ಎರಡು ಕಾರ್​ಗಳಿಗೆ ಲಾರಿ ಡಿಕ್ಕಿ; ಒಂದೇ ಕುಟುಂಬದ ನಾಲ್ವರು ಸಾವು

ಆಸ್ಪತ್ರೆಗೆ ಸಾಗಿಸುವಾಗ ಮತ್ತಿಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 2 ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಒಂದೇ ಕುಟುಂಬದವರು ಎಂದು ಮಾಹಿತಿ ಲಭ್ಯವಾಗಿದೆ. ರಟ್ಟೀಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹಾವೇರಿ: ಎರಡು ಕಾರ್​ಗಳಿಗೆ ಲಾರಿ ಡಿಕ್ಕಿ; ಒಂದೇ ಕುಟುಂಬದ ನಾಲ್ವರು ಸಾವು
ಎರಡು ಕಾರ್​ಗಳಿಗೆ ಲಾರಿ ಡಿಕ್ಕಿ

ಹಾವೇರಿ: ಎರಡು ಕಾರುಗಳಿಗೆ ಲಾರಿ ಡಿಕ್ಕಿಯಾಗಿ ನಾಲ್ವರು ದುರ್ಮರಣವನ್ನಪ್ಪಿದ ದುರ್ಘಟನೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಕಡೂರು ಬಳಿ ನಡೆದಿದೆ. ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ದುರ್ಮರಣವನ್ನಪ್ಪಿದ್ದಾರೆ. ಮೆಕ್ಕೆಜೋಳ ತುಂಬಿದ್ದ ಲಾರಿ ನಿಯಂತ್ರಣ ತಪ್ಪಿ ಕಾರುಗಳಿಗೆ ಡಿಕ್ಕಿ ಆಗಿದೆ. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಮತ್ತಿಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 2 ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಒಂದೇ ಕುಟುಂಬದವರು ಎಂದು ಮಾಹಿತಿ ಲಭ್ಯವಾಗಿದೆ. ರಟ್ಟೀಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಉಕ್ಕಡಗಾತ್ರಿ ದೇವಸ್ಥಾನಕ್ಕೆ ಹೋಗಿ ವಾಪಸ್ ಆಗ್ತಿದ್ದ ವೇಳೆ ದುರ್ಘಟನೆ ನಡೆದಿದೆ ಎಂದು ಮಾಹಿತಿ ಲಭಿಸಿದೆ. ಘಟನೆಯಲ್ಲಿ ಶಂಕರಗೌಡ ನಾಗಪ್ಪಗೌಡರ (35), ಪುನೀತ್​​​ ಹರಮುಚಡಿ (12), ಶಾಂತಮ್ಮ ಹೊಟ್ಟಿಗೌಡರ (32), ರಘು ಹೊಟ್ಟಿಗೌಡರ (14) ಮೃತ ದುರ್ದೈವಿಗಳು. ಘಟನೆಯಲ್ಲಿ ಒಟ್ಟು ಆರು ಜನರಿಗೆ ಗಾಯವಾಗಿದೆ. ಎರಡು ಕಾರುಗಳಲ್ಲಿ ಹತ್ತು ಜನರು ಸಂಚರಿಸುತ್ತಿದ್ದರು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ರಟ್ಟೀಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ರಟ್ಟೀಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಹಾವೇರಿ: ಈಜಲು ತೆರಳಿದ್ದಾಗ ನೀರುಪಾಲಾಗಿದ್ದ ಯುವಕನ ಶವಪತ್ತೆ

ಈಜಲು ತೆರಳಿದ್ದಾಗ ನೀರುಪಾಲಾಗಿದ್ದ ಯುವಕನ ಶವಪತ್ತೆ ಆಗಿದೆ. ಹಾವೇರಿ ಪುರದ ಓಣಿ ನಿವಾಸಿ ಮಹೇಶ್ (25) ಶವ ಪತ್ತೆ ಆಗಿದೆ. ಹಾವೇರಿ ಜಿಲ್ಲೆ‌ಯ ಸವಣೂರು ತಾಲೂಕಿನ ಕಳಸೂರು ಗ್ರಾಮ ಬಳಿ ವರದಾ ನದಿಗೆ ಈಜಲು ತೆರಳಿದ್ದಾಗ ವ್ಯಕ್ತಿಯೊಬ್ಬ ನೀರುಪಾಲು ಆಗಿದ್ದ. ಸ್ನೇಹಿತರ ಜೊತೆ ನದಿಗೆ ಈಜಲು ತೆರಳಿದ್ದಾಗ ಘಟನೆ ನಡೆದಿತ್ತು. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.

ಯಾದಗಿರಿ: ಸ್ನಾನ ಮಾಡಲು ಕೃಷ್ಣಾ ನದಿಗೆ ತೆರಳಿದ್ದ ಮಹಿಳೆ ನೀರುಪಾಲು

ಸ್ನಾನ ಮಾಡಲು ಕೃಷ್ಣಾ ನದಿಗೆ ತೆರಳಿದ್ದ ಮಹಿಳೆ ನೀರುಪಾಲು ಆದ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಶೆಳ್ಳಗಿ ಬಳಿ ನಡೆದಿದೆ. ಸುರಪುರ ನಿವಾಸಿ ಕಾವೇರಿ (35) ನೀರುಪಾಲಾದ‌ ಮಹಿಳೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಸಾಲ ವಾಪಸ್ ಕೇಳಿದ್ದಕ್ಕೆ ಅನೈತಿಕ ಸಂಬಂಧದ ಅಪಪ್ರಚಾರ; ಇಬ್ಬರು ಮಕ್ಕಳ ಜತೆ ತಾಯಿ ಆತ್ಮಹತ್ಯೆ

ಇದನ್ನೂ ಓದಿ: ಸಮನ್ವಿ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ;​ ಯಮಸ್ವರೂಪಿಯಾಗಿ ಬಂತು ಟಿಪ್ಪರ್​ ಲಾರಿ

Published On - 8:56 pm, Sat, 15 January 22

Click on your DTH Provider to Add TV9 Kannada