ದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 30,093 ಹೊಸ ಕೊವಿಡ್ -19 ಪ್ರಕರಣ ವರದಿ ಆಗಿದೆ. ಇದು ಮಾರ್ಚ್ 16 ರ ನಂತರದ ಅತಿ ಕಡಿಮೆ. ವಾರದಲ್ಲಿ ಸರಾಸರಿ 18.72 ಲಕ್ಷ ಮಾದರಿಗಳು ಪರೀಕ್ಷೆಗೊಳಪಡಿಸಿದ್ದು ಭಾನುವಾರ 14.63 ಲಕ್ಷ ಮಾದರಿಗಳನ್ನು ಮಾತ್ರ ಪರೀಕ್ಷಿಸಲಾಯಿತು. ದೇಶದಲ್ಲಿ ಸಕ್ರಿಯ ಪ್ರಕರಣಗಳು 4,06,130 ಕ್ಕೆ ಇಳಿದಿವೆ. ಕಳೆದ 24 ಗಂಟೆಗಳಲ್ಲಿ 45,254 ಚೇತರಿಕೆ ಮತ್ತು 374 ಸಾವುಗಳು ವರದಿಯಾಗಿದೆ.
ಏತನ್ಮಧ್ಯೆ, ಅಮೆರಿಕವು ಭಾರತದ ಪ್ರಯಾಣ ಸಲಹೆಯನ್ನು ಸಡಿಲಿಸಿದ್ದು, ಪ್ರಯಾಣವನ್ನು ಮರುಪರಿಶೀಲಿಸುವಂತೆ ನಾಗರಿಕರನ್ನು ಒತ್ತಾಯಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
India reports 30,093 new #COVID19 cases, 45,254 recoveries, and 374 deaths in the last 24 hours, as per the Union Health Ministry
Total cases: 3,11,74,322
Active cases: 4,06,130
Total recoveries: 3,03,53,710
Death toll: 4,14,482Total vaccination: 41,18,46,401 pic.twitter.com/pm5U5yjA4p
— ANI (@ANI) July 20, 2021
ಪಶ್ಚಿಮ ಬಂಗಾಳ ಸರ್ಕಾರವು ವಾಣಿಜ್ಯ ಮತ್ತು ವಾಣಿಜ್ಯೇತರ ವಿಮಾನಗಳಲ್ಲಿ ರಾಜ್ಯಕ್ಕೆ ಹಾರಾಟ ನಡೆಸುವ ಎಲ್ಲ ಪ್ರಯಾಣಿಕರಿಗೆ ಸಂಪೂರ್ಣ ಲಸಿಕೆ ನೀಡಲಾಗಿದೆ ಎಂದು ತೋರಿಸುವ ಪ್ರಮಾಣಪತ್ರ ಅಥವಾ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ತಯಾರಿಸುವುದು ಕಡ್ಡಾಯಗೊಳಿಸಿತು. ಈ ನಿರ್ಧಾರವನ್ನು ತಕ್ಷಣದಿಂದ ಜಾರಿಗೆ ತರಲಾಗುವುದು ಎಂದು ಪಶ್ಚಿಮ ಬಂಗಾಳ ಗೃಹ ಕಾರ್ಯದರ್ಶಿ ಬಿ.ಪಿ. ಗೋಪಾಲಿಕಾ ಸೋಮವಾರ ನಾಗರಿಕ ವಿಮಾನಯಾನ ಕಾರ್ಯದರ್ಶಿ ಪಿ.ಎಸ್.ಖರೋಲಾ ಅವರಿಗೆ ಪತ್ರ ಬರೆದಿದ್ದಾರೆ.
ಬಕ್ರೀದ್ ಹಬ್ಬದ ಪ್ರಯುಕ್ತ ಭಾನುವಾರದಿಂದ ಆರಂಭಗೊಂಡು ಮೂರು ದಿನಗಳವರೆಗೆ ಲಾಕ್‌ಡೌನ್ ಸಡಿಲಿಸುವ ಕೇರಳ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ ಅರ್ಜಿಗೆ ಸುಪ್ರೀಂ ಕೋರ್ಟ್ ನಲ್ಲಿ ಪ್ರತಿಕ್ರಿಯಿಸಿದ ಕೇರಳ ಕೊವಿಡ್ -19 ನಿರ್ಬಂಧಗಳು ಜನರನ್ನು ಬಹಳಷ್ಟು ದುಃಖಕ್ಕೆ ಸಿಲುಕಿಸಿವೆ ಮತ್ತು ಸರಕುಗಳನ್ನು ಸಂಗ್ರಹಿಸಿದ ವ್ಯಾಪಾರಿಗಳು ಬಕ್ರೀದ್ ಮಾರಾಟವು ತಮ್ಮ ದುಃಖವನ್ನು ಸ್ವಲ್ಪ ಮಟ್ಟಿಗೆ ನಿವಾರಿಸಬಹುದೆಂದು ನಿರೀಕ್ಷಿಸುತ್ತಿದ್ದರು. ಕೇರಳ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಯಾವುದೇ ತಕ್ಷಣದ ತಡೆ ನೀಡಲಿಲ್ಲ ಮತ್ತು ಮಂಗಳವಾರ ಈ ಪ್ರಕರಣದ ವಿಚಾರಣೆಯನ್ನು ನಿಗದಿಪಡಿಸಿದೆ.
ನಾಲ್ಕು ವಾರಗಳಲ್ಲಿ, ಹರಿಯಾಣದಲ್ಲಿ ಕೊವಿಡ್ ಪ್ರಕರಣಗಳಲ್ಲಿ ಶೇ 76 ಕುಸಿತ
ಕಳೆದ ನಾಲ್ಕು ವಾರಗಳಲ್ಲಿ ಕೊವಿಡ್ -19 ರ ಹೊಸ ಸೋಂಕುಗಳಲ್ಲಿ ಹರಿಯಾಣವು ಸುಮಾರು 76 ಪ್ರತಿಶತದಷ್ಟು ತೀವ್ರ ಕುಸಿತವನ್ನು ದಾಖಲಿಸಿದೆ. ಈ ವರ್ಷ ಜೂನ್ 22 ರಂದು 146 ಹೊಸ ಪ್ರಕರಣಗಳಿಂದ ಜುಲೈ 18 ರಂದು 35 ಕ್ಕೆ ಇಳಿಕೆ ಆಗಿದೆ. ಸಾವಿನ ಪ್ರಮಾಣವು ಪ್ರತಿ 0.04 ರಷ್ಟು ಹೆಚ್ಚಾಗಿದೆ ಜೂನ್ 22 ರಂದು ಶೇ 1.21 ರಿಂದ ಜುಲೈ 18 ರಂದು ಶೇ 1.25 ಕ್ಕೆ ತಲುಪಿದೆ. ಏತನ್ಮಧ್ಯೆ, ಮೂರನೇ ತರಂಗದ ಆತಂಕದ ಮಧ್ಯೆ, ರಾತ್ರಿ ಕರ್ಫ್ಯೂ – ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ – ಸೋಮವಾರದಿಂದ ರಾಜ್ಯದಾದ್ಯಂತ ವಿಧಿಸಲಾಗಿದೆ.
ಮಹಾರಾಷ್ಟ್ರ: ಕೊಲ್ಹಾಪುರ ಮತ್ತು ಸಾಂಗ್ಲಿಯಲ್ಲಿ ಲಾಕ್ಡೌನ್ಗೆ ಆದೇಶ
ಕೊಲ್ಹಾಪುರ ಮತ್ತು ಸಾಂಗ್ಲಿಗೆ ಭೇಟಿ ನೀಡಿದ ಕೇಂದ್ರ ತಜ್ಞರ ತಂಡ ಲಾಕ್ ಡೌನ್ ಮಾಡಲು ಸೂಚಿಸಿದೆ. ದಿನನಿತ್ಯದ ಕ್ರಮಗಳನ್ನು ಕೈಗೊಂಡಿದ್ದರೂ ಎರಡು ಜಿಲ್ಲೆಗಳಲ್ಲಿ ಪ್ರಸರಣ ಏಕೆ ನಿಲ್ಲುತ್ತಿಲ್ಲ ಎಂಬ ಬಗ್ಗೆ ಕೇಂದ್ರ ತಂಡ ಕಳವಳ ವ್ಯಕ್ತಪಡಿಸಿತು.
(India reports over 30,000 new Covid cases 374 deaths in the last 24 hours)
Published On - 10:44 am, Tue, 20 July 21