Corona Vaccine: ಡೆಲ್ಟಾ ಮಾದರಿ ವಿರುದ್ಧ ಕೊವಿಶೀಲ್ಡ್​ ಮೊದಲ ಡೋಸ್​ ಶೇ.61ರಷ್ಟು ಪರಿಣಾಮಕಾರಿ: ಡಾ.ಎನ್​.ಕೆ ಅರೋರಾ

Covishield Vaccine: ಡಾ.ಎನ್​.ಕೆ ಅರೋರಾ ಹೇಳಿರುವ ಪ್ರಕಾರ ಕೊವಿಶೀಲ್ಡ್​ ಲಸಿಕೆಯ ಮೊದಲ ಡೋಸ್​ ಡೆಲ್ಟಾ ಮಾದರಿ ವೈರಾಣುವಿನ ವಿರುದ್ಧ ಶೇ.61ರಷ್ಟು ಪರಿಣಾಮಕಾರಿಯಾಗಿದ್ದು, ಕೊರೊನಾ ದೇಹಕ್ಕೆ ದೊಡ್ಡ ಮಟ್ಟದ ಹಾನಿ ಮಾಡದಂತೆ ತಡೆಯುವ ಸಾಮರ್ಥ್ಯ ಹೊಂದಿದೆ.

Corona Vaccine: ಡೆಲ್ಟಾ ಮಾದರಿ ವಿರುದ್ಧ ಕೊವಿಶೀಲ್ಡ್​ ಮೊದಲ ಡೋಸ್​ ಶೇ.61ರಷ್ಟು ಪರಿಣಾಮಕಾರಿ: ಡಾ.ಎನ್​.ಕೆ ಅರೋರಾ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Skanda

Updated on: Jun 17, 2021 | 11:04 AM

ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಕೊಂಚ ಇಳಿಮುಖವಾಗಿದೆ. ಸಂಭವನೀಯ ಮೂರನೇ ಅಲೆಯ ಬಗ್ಗೆ ತಜ್ಞರು ಸಾಕಷ್ಟು ಎಚ್ಚರಿಕೆ ನೀಡಿರುವುದರಿಂದ ಕೊರೊನಾ ಲಸಿಕೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಆದರೆ, ಕೊರೊನಾ ಲಸಿಕೆಯ ವಿಚಾರವಾಗಿ ಇನ್ನೂ ಹಲವು ಗೊಂದಲಗಳು ಜನರ ಮನಸ್ಸಿನಲ್ಲಿ ಉಳಿದಿದ್ದು, ಕೊವಿಶೀಲ್ಡ್​ ಲಸಿಕೆಯ ಎರಡು ಡೋಸ್​ಗಳ ನಡುವಿನ ಅಂತರ ಹೆಚ್ಚಿಸಿದ್ದೇಕೆ? ಅಂತರ ಹೆಚ್ಚಾದರೆ ಲಸಿಕೆ ಪ್ರಭಾವ ಹೋಗುವುದಿಲ್ಲವಾ? ರೂಪಾಂತರಿ ವೈರಾಣು ವಿರುದ್ಧ ಲಸಿಕೆ ಸಕ್ಷಮವಾಗಿ ಕಾರ್ಯನಿರ್ವಹಿಸಬಲ್ಲದೇ? ಹೀಗೆ ಅನೇಕ ಪ್ರಶ್ನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಕೊವಿಡ್​ ಸಮಿತಿ ಮುಖ್ಯಸ್ಥ ಡಾ.ಎನ್​.ಕೆ ಅರೋರಾ ಕೊವಿಶೀಲ್ಡ್​ ಲಸಿಕೆಗೆ ಸಂಬಂಧಿಸಿದ ಗೊಂದಲಗಳ ಪೈಕಿ ಕೆಲವೊಂದಷ್ಟಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಡಾ.ಎನ್​.ಕೆ ಅರೋರಾ ಹೇಳಿರುವ ಪ್ರಕಾರ ಕೊವಿಶೀಲ್ಡ್​ ಲಸಿಕೆಯ ಮೊದಲ ಡೋಸ್​ ಡೆಲ್ಟಾ ಮಾದರಿ ವೈರಾಣುವಿನ ವಿರುದ್ಧ ಶೇ.61ರಷ್ಟು ಪರಿಣಾಮಕಾರಿಯಾಗಿದ್ದು, ಕೊರೊನಾ ದೇಹಕ್ಕೆ ದೊಡ್ಡ ಮಟ್ಟದ ಹಾನಿ ಮಾಡದಂತೆ ತಡೆಯುವ ಸಾಮರ್ಥ್ಯ ಹೊಂದಿದೆ. ಭಾರತದಲ್ಲಿ ನಾಲ್ಕು ವಾರಗಳ ಅಂತರದಲ್ಲಿ ಎರಡನೇ ಡೋಸ್​ ತೆಗೆದುಕೊಳ್ಳಲು ಸೂಚಿಸಿ ಕೊರೊನಾ ಲಸಿಕೆ ಅಭಿಯಾನ ಆರಂಭಿಸುವಷ್ಟರಲ್ಲಾಗಲೇ ಬ್ರಿಟನ್​ ದೇಶ ಎರಡು ಡೋಸ್​ಗಳ ನಡುವಿನ ಅಂತರವನ್ನು 12 ವಾರಗಳಿಗೆ ಏರಿಸಿತ್ತು. ಅಲ್ಲದೇ, ನಂತರ ವಿಶ್ವ ಆರೋಗ್ಯ ಸಂಸ್ಥೆಯೂ 6ರಿಂದ 8ವಾರಗಳ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡಿತು ಎಂದಿದ್ದಾರೆ.

ಈ ಸಂದರ್ಭದಲ್ಲಿ ಬ್ರಿಟನ್​ನ ವರದಿಯನ್ನೂ ಡಾ.ಎನ್​.ಕೆ ಅರೋರ ಅವರ ಸೂಕ್ಷ್ಮವಾಗಿ ಗಮನಿಸಿದರಾದರೂ ಅದು ಅವರಿಗೆ ಪೂರ್ಣ ಒಪ್ಪಿಗೆ ಆಗದ ಕಾರಣ ಡೆಲ್ಟಾ ಮಾದರಿ ದೇಶದಲ್ಲಿ ಉಲ್ಬಣಿಸಿದ್ದಾಗಲೇ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಸಹಾಯದಿಂದ ಒಂದಷ್ಟು ಅಂಕಿ ಅಂಶಗಳನ್ನು ತರಿಸಿಕೊಂಡು ಅಧ್ಯಯನ ನಡೆಸಲಾಯಿತು. ಅದರಲ್ಲಿ ಮೊದಲ ಡೋಸ್​ ಲಸಿಕೆ ಶೇ.61ರಷ್ಟು ಪರಿಣಾಮಕಾರಿ ಎಂದೂ, ಅದೇ ಅವಧಿಯಲ್ಲಿ ಎರಡು ಡೋಸ್ ಪಡೆದರೆ ಶೇ.65ರಷ್ಟು ಪರಿಣಾಮಕಾರಿ ಎಂದೂ ವರದಿ ಲಭ್ಯವಾಯಿತು.

ಆದರೆ, ಅದಕ್ಕೂ ಮುನ್ನ ಮೇ.13ರಂದು ದೇಶದಲ್ಲಿ ಕೊವಿಶೀಲ್ಡ್​ ಲಸಿಕೆಯ ಎರಡು ಡೋಸ್​ಗಳ ನಡುವಿನ ಅಂತರವನ್ನು 6ರಿಂದ 8ವಾರ ಇದ್ದಿದ್ದನ್ನು 12 ರಿಂದ 16 ವಾರಗಳಿಗೆ ಹೆಚ್ಚಿಸಲಾಗಿತ್ತು. ಅದೇ ಹೊತ್ತಿನಲ್ಲಿ ದೇಶವು ಕೊರೊನಾ ಲಸಿಕೆ ಅಭಾವವನ್ನೂ ಎದುರಿಸುತ್ತಿತ್ತು ಎನ್ನುವುದು ಗಮನಾರ್ಹ. ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಹೊರಬಂದ ಅಧ್ಯಯನದ ವರದಿಯು ಕೊವಿಶೀಲ್ಡ್​ ಅಥವಾ ಕೊವ್ಯಾಕ್ಸಿನ್​ ಲಸಿಕೆಗಳನ್ನು ಒಂದೇ ಡೋಸ್​ ಪಡೆದವರಿಗೂ, ಎರಡೂ ಡೋಸ್ ಪಡೆದವರಿಗೂ ಕೊರೊನಾದಿಂದ ಹೆಚ್ಚುಕಡಿಮೆ ಒಂದೇ ರೀತಿಯ ರಕ್ಷಣೆ ಸಿಗುತ್ತಿದೆ ಎಂಬ ಮಾಹಿತಿ ಹೊರಬಂತು. ಅಲ್ಲದೇ, ಮೊದಲ ಡೋಸ್ ಕೊರೊನಾ ಲಸಿಕೆ ಕೂಡಾ ವೈರಾಣುವಿನಿಂದ ದೇಹವನ್ನು ರಕ್ಷಿಸುವಲ್ಲಿ, ಆಸ್ಪತ್ರೆಗೆ ಸೇರುವ ಸಾಧ್ಯತೆ ತಗ್ಗಿಸುವಲ್ಲಿ, ಸಾವಿನ ಪ್ರಮಾಣ ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿರುವುದು ತಿಳಿದುಬಂತು ಎಂದು ಅರೋರ ಹೇಳಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಎರಡು ಡೋಸ್​ಗಳ ನಡುವಿನ ಅಂತರ ಹೆಚ್ಚಿಸಿದ್ದಕ್ಕೆ ಟೀಕೆಗಳ ವ್ಯಕ್ತವಾದ ಬೆನ್ನಲ್ಲೇ ಡಾ.ಎನ್​.ಕೆ ಅರೋರ ಅವರ ಈ ಸ್ಪಷ್ಟೀಕರಣವು ಕೇಳಿಬಂದಿದೆ. 8 ರಿಂದ 12 ವಾರಗಳ ಅಂತರ ಹೆಚ್ಚಿಸಲು ಸಲಹೆ ನೀಡಲಾಗಿತ್ತೇ ವಿನಃ 12 ರಿಂದ 16 ವಾರಗಳ ಅಂತರದ ಬಗ್ಗೆ ಪ್ರಸ್ತಾಪ ಇರಲಿಲ್ಲ ಎಂದು ಸಾಂಕ್ರಾಮಿಕ ರೋಗಗಳ ವಿಭಾಗದ ಮಾಜಿ ಮುಖ್ಯಸ್ಥರು ಈ ಹಿಂದೆ ಹೇಳಿದ್ದರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಇದನ್ನೂ ಓದಿ: ಕೊವ್ಯಾಕ್ಸಿನ್​ಗಿಂತ ಕೊವಿಶೀಲ್ಡ್​ ಲಸಿಕೆಯೇ ಹೆಚ್ಚು ಪ್ರತಿಕಾಯಗಳನ್ನು ಬೆಳೆಸುತ್ತಿದೆ: ಕೊವ್ಯಾಟ್​ ಅಧ್ಯಯನದ ಪ್ರಾಥಮಿಕ ವರದಿ 

Corona Vaccine: ಕೊವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಕೊರೊನಾದ ವಿರುದ್ಧ ಪರಿಣಾಮಕಾರಿಯೇ?

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ