
ನವದೆಹಲಿ, ಜೂನ್ 08: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ(Corona) ಸೋಂಕಿತ ಪ್ರಕರಣಗಳು ಹೆಚ್ಚಾಗಿವೆ. 391 ಪ್ರಕರಣಗಳು ಪತ್ತೆಯಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.ಸಕ್ರಿಯ ಸೋಂಕುಗಳ ಸಂಖ್ಯೆ 5,755 ಕ್ಕೆ ಏರಿದೆ. ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.
ಕೇರಳವು ಅತಿ ಹೆಚ್ಚು ಸೋಂಕಿತ ರಾಜ್ಯವಾಗಿದ್ದು, 127 ಹೊಸ ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದೆ, ಗುಜರಾತ್ 102, ದೆಹಲಿ 73 ಮತ್ತು ಪಶ್ಚಿಮ ಬಂಗಾಳ 26 ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿವೆ. ಈ ಹೆಚ್ಚಳವು ದೇಶಾದ್ಯಂತ ಆಸ್ಪತ್ರೆಗಳ ಸನ್ನದ್ಧತೆಯನ್ನು ನಿರ್ಣಯಿಸಲು ಕೇಂದ್ರ ಸರ್ಕಾರವು ಅಣಕು ಪ್ರದರ್ಶನಗಳನ್ನು ಪ್ರಾರಂಭಿಸಿವೆ.
ಕಳೆದ 24 ಗಂಟೆಗಳಲ್ಲಿ ಅರುಣಾಚಲ ಪ್ರದೇಶ, ಚಂಡೀಗಢ, ಮಿಜೋರಾಂ ಮತ್ತು ತ್ರಿಪುರ ಎಂಬ ನಾಲ್ಕು ರಾಜ್ಯಗಳಲ್ಲಿ ಮಾತ್ರ ಹೊಸ ಸೋಂಕು ಪತ್ತೆಯಾಗಿಲ್ಲ. ಮಧ್ಯಪ್ರದೇಶದಲ್ಲಿ, ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದ 45 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ನಂತರ ಅವರಿಗೆ ಕೋವಿಡ್ -19 ಸೋಂಕು ತಗುಲಿರುವುದು ದೃಢಪಟ್ಟಿತು. ಮಹಾರಾಷ್ಟ್ರದಲ್ಲಿ, ಹೈಪರ್ ಥೈರಾಯ್ಡಿಸಮ್ ಹೊಂದಿದ್ದ 63 ವರ್ಷದ ವ್ಯಕ್ತಿಯೊಬ್ಬರು ಈ ವೈರಸ್‌ಗೆ ಬಲಿಯಾಗಿದ್ದಾರೆ.
ಮತ್ತಷ್ಟು ಓದಿ: ಭಾರತದಲ್ಲಿ 5000 ದಾಟಿದ ಕೊವಿಡ್ ಪ್ರಕರಣಗಳು; ಅತಿ ಹೆಚ್ಚು ಸೋಂಕಿರುವ ಕೇರಳದಲ್ಲಿ ಹೈ ಅಲರ್ಟ್
ಕೇರಳದಲ್ಲಿ, 4 ನೇ ಹಂತದ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 59 ವರ್ಷದ ವ್ಯಕ್ತಿಯೊಬ್ಬರು ಕೋವಿಡ್ -19 ತೊಡಕುಗಳಿಂದ ಸಾವನ್ನಪ್ಪಿದರು. ತಮಿಳುನಾಡಿನಲ್ಲಿ, ಒಂದು ತಿಂಗಳ ಕಾಲ ಹಾಸಿಗೆ ಹಿಡಿದಿದ್ದ 79 ವರ್ಷದ ಮಧುಮೇಹ ವ್ಯಕ್ತಿಯೊಬ್ಬರು ಕೋವಿಡ್-ಪ್ರೇರಿತ ನ್ಯುಮೋನಿಯಾ ಮತ್ತು ತೀವ್ರ ಉಸಿರಾಟದ ತೊಂದರೆ ಸಿಂಡ್ರೋಮ್‌ನಿಂದ ಸಾವನ್ನಪ್ಪಿದ್ದಾರೆ.
ಈ ವರ್ಷದ ಜನವರಿಯಿಂದ ಮಹಾರಾಷ್ಟ್ರವು ಅತಿ ಹೆಚ್ಚು ಕೋವಿಡ್ ಸಂಬಂಧಿತ ಸಾವುಗಳನ್ನು (18) ವರದಿ ಮಾಡಿದೆ, ನಂತರ ಕೇರಳ (12), ದೆಹಲಿ ಮತ್ತು ಕರ್ನಾಟಕ (ತಲಾ 7), ತಮಿಳುನಾಡು (5), ಮತ್ತು ಉತ್ತರ ಪ್ರದೇಶ, ಪಂಜಾಬ್, ಮಧ್ಯಪ್ರದೇಶ ಮತ್ತು ಗುಜರಾತ್ (ತಲಾ 2) ಇವೆ. ಈ ಅವಧಿಯಲ್ಲಿ ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ಸಾವು ಸಂಭವಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ