ಭಾರತದ ಶ್ರೀಮಂತ ಹಳ್ಳಿಗಳಿವು: 7600 ಮನೆಗಳ ಈ ಹಳ್ಳಿಯಲ್ಲಿ 5000 ಕೋಟಿ ರೂಪಾಯಿ ಠೇವಣಿ

ಭಾರತದ ಗ್ರಾಮವೊಂದರ ಜನರು ಬರೊಬ್ಬರಿ ₹ 5 ಸಾವಿರ ಕೋಟಿ ಬ್ಯಾಂಕ್ ಠೇವಣಿ ಇರಿಸಿದ್ದಾರೆ. ಹಾಗಾದರೆ, ಆ ಗ್ರಾಮ ಯಾವುದು? ಈ ಗ್ರಾಮದ ಜನರು ಯಾವ ವೃತ್ತಿ ಮಾಡಿ ಹಣ ಸಂಪಾದಿಸಿದ್ದರು?

ಭಾರತದ ಶ್ರೀಮಂತ ಹಳ್ಳಿಗಳಿವು: 7600 ಮನೆಗಳ ಈ ಹಳ್ಳಿಯಲ್ಲಿ 5000 ಕೋಟಿ ರೂಪಾಯಿ ಠೇವಣಿ
ಸಾಂದರ್ಭಿಕ ಚಿತ್ರ
Follow us
S Chandramohan
| Updated By: ಆಯೇಷಾ ಬಾನು

Updated on: Aug 11, 2021 | 8:12 AM

ಭಾರತದಲ್ಲಿ ತೀರಾ ಬಡ ಗ್ರಾಮಗಳೂ ಇವೆ. ಅದೇ ವೇಳೆ ಭಾರತ ಮಾತ್ರವಲ್ಲದೇ, ವಿಶ್ವದಲ್ಲೇ ಅತ್ಯಂತ ಶ್ರೀಮಂತ ಎನಿಸುವ ಗ್ರಾಮಗಳೂ ಭಾರತದಲ್ಲಿವೆ. ಭಾರತದ ಗ್ರಾಮವೊಂದರ ಜನರು ಬರೊಬ್ಬರಿ ₹ 5 ಸಾವಿರ ಕೋಟಿ ಬ್ಯಾಂಕ್ ಠೇವಣಿ ಇರಿಸಿದ್ದಾರೆ. ಹಾಗಾದರೆ, ಆ ಗ್ರಾಮ ಯಾವುದು? ಈ ಗ್ರಾಮದ ಜನರು ಯಾವ ವೃತ್ತಿ ಮಾಡಿ ಹಣ ಸಂಪಾದಿಸಿದ್ದರು ಎನ್ನುವ ಕುತೂಹಲ ಮೂಡುವುದು ಸಹಜ. ನಿಮ್ಮ ಕುತೂಹಲವನ್ನು ತಣಿಸುವ ಪ್ರಯತ್ನ ಮುಂದಿನ ಸಾಲುಗಳಲ್ಲಿದೆ. ಭಾರತ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಭಾರತದಲ್ಲಿ ಶೇ 21.1ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಆದರೆ, ಭಾರತದ ಹಳ್ಳಿಯೊಂದು ತನ್ನ ಶ್ರೀಮಂತಿಕೆಯಿಂದ ಈಗ ವಿಶ್ವದ ಗಮನ ಸೆಳೆಯುತ್ತಿದೆ. ಭಾರತದ ಹಳ್ಳಿಯೊಂದು ಭಾರತ ಮಾತ್ರವಲ್ಲ, ಏಷ್ಯಾ ಹಾಗೂ ವಿಶ್ವದಲ್ಲೇ ಶ್ರೀಮಂತ ಗ್ರಾಮ ಎನಿಸಿದೆ.

ಗುಜರಾತ್​ನ ಕಛ್ ಜಿಲ್ಲೆಯಲ್ಲಿರುವ ಮಾದಾಪರ್ ಗ್ರಾಮ ಭಾರತದ ಶ್ರೀಮಂತ ಗ್ರಾಮ. ಈ ಗ್ರಾಮದಲ್ಲಿ 17 ಬ್ಯಾಂಕ್​ಗಳಿವೆ. ಭಾರತದಲ್ಲಿರುವ ಎಲ್ಲ ಪ್ರಮುಖ ಬ್ಯಾಂಕ್​ಗಳೂ ಈ ಗ್ರಾಮದಲ್ಲಿ ತಮ್ಮ ಬ್ಯಾಂಕ್ ಶಾಖೆ ತೆರೆದಿವೆ. ಗ್ರಾಮದಲ್ಲಿ 7,600 ಮನೆಗಳಿದ್ದು ಪ್ರತಿಯೊಂದು ಮನೆಯೂ ತನ್ನದೇ ಆದ ಶ್ರೀಮಂತಿಕೆಯ ಕಥೆಯನ್ನು ಹೊಂದಿದೆ. ಕಛ್ ಜಿಲ್ಲೆಯಲ್ಲಿ ಮಿಸ್ತ್ರಿಗಳು ಸ್ಥಾಪಿಸಿದ್ದ 18 ಗ್ರಾಮಗಳಲ್ಲಿ ಈ ಮಾದಾಪರ್ ಗ್ರಾಮವೂ ಒಂದು.

ಮಾದಾಪರ್ ಗ್ರಾಮಸ್ಥರು ಬರೋಬ್ಬರಿ ₹ 5,000 ಕೋಟಿ ಹಣವನ್ನು ಬ್ಯಾಂಕ್​ಗಳಲ್ಲಿ ಠೇವಣಿ ಇರಿಸಿದ್ದಾರೆ. ಗ್ರಾಮಸ್ಥರ ಸರಾಸರಿ ಬ್ಯಾಂಕ್ ಠೇವಣಿಯು ₹ 15 ಲಕ್ಷ ರೂಪಾಯಿ. ಗ್ರಾಮದಲ್ಲಿ ಸುಸಜ್ಜಿತ ಶಾಲೆ, ಕಾಲೇಜು, ಕೆರೆ, ಜಲಾಶಯ, ಆರೋಗ್ಯ ಕೇಂದ್ರ, ದೇವಾಲಯ, ಗೋಶಾಲೆ ಇದೆ.

ಭಾರತದ ಸಂಪ್ರದಾಯಿಕ ಹಳ್ಳಿಗಳಿಗಿಂತ ಮಾದಾಪರ್ ಗ್ರಾಮ ಸಂಪೂರ್ಣ ಭಿನ್ನವಾಗಿದ್ದು ಹೇಗೆ? ಈ ಗ್ರಾಮವು ಹೇಗೆ ಇಷ್ಟೊಂದು ಶ್ರೀಮಂತವಾಯಿತು? ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡುವುದು ಸಹಜ. ಮಾದಾಪರ್ ಗ್ರಾಮದ ಬಹುತೇಕ ಮನೆಗಳ ಸದಸ್ಯರು ವಿದೇಶಗಳಲ್ಲಿ ವಾಸ ಇದ್ದಾರೆ. ಆಮೆರಿಕ, ಇಂಗ್ಲೆಂಡ್, ಕೆನಡ, ಆಫ್ರಿಕಾ, ಗಲ್ಪ್ ರಾಷ್ಟ್ರ ಸೇರಿದಂತೆ ವಿದೇಶಗಳಲ್ಲಿ ಇಲ್ಲಿನವರು ಕೆಲಸ ಮಾಡುತ್ತಿದ್ದಾರೆ. ಗ್ರಾಮಸ್ಥರ ಪೈಕಿ ಬಹುತೇಕರು ಪಟೇಲ್ ಸಮುದಾಯದವರೇ ಇದ್ದಾರೆ. ಶೇ 65ರಷ್ಟು ಜನರು ಅನಿವಾಸಿ ಭಾರತೀಯರು. ವಿದೇಶಗಳಲ್ಲಿರುವ ಈ ಗ್ರಾಮದ ಜನರು ಗ್ರಾಮದ ತಮ್ಮ ಮನೆಗೆ ದೊಡ್ಡ ಮೊತ್ತದ ಹಣವನ್ನು ಕಳಿಸುತ್ತಾರೆ. ಈ ಗ್ರಾಮದ ಎನ್‌ಆರ್‌ಐಗಳು ಕೋಟಿಗಟ್ಟಲೆ ದುಡಿದ ಬಳಿಕ ಭಾರತಕ್ಕೆ ವಾಪಸ್ ಬಂದು, ಗ್ರಾಮದಲ್ಲೇ ಬ್ಯುಸಿನೆಸ್ ಕೂಡ ಮಾಡುತ್ತಿದ್ದಾರೆ.

ಈ ಗ್ರಾಮದಿಂದ ಲಂಡನ್​ಗೆ ಹೋದವರು, 1968ರಲ್ಲಿ ಲಂಡನ್​ನಲ್ಲಿ ಮಾದಾಪರ್ ವಿಲೇಜ್ ಅಸೋಸಿಯೇಷನ್ ಸ್ಥಾಪಿಸಿಕೊಂಡಿದ್ದಾರೆ. ವಿದೇಶಗಳಲ್ಲಿರುವ ಮಾದಾಪರ್ ಗ್ರಾಮಸ್ಥರು ಈ ವಿಲೇಜ್ ಅಸೋಸಿಯೇಷನ್ ನಡಿ ಲಂಡನ್​ನಲ್ಲಿ ಸಭೆ ಸೇರುತ್ತಾರೆ. ಇದೇ ರೀತಿ ಗ್ರಾಮದಲ್ಲೂ ಒಂದು ಕಚೇರಿ ಹೊಂದಿದ್ದಾರೆ. ಈ ಕಚೇರಿ ಮೂಲಕ ಗ್ರಾಮದಲ್ಲಿರುವ ಜನರು ಹಾಗೂ ವಿದೇಶಗಳಲ್ಲಿರುವ ಜನರ ನಡುವೆ ಸಂಪರ್ಕ ಏರ್ಪಡುವಂತೆ ಮಾಡಿದ್ದಾರೆ.

ಈ ಗ್ರಾಮದ ಬಹುತೇಕರು ವಿದೇಶಗಳಲ್ಲಿದ್ದರೂ, ತಮ್ಮ ಮೂಲ ಗ್ರಾಮವನ್ನು ಮರೆತಿಲ್ಲ. ತಮ್ಮ ಗ್ರಾಮದೊಂದಿಗೆ ಸಂಪರ್ಕ, ಭಾವನಾತ್ಮಕ ಸಂಬಂಧ, ಭಾಂಧವ್ಯವನ್ನು ಉಳಿಸಿ, ಬೆಳೆಸಿಕೊಂಡು ಹೋಗುತ್ತಿದ್ದಾರೆ. ವಿದೇಶಗಳಲ್ಲಿರುವ ಜನರು ತಮ್ಮ ಉಳಿತಾಯದ ಹಣವನ್ನು ವಿದೇಶದ ಬ್ಯಾಂಕ್​ಗಳಲ್ಲಿ ಠೇವಣಿ ಇಡಲು ಬಯಸಲ್ಲ. ತಮ್ಮೂರಿನ ಬ್ಯಾಂಕ್​ಗೆ ವರ್ಗಾಯಿಸಿ, ತಮ್ಮೂರಿನ ಬ್ಯಾಂಕ್​ನಲ್ಲಿ ಠೇವಣಿ ಇಡಲು ಮುಂದಾಗಿದ್ದಾರೆ. ಹೀಗಾಗಿಯೇ ಮಾದಾಪರ್ ಗ್ರಾಮದ ಬ್ಯಾಂಕ್​ಗಳಲ್ಲಿ ₹ 5 ಸಾವಿರ ಕೋಟಿ ಠೇವಣಿ ಹಣ ಸಂಗ್ರಹವಾಗಿದೆ. ಹೆಚ್ಚಿನ ಮೊತ್ತದ ಠೇವಣಿಗೆ ಹೆಚ್ಚಿನ ಬಡ್ಡಿಯನ್ನೂ ಗ್ರಾಮಸ್ಥರು ಪಡೆಯುತ್ತಾರೆ. ಬ್ಯಾಂಕ್​ಗಳು ಕೂಡ ಹೆಚ್ಚಿನ ಹಣ ಠೇವಣಿ ಇಟ್ಟವರಿಗೆ ಹೆಚ್ಚಿನ ಬಡ್ಡಿದರ ನೀಡುತ್ತಿವೆ. ಶೇ 10ರವರೆಗೆ ಬ್ಯಾಂಕ್​ಗಳು ಠೇವಣಿ ಹಣಕ್ಕೆ ಬಡ್ಡಿಯನ್ನು ನೀಡುತ್ತಿವೆ. ಅಂದಹಾಗೆ ಮತ್ತೊಂದು ವಿಷಯ, ಮಾದಾಪರ್ ಗ್ರಾಮದಲ್ಲಿ ಕೃಷಿಯೇ ಪ್ರಧಾನ ವೃತ್ತಿ. ಇಲ್ಲಿನ ಬಹುತೇಕರು, ಕೃಷಿ ಉತ್ಪನ್ನಗಳನ್ನು ಮುಂಬೈಗೆ ರಫ್ತು ಮಾಡುತ್ತಾರೆ.

ಸ್ವಗ್ರಾಮಕ್ಕೆ ಋಣಿ ಗ್ರಾಮಸ್ಥರ ಸ್ವಗ್ರಾಮ ಪ್ರೀತಿಯ ಬಗ್ಗೆ ಪ್ರತಿಕ್ರಿಯಿಸಿದ ಇಂಗ್ಲೆಂಡ್‌ನ ಕಛ್ ಲೇವಾ ಪಟೇಲ್ ಸಮಾಜದ ಮಾಜಿ ಅಧ್ಯಕ್ಷ ಹರಿಭಾಯಿ ಹಲಸಿಯಾ, ‘ವಿದೇಶಗಳಲ್ಲಿರುವ ಜನರು ತಮ್ಮ ಸ್ವಗ್ರಾಮಕ್ಕೆ ಋಣಿಯಾಗಿದ್ದಾರೆ. ಹೀಗಾಗಿ ಸ್ವಗ್ರಾಮದಲ್ಲಿರುವ ಬ್ಯಾಂಕ್​ನಲ್ಲೇ ಹಣ ಠೇವಣಿ ಇಡುತ್ತಾರೆ. ನನ್ನಂಥವರು ಮೂರು ನಾಲ್ಕು ವರ್ಷಗಳಿಗೊಮ್ಮೆ ಗ್ರಾಮಕ್ಕೆ ಬರುತ್ತೇವೆ. ಸ್ವಗ್ರಾಮಕ್ಕೆ ಋಣಸಂದಾಯ ಮಾಡಲು ಬಯಸುತ್ತೇವೆ’ ಎನ್ನುತ್ತಾರೆ.

ಬಾಲಾಡಿಯಾ ಗ್ರಾಮದಲ್ಲಿ ₹ 2 ಸಾವಿರ ಕೋಟಿ ಠೇವಣಿ ಗುಜರಾತ್‌ ರಾಜ್ಯದ ಭುಜ್‌ ಜಿಲ್ಲಾ ಕೇಂದ್ರದಿಂದ ಕೇವಲ 15 ಕಿಲೋಮೀಟರ್ ದೂದಲ್ಲಿರುವ ಬಾಲಾಡಿಯಾ ಗ್ರಾಮ ಕೂಡ ದೇಶದ ಶ್ರೀಮಂತ ಗ್ರಾಮಗಳಲ್ಲಿ ಒಂದು. ಬಾಲಾಡಿಯಾ ಗ್ರಾಮದಲ್ಲಿ 1,292 ಮನೆಗಳಿವೆ. ಗ್ರಾಮದ ಪ್ರತಿಯೊಂದು ಮನೆಯ ಸದಸ್ಯರೂ ಕೂಡ ವಿದೇಶಗಳಲ್ಲಿ ವಾಸ ಇದ್ದಾರೆ. ಹೀಗಾಗಿ ಈ ಗ್ರಾಮದ ಜನರ ಬ್ಯಾಂಕ್ ಠೇವಣಿಯೇ 2 ಸಾವಿರ ಕೋಟಿ ರೂಪಾಯಿಗಿಂತ ಅಧಿಕ ಎಂದು ವರದಿಗಳು ಹೇಳುತ್ತಿವೆ. ಇನ್ನೂ ಕೇರಾ ಗ್ರಾಮದ ಜನರ ಬ್ಯಾಂಕ್ ಠೇವಣಿಯು 2 ಸಾವಿರ ಕೋಟಿ ರೂಪಾಯಿ. ಕೇರಾ ಗ್ರಾಮದಲ್ಲಿ 1,863 ಮನೆಗಳಿವೆ.

ಇನ್ನೂ ಕೆಲ ಗ್ರಾಮಗಳಲ್ಲಿ 100 ರಿಂದ 500 ಕೋಟಿ ರೂಪಾಯಿವರೆಗೂ ಬ್ಯಾಂಕ್ ಠೇವಣಿ ಇದೆ. ನಾನಪುರ, ಸುಖಪಾರಾ, ಸಮತಾರಾ, ಕೊಡಕಿ, ಬಾರಸಾರಾ, ರಾಮಪಾರಾ-ವೆಂಕಾರಾ, ಮಂಕುವಾ ಗ್ರಾಮಗಳ ಜನರು 100 ಕೋಟಿ ರೂಪಾಯಿಯಿಂದ 500 ಕೋಟಿ ರೂಪಾಯಿವರೆಗೂ ಬ್ಯಾಂಕ್ ಠೇವಣಿ ಇಟ್ಟಿದ್ದಾರೆ.

ಇದನ್ನೂ ಓದಿ: ಆರ್​ಡಿಪಿಆರ್, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿಗಳನ್ನು ಕೊರೊನಾ ವಾರಿಯರ್ಸ್ ಎಂದು ಘೋಷಿಸಿದ ಸರ್ಕಾರ

ಇದನ್ನೂ ಓದಿ: Nirmala Sitharaman: ಜುಲೈನಲ್ಲಿ ಮತ್ತೆ 1 ಲಕ್ಷ ಕೋಟಿ ರೂ. ದಾಟಿದ ಜಿಎಸ್​ಟಿ ಸಂಗ್ರಹ; ಚೇತರಿಕೆಯತ್ತ ಆರ್ಥಿಕತೆ ಎಂದ ನಿರ್ಮಲಾ

(Richest Villages of India Madapar Baladia of Gujarat)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ