Coronavirus cases in India: ದೇಶದಲ್ಲಿ 41,195 ಹೊಸ ಕೊವಿಡ್ ಪ್ರಕರಣ ಪತ್ತೆ, 490 ಮಂದಿ ಸಾವು

| Updated By: ರಶ್ಮಿ ಕಲ್ಲಕಟ್ಟ

Updated on: Aug 12, 2021 | 10:26 AM

Covid 19: ಸಕ್ರಿಯ ಪ್ರಕರಣಗಳ ಸಂಖ್ಯೆ 3,87,987 ಕ್ಕೆ ಇಳಿದಿದೆ ಮತ್ತು ಈಗ ಒಟ್ಟು ಪ್ರಕರಣಗಳ ಶೇಕಡಾ 1.21 ರಷ್ಟಿದೆ. ಗುರುವಾರದ ವೇಳೆಗೆ 31,26,0050 ಜನರು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತೋರಿಸಿವೆ.

Coronavirus cases in India: ದೇಶದಲ್ಲಿ 41,195 ಹೊಸ ಕೊವಿಡ್ ಪ್ರಕರಣ ಪತ್ತೆ, 490 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕಳೆದ 24 ಗಂಟೆಗಳಲ್ಲಿ 41,195 ಹೊಸ ಕೊವಿಡ್ ಪ್ರಕರಣ ಪತ್ತೆಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ ಗುರುವಾರ 32,07,7706 ಕ್ಕೆ ಏರಿದೆ. ಬುಧವಾರ 38,353 ಪ್ರಕರಣಗಳು ವರದಿ ಆಗಿತ್ತು. 490 ಜನರು ಕೊವಿಡ್ -19 ಗೆ ಬಲಿಯಾದ ಕಾರಣ ದೈನಂದಿನ ಸಾವಿನ ಸಂಖ್ಯೆ 4,29,669ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 3,87,987 ಕ್ಕೆ ಇಳಿದಿದೆ ಮತ್ತು ಈಗ ಒಟ್ಟು ಪ್ರಕರಣಗಳ ಶೇಕಡಾ 1.21 ರಷ್ಟಿದೆ. ಗುರುವಾರದ ವೇಳೆಗೆ 31,260,050 ಜನರು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತೋರಿಸಿವೆ.  ಕೊವಿಡ್ -19 ಲಸಿಕೆ ವ್ಯಾಪ್ತಿಯು 52 ಕೋಟಿ (52,32,53,450) ಮೈಲಿಗಲ್ಲನ್ನು ದಾಟಿದೆ.

ದೇಶದ ಕೆಲವು ರಾಜ್ಯಗಳು ದೈನಂದಿನ ಸರಾಸರಿ ಪ್ರಕರಣಗಳ ಏರಿಕೆಯನ್ನು ವರದಿ ಮಾಡುತ್ತಿರುವುದರಿಂದ ಒಟ್ಟಾರೆಯಾಗಿ ರಾಷ್ಟ್ರವ್ಯಾಪಿ ಸಂಖ್ಯೆ 25,000 ಕ್ಕಿಂತ ಹೆಚ್ಚಿದೆ.


ಆಗಸ್ಟ್ ಅಂತ್ಯದ ವೇಳೆಗೆ ಮೂರನೇ ಅಲೆ ದೇಶವನ್ನು ಅಪ್ಪಳಿಸಬಹುದು ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಇತ್ತೀಚಿನ ಪ್ರಕರಣಗಳ ಏರಿಕೆಯು ಹೆಚ್ಚಾಗಿ ಕೊವಿಡ್ -19, ಡೆಲ್ಟಾ ರೂಪಾಂತರದ ಮ್ಯುಟೇಶನ್‌ನಿಂದಾಗಿದೆ.
ಬುಧವಾರ ಬ್ರಿಟನ್ ನ ಆಕ್ಸ್‌ಫರ್ಡ್ ಲಸಿಕೆ ಗುಂಪಿನ ಮುಖ್ಯಸ್ಥರು ಕೋವಿಡ್ -19 ರ ಅತ್ಯಂತ ಹರಡುವ ಡೆಲ್ಟಾ ರೂಪಾಂತರವು ಹರ್ಡ್ ಇಮ್ಯುನಿಟಿಯ ನಿರೀಕ್ಷೆಯನ್ನು ನೀಡಿದೆ.


ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೊವಿಡ್ -19 ಲಸಿಕೆಯ ಹಿಂದೆ ತಂಡವನ್ನು ಮುನ್ನಡೆಸಿದ ಪ್ರೊಫೆಸರ್ ಆಂಡ್ರ್ಯೂ ಪೊಲಾರ್ಡ್, ಇನ್ನೂ ಹೆಚ್ಚು ಹರಡುವ ರೂಪಾಂತರದ ಭಯವು ಒಂದು ಸಾಧ್ಯತೆಯಾಗಿ ಉಳಿದಿದೆ ಮತ್ತು ಆದ್ದರಿಂದ ಮಾರಕ ವೈರಸ್ ಹರಡುವುದನ್ನು ಸಂಪೂರ್ಣವಾಗಿ ತಡೆಯಲು ಏನೂ ಇಲ್ಲ ಎಂದು ಹೇಳಿದರು.

ಕೇರಳದಲ್ಲಿ 23,500 ಪ್ರಕರಣಗಳು ದಾಖಲಾಗಿದ್ದು  ಮಹಾರಾಷ್ಟ್ರದಲ್ಲಿ 5,560  ಪ್ರಕರಣ ಪತ್ತೆಯಾಗಿದೆ.

ಇದನ್ನೂ ಓದಿ:  ಭಾರತದ ಹೊರಗೆ ಕೊವಿಡ್ ಲಸಿಕೆ ಪಡೆದವರಿಗೆ ಶೀಘ್ರದಲ್ಲೇ ಪ್ರಮಾಣಪತ್ರ ನೀಡಲಿದೆ ಕೇಂದ್ರ ಸರ್ಕಾರ

(India reports 41,195 new covid cases 490 deaths in last 24 hours as per health ministry data)