ಭಾರತದ ಹೊರಗೆ ಕೊವಿಡ್ ಲಸಿಕೆ ಪಡೆದವರಿಗೆ ಶೀಘ್ರದಲ್ಲೇ ಪ್ರಮಾಣಪತ್ರ ನೀಡಲಿದೆ ಕೇಂದ್ರ ಸರ್ಕಾರ
Covid Vaccine: ಈ ಕ್ರಮ ಜಾರಿಗೆ ಬರುವವರೆಗೆ ಈಗಾಗಲೇ ಲಸಿಕೆ ಹಾಕಿಸಿಕೊಂಡವರು ಪ್ರಮಾಣಪತ್ರವನ್ನು ಪಡೆಯಲು ದೇಶದಲ್ಲಿ ಮತ್ತೆ ಲಸಿಕೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಅರೋರಾ ಸ್ಪಷ್ಟಪಡಿಸಿದ್ದಾರೆ.
ದೆಹಲಿ: ಕೊರೊನಾವೈರಸ್ (Coronavirus) ವಿರುದ್ಧ ಲಸಿಕೆಯನ್ನು ದೇಶದ ಹೊರಗಡೆ ಪಡೆದಿದ್ದರೆ, ಶೀಘ್ರದಲ್ಲೇ ಅವರಿಗೆ ಲಸಿಕೆ ಪ್ರಮಾಣಪತ್ರವನ್ನು ಕೊವಿನ್ (CoWin) ಮೂಲಕ ಡೌನ್‌ಲೋಡ್ ಮಾಡಬಹುದು ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳಿರುವುದಾಗಿ ಲೈವ್ ಮಿಂಟ್ ವರದಿ ಮಾಡಿದೆ. ವರದಿಯ ಪ್ರಕಾರ ಪ್ರಒಂದು ಡೋಸ್ ಲಸಿಕೆ ಪಡೆದವರಿಗೆ ಅಥವಾ ಸಂಪೂರ್ಣವಾಗಿ ಲಸಿಕೆ ಪಡೆದವರಿಗೆ ಲಸಿಕೆ ಪ್ರಮಾಣಪತ್ರ ನೀಡಲಾಗುತ್ತದೆ. ದೇಶದ ಔಷಧ ನಿಯಂತ್ರಣ ಪ್ರಾಧಿಕಾರದಿಂದ ಇನ್ನೂ ಅನುಮೋದನೆ ಪಡೆಯದ ವಿದೇಶಿ ಲಸಿಕೆಗಳಿಗೂ ಇದನ್ನು ತೆರೆಯಲಾಗುವುದು ಎಂದು ಲೈವ್‌ಮಿಂಟ್ ಹೇಳಿದೆ. ಪ್ರಸ್ತುತ, ಭಾರತಕ್ಕೆ ಪ್ರವೇಶಿಸುವ ಜನರು ದೇಶದ ಹೊರಗೆ ಲಸಿಕೆ ಪಡೆದಿದ್ದರೆ ಭಾರತದಲ್ಲಿ ಲಸಿಕೆ ಪ್ರಮಾಣಪತ್ರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ಇತರ ದೇಶಗಳಲ್ಲಿ ಫೈಜರ್ ಅಥವಾ ಸಿನೋಫಾರ್ಮ್‌ನಂತಹ ಒಂದು ಅಥವಾ ಎರಡು ಡೋಸ್ ಲಸಿಕೆಗಳನ್ನು ಪಡೆದಿರುವ ಭಾರತೀಯರು ಅಥವಾ ವಿದೇಶಿಯರು ಇದ್ದಾರೆ. ಅವರು ಭಾರತದಲ್ಲಿ ಬಂದು ಉಳಿಯಲು ಯೋಚಿಸುತ್ತಿದ್ದಾರೆ. ಅಂತಹ ಜನರಿಗೆ ಪ್ರಕ್ರಿಯೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಡಾ. ಎನ್. ಕೆ ಅರೋರಾ ಹೇಳಿರುವುದಾಗಿ ಲೈವ್ ಮಿಂಟ್ ವರದಿ ಮಾಡಿದೆ. ಅರೋರಾ ಭಾರತದ ಕೊವಿಡ್ -19 ವರ್ಕಿಂಗ್ ಗ್ರೂಪ್‌ನ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಪ್ರತಿರಕ್ಷಣೆಯ (NTAGI) ಅಧ್ಯಕ್ಷರಾಗಿದ್ದಾರೆ.
ಈ ಕ್ರಮ ಜಾರಿಗೆ ಬರುವವರೆಗೆ ಈಗಾಗಲೇ ಲಸಿಕೆ ಹಾಕಿಸಿಕೊಂಡವರು ಪ್ರಮಾಣಪತ್ರವನ್ನು ಪಡೆಯಲು ದೇಶದಲ್ಲಿ ಮತ್ತೆ ಲಸಿಕೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಅರೋರಾ ಸ್ಪಷ್ಟಪಡಿಸಿದ್ದಾರೆ. “ಅಂತಹ ಜನರು ಕೊ-ವಿನ್ ಪ್ಲಾಟ್‌ಫಾರ್ಮ್ ಮೂಲಕ ಲಸಿಕೆ ಪ್ರಮಾಣಪತ್ರಗಳನ್ನು ಪಡೆಯುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ನಮ್ಮ ರಾಷ್ಟ್ರವ್ಯಾಪಿ ಕೊವಿಡ್ -19 ಲಸಿಕೆ ಕಾರ್ಯಕ್ರಮದಲ್ಲಿ ನಾವು ಶೀಘ್ರದಲ್ಲೇ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಗಡಿ ದಾಟುವುದು ಸೇರಿದಂತೆ ವಿವಿಧ ಉದ್ದೇಶಗಳಿಗೆ ಇದು ಕಡ್ಡಾಯವಾಗಿರುವುದರಿಂದ ಈ ಕ್ರಮವು ಮಹತ್ವವನ್ನು ಹೊಂದಿದೆ.
ಇದನ್ನೂ ಓದಿ: ಕೊವಿಶೀಲ್ಡ್-ಕೊವ್ಯಾಕ್ಸಿನ್ ಲಸಿಕೆಗಳ ಮಿಶ್ರಣ ಕ್ಲಿನಿಕಲ್ ಪ್ರಯೋಗ, ಅಧ್ಯಯನಕ್ಕೆ ಡಿಸಿಜಿಐ ಅನುಮೋದನೆ..
ಇದನ್ನೂ ಓದಿ: ‘ಕೊವಿಡ್ 19 ಹೊಸ ರೂಪಾಂತರಿ ವೈರಾಣುಗಳು ಯಾವಾಗ ಬೇಕಾದರೂ ಉದ್ಭವಿಸಬಹುದು‘
(People who received Covid jabs outside India Will soon be able to download vaccination certificate through the CoWin)