Coronavirus Cases In India: ದೇಶದಲ್ಲಿ 24ಗಂಟೆಯಲ್ಲಿ 67,208 ಹೊಸ ಕೊರೊನಾ ಪ್ರಕರಣಗಳು ದಾಖಲು; ಕೇರಳದಲ್ಲೇ ಅತಿಹೆಚ್ಚು

| Updated By: Lakshmi Hegde

Updated on: Jun 17, 2021 | 9:47 AM

Covid 19: ದೇಶದಲ್ಲಿ ಲಸಿಕೆ ವಿತರಣೆ ಕೂಡ ಭರದಿಂದ ಸಾಗುತ್ತಿದೆ. ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಲಸಿಕೆ ಜತೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಕೂಡ ಲಭ್ಯವಾಗಲಿದೆ. ಜೂನ್​ 2ನೇ ವಾರದಿಂದ ಕೊರೊನಾ ಲಸಿಕೆಗಳ ಪೂರೈಕೆಯೂ ಜಾಸ್ತಿ ಪ್ರಮಾಣದಲ್ಲಿ ಆಗುತ್ತಿದ್ದು, ಇದುವರೆಗೆ 26,55,19,251 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ.

Coronavirus Cases In India: ದೇಶದಲ್ಲಿ 24ಗಂಟೆಯಲ್ಲಿ 67,208 ಹೊಸ ಕೊರೊನಾ ಪ್ರಕರಣಗಳು ದಾಖಲು; ಕೇರಳದಲ್ಲೇ ಅತಿಹೆಚ್ಚು
ಪ್ರಾತಿನಿಧಿಕ ಚಿತ್ರ
Follow us on

ಭಾರತದಲ್ಲಿ ಇಂದು 67,208 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಹಾಗೇ 24 ಗಂಟೆಯಲ್ಲಿ 1,03,570 ಮಂದಿ ಕೊರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್​ಚಾರ್ಜ್​ ಆಗಿದ್ದಾರೆ. 2,330 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಅಲ್ಲಿಗೆ ಭಾರತದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2,97,00,313ಕ್ಕೆ ಏರಿಕೆಯಾಗಿದೆ. ಒಟ್ಟಾರೆ 2,84,91,670ಮಂದಿ ಚೇತರಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳು 8,26,740ಕ್ಕೆ ಇಳಿಕೆಯಾಗಿದ್ದು ಸಮಾಧಾನಕರ ಸಂಗತಿಯಾಗಿದೆ. ಇದು ಕಳೆದ 71ದಿನಗಳಲ್ಲಿ ಅತ್ಯಂತ ಕಡಿಮೆ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆಯಾಗಿದೆ. ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 3,81,903 ತಲುಪಿದೆ.

ದೇಶದಲ್ಲಿ ಲಸಿಕೆ ವಿತರಣೆ ಕೂಡ ಭರದಿಂದ ಸಾಗುತ್ತಿದೆ. ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಲಸಿಕೆ ಜತೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಕೂಡ ಲಭ್ಯವಾಗಲಿದೆ. ಜೂನ್​ 2ನೇ ವಾರದಿಂದ ಕೊರೊನಾ ಲಸಿಕೆಗಳ ಪೂರೈಕೆಯೂ ಜಾಸ್ತಿ ಪ್ರಮಾಣದಲ್ಲಿ ಆಗುತ್ತಿದ್ದು, ಇದುವರೆಗೆ 26,55,19,251 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ ದೇಶದಲ್ಲಿ ಕೊರೊನಾ ಸೋಂಕಿನಿಂದ ಚೇತರಿಕೆ ಕಾಣುವವರ ಪ್ರಮಾಣ ಶೇ.95.93ಕ್ಕೆ ಏರಿಕೆಯಾಗಿದೆ ಎಂದೂ ಆರೋಗ್ಯ ಇಲಾಖೆ ತಿಳಿಸಿದೆ.

ಇನ್ನು ವಿವಿಧ ಪ್ರಮುಖ ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳನ್ನು ನೋಡುವುದಾದರೆ, 24 ಗಂಟೆಯಲ್ಲಿ ಕೇರಳದಲ್ಲಿ ಅತ್ಯಂತ ಹೆಚ್ಚು ಅಂದರೆ 13,270 ಕೊವಿಡ್​ ಕೇಸ್​​ಗಳು ದಾಖಲಾಗಿವೆ. ಅದನ್ನು ಹೊರತು ಪಡಿಸಿದರೆ ಮಹಾರಾಷ್ಟ್ರದಲ್ಲಿ 10,107 ಮತ್ತು ತಮಿಳುನಾಡಿದನಲ್ಲಿ 10,448 ಪ್ರಕರಣಗಳು ದಾಖಲಾಗಿವೆ. ಈ ಮೂರು ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದ್ಯಾವುದೇ ರಾಜ್ಯಗಳಲ್ಲೂ 10 ಸಾವಿರದ ಗಡಿ ದಾಟಿಲ್ಲ. ಆಂಧ್ರಪ್ರದೇಶದಲ್ಲಿ 24ಗಂಟೆಯಲ್ಲಿ 6617 ಹೊಸ ಕೊರೊನಾ ಪ್ರಕರಣಗಳು, ಕರ್ನಾಟಕದಲ್ಲಿ 7345 ಕೇಸ್​​ಗಳು ಪತ್ತೆಯಾಗಿದ್ದರೆ, ಉತ್ತರ ಪ್ರದೇಶದಲ್ಲಿ ಕೇವಲ 251 ಮತ್ತು ದೆಹಲಿಯಲ್ಲಿ 212 ಪ್ರಕರಣಗಳಷ್ಟೇ ದಾಖಲಾಗಿದೆ.

ಇದನ್ನೂ ಓದಿ: ಗರ್ಭಿಣಿ, ಬಾಣಂತಿಯರಿಗೆ ತೀವ್ರವಾಗಿ ಬಾಧಿಸಿದ ಕೊವಿಡ್​ 19 ಎರಡನೇ ಅಲೆ; ಐಸಿಎಂಆರ್​ ಅಧ್ಯಯನ

(India Reports 67,208 Fresh Covid Cases and 2330 deaths in 24 hours )

Published On - 9:43 am, Thu, 17 June 21