Coronavirus cases in India: ದೇಶದಲ್ಲಿ 38,353 ಹೊಸ ಕೊವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಇಳಿಮುಖ

| Updated By: ರಶ್ಮಿ ಕಲ್ಲಕಟ್ಟ

Updated on: Aug 11, 2021 | 10:31 AM

Covid-19: ಸಾಂಕ್ರಾಮಿಕ ರೋಗದ ಆರಂಭದಿಂದ ಸೋಂಕಿತ ಜನರಲ್ಲಿ 3,12,20,981 ರೋಗಿಗಳು ಈಗಾಗಲೇ ಕೊವಿಡ್ -19 ರಿಂದ ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 855,543 ಮಂದಿ ಚೇತರಿಸಿಕೊಂಡಿದ್ದಾರೆ. ಚೇತರಿಕೆಯ ಪ್ರಮಾಣವು ಶೇಕಡಾ 97.45 ಆಗಿದೆ.

Coronavirus cases in India: ದೇಶದಲ್ಲಿ 38,353 ಹೊಸ ಕೊವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಇಳಿಮುಖ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 38,353 ಹೊಸ ಕೊವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು, 497 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿದೆ. ಹೊಸ ಪ್ರಕರಣಗಳೊಂದಿಗೆ ಭಾರತದ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 32,036,511 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,86,351 ಕ್ಕೆ ಇಳಿದಿದ್ದು ಇದು 140 ದಿನಗಳಲ್ಲಿ ಕಡಿಮೆ ಆಗಿದೆ.

ಸಾಂಕ್ರಾಮಿಕ ರೋಗದ ಆರಂಭದಿಂದ ಸೋಂಕಿತ ಜನರಲ್ಲಿ 3,12,20,981 ರೋಗಿಗಳು ಈಗಾಗಲೇ ಕೊವಿಡ್ -19 ರಿಂದ ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 855,543 ಮಂದಿ ಚೇತರಿಸಿಕೊಂಡಿದ್ದಾರೆ. ಚೇತರಿಕೆಯ ಪ್ರಮಾಣವು ಶೇಕಡಾ 97.45 ಆಗಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಕಾರ ಆಗಸ್ಟ್ 10 ರವರೆಗೆ ಒಟ್ಟು 48,50,56,507 ಮಾದರಿಗಳನ್ನು ಪರೀಕ್ಷಿಸಲಾಗಿದೆ.ಅದರಲ್ಲಿ 17,77,962 ಮಾದರಿಗಳನ್ನು ನಿನ್ನೆ ಪರೀಕ್ಷಿಸಲಾಗಿದೆ. ಮಂಗಳವಾರ ಕೇಂದ್ರ ಸರ್ಕಾರವು ದೇಶಾದ್ಯಂತ 37 ಜಿಲ್ಲೆಗಳಲ್ಲಿ ಕಳೆದ ಎರಡು ವಾರದಿಂದ ಕೊವಿಡ್ -19 ಸರಾಸರಿ ದೈನಂದಿನ ಹೊಸ ಪ್ರಕರಣಗಳಲ್ಲಿ ಏರಿಕೆಯ ಪ್ರವೃತ್ತಿಯನ್ನು ತೋರಿಸುತ್ತಿವೆ ಎಂದು ಹೇಳಿದೆ.


ಐದು ರಾಜ್ಯಗಳಲ್ಲಿ ಕೊವಿಡ್ -19 ಹರಡುವ ವೇಗವನ್ನು ಸೂಚಿಸುವ ಸಂತಾನೋತ್ಪತ್ತಿ ಸಂಖ್ಯೆ ಅಥವಾ ಆರ್ ನಂಬರ್ 1 ಕ್ಕಿಂತ ಹೆಚ್ಚಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಉಲ್ಲೇಖಿಸಿದ್ದು ಇದು “ಆತಂಕಕ್ಕೆ ಕಾರಣ” ಎಂದು ಹೇಳಿದರು. ಹಿಮಾಚಲ ಪ್ರದೇಶ, ಪಂಜಾಬ್, ಗುಜರಾತ್, ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಆರ್ ನಂಬರ್ ಜಾಸ್ತಿ ಇದೆ.


1 ಮತ್ತು ಅದಕ್ಕಿಂತ ಕೆಳಗಿನ ಆರ್-ಮೌಲ್ಯವನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ ಅಂದರೆ 100 ಜನರು ಅಷ್ಟೇ ಜನರಿಗೆ ಅಥವಾ ಅದಕ್ಕಿಂತ ಕಡಿಮೆ ಜನರಿಗೆ ಸೋಂಕು ತಗಲಲು ಕಾರಣವಾಗುತ್ತಾರೆ. ಇದು ಹೊಸ ಸೋಂಕುಗಳ ಸಂಖ್ಯೆ ಈಗಿರುವ ಸೋಂಕುಗಳ ಸಂಖ್ಯೆಗಿಂತ ಹೆಚ್ಚಿಲ್ಲ ಎನ್ನುವುದರ ಸೂಚನೆಯಾಗಿದೆ.

ಏತನ್ಮಧ್ಯೆ, ಸುಮಾರು 52 ಕೋಟಿ ಡೋಸ್‌ಗಳನ್ನು ಮಂಗಳವಾರದವರೆಗೆ ಫಲಾನುಭವಿಗಳಿಗೆ ನೀಡಲಾಗಿದೆ. ಸಂಜೆ 7 ಗಂಟೆಗೆ ಸರ್ಕಾರ ಪ್ರಕಟಿಸಿದ ತಾತ್ಕಾಲಿಕ ವರದಿಯ ಪ್ರಕಾರ, 37 ಲಕ್ಷ (37,76,765) ಡೋಸ್‌ಗಳನ್ನು ಮಂಗಳವಾರ ನೀಡಲಾಯಿತು.

ಇದನ್ನೂ ಓದಿ: ಕೊವಿಶೀಲ್ಡ್​-ಕೊವ್ಯಾಕ್ಸಿನ್​ ಲಸಿಕೆಗಳ ಮಿಶ್ರಣ ಕ್ಲಿನಿಕಲ್​ ಪ್ರಯೋಗ, ಅಧ್ಯಯನಕ್ಕೆ ಡಿಸಿಜಿಐ ಅನುಮೋದನೆ..

ಇದನ್ನೂ ಓದಿ: ಭಾರತದ ಶ್ರೀಮಂತ ಹಳ್ಳಿಗಳಿವು: 7600 ಮನೆಗಳ ಈ ಹಳ್ಳಿಯಲ್ಲಿ 5000 ಕೋಟಿ ರೂಪಾಯಿ ಠೇವಣಿ

(India reports 38,353 fresh Covid-19 cases 497 people succumbed as Union health ministry)