ದೆಹಲಿ: ಭಾರತದಲ್ಲಿ ಸೋಮವಾರ 96,517 ಹೊಸ ಕೊರೊನಾವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಭಾನುವಾರ ದೇಶದಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿತ್ತು. ಕಳೆದ 24 ಗಂಟೆಗಳಲ್ಲಿ 445 ಮಂದಿ ಕೊವಿಡ್ನಿಂದ ಸಾವಿಗೀಡಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸೋಂಕಿತರಿದ್ದು 47,288 ಹೊಸ ಪ್ರಕರಣಗಳು ವರದಿಯಾಗಿವೆ. ಛತ್ತೀಸಗಡದಲ್ಲಿ 7,302 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 7,000 ಸೋಂಕು ಪ್ರಕರಣಗಳ ಗಡಿ ದಾಟಿದ ಎರಡನೇ ರಾಜ್ಯವಾಗಿದೆ .ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮಾಹಿತಿ ಪ್ರಕಾರ ಏಪ್ರಿಲ್ 5ರವರೆಗೆ 25,02,31,269 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ ಸೋಮವಾರ 12,11,612 ಮಾದರಿಗಳನ್ನು ಪರೀಕ್ಷಿಸಲಾಗಿದೆ.ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೆಬ್ಸೈಟ್ ಮಾಹಿತಿ ಪ್ರಕಾರ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 741830 ಆಗಿದೆ. ಇಲ್ಲಿಯವರೆಗೆ 1,16,82,136 ಮಂದಿ ಚೇತರಿಸಿಕೊಂಡಿದ್ದು , 1,65,101 ಮಂದಿ ಸಾವಿಗೀಡಾಗಿದ್ದಾರೆ.
ದೆಹಲಿಯಲ್ಲಿ ಕೊವಿಡ್ ಲಸಿಕೆ ಕೇಂದ್ರ 24ಗಂಟೆಗಳ ಕಾಲವೂ ತೆರೆದಿರಲಿದೆ
ದೆಹಲಿಯಲ್ಲಿ ಕೊವಿಡ್ ಪ್ರಕರಣಗಳು ಏರಿಕೆಯಾಗುತ್ತಲೇ ಇರುವುದರಿಂದ 24ಗಂಟೆಗಳ ಕಾಲವೂ ಲಸಿಕೆ ಕೇಂದ್ರ ತೆರೆದು ಕಾರ್ಯವೆಸಗಲಿದೆ. ದೆಹಲಿ ಆರೋಗ್ಯ ಸಚಿವಾಲಯವು ಇಂದು ಈ ಆದೇಶ ನೀಡಿದ್ದು, ನಾಳೆಯಿಂದ ಎಲ್ಲ ಲಸಿಕೆ ಕೇಂದ್ರಗಳು 24ಗಂಟೆಗಳ ಕಾಲ ತೆರೆದಿರಲಿದೆ.
ಕೊವಿಡ್ 2ನೇ ಅಲೆ: ದೆಹಲಿಯಲ್ಲಿ ರಾತ್ರಿ ಕರ್ಫ್ಯೂ ಸಾಧ್ಯತೆ
ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ದೆಹಲಿಯಲ್ಲಿ ರಾತ್ರಿ ಕರ್ಫ್ಯೂ ಹೇರುವ ಸಾಧ್ಯತೆ ಇದೆ. ಈ ಬಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯವರ ಕಚೇರಿ ಇಲ್ಲಿಯವರೆ ಪ್ರತಿಕ್ರಿಯೆ ನೀಡಿಲ್ಲ
ಬಂಗಾಳ: 5 ದಿನಗಳಲ್ಲಿ 6,700 ಕೊವಿಡ್ ಪ್ರಕರಣ ಪತ್ತೆ
ಪಶ್ಚಿಮ ಬಂಗಾಳದಲ್ಲಿ ಸೋಮವಾರ ಅತೀ ಹೆಚ್ಚು ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ ಇಲ್ಲಿ 1,957 ಪ್ರಕರಣಗಳು ವರದಿಯಾಗಿದ್ದು, 5 ದಿನಗಳ ಅವಧಿಯಲ್ಲಿ 6,700 ಮಂದಿಗೆ ಕೊವಿಡ್ ರೋಗ ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
Centre rushes 50 High Level Public Health teams to Maharashtra, Chhattisgarh and Punjab for COVID-19 control and containment measures.https://t.co/muLtnZyh3x@PMOIndia @drharshvardhan @AshwiniKChoubey @PIB_India @mygovindia @COVIDNewsByMIB @CovidIndiaSeva
— Ministry of Health (@MoHFW_INDIA) April 5, 2021
ಮಹಾರಾಷ್ಟ್ರ , ಛತ್ತೀಸಗಡ ಮತ್ತು ಪಂಜಾಬ್ ನಲ್ಲಿ ಕೊವಿಡ್ ಪ್ರಕರಣ ಏರಿಕೆಯಾಗುತ್ತಿರುವುದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ 50 ಉನ್ನತ ಮಟ್ಟದ ಸಾರ್ವಜನಿಕ ಆರೋಗ್ಯ ಕಾರ್ಯಕರ್ಚರ ತಂಡವನ್ನು ಕಳುಹಿಸಿದೆ.
ಗೋವಾದಲ್ಲಿ ಕೊವಿಡ್ ನಿರ್ಬಂಧ ಬಗ್ಗೆ ಚಿಂತನೆ: ವಿಶ್ವಜಿತ್ ರಾಣೆ
ಗೋವಾದಲ್ಲಿ ಕೊವಿಡ್ ಪ್ರಕರಣಗಳು ಏರಿಕೆಯಾಗುತ್ತಿದ್ದು, ಇದನ್ನು ನಿಯಂತ್ರಿಸಲು ನಿರ್ಬಂಧ ಹೇರುವ ಬಗ್ಗೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಜತೆ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ. ಗೋವಾದಲ್ಲಿ ಲಾಕ್ಡೌನ್ ಅಥವಾ ಕರ್ಫ್ಯೂ ಹೇರುವ ಯಾವುದೇ ಚಿಂತನೆ ಇಲ್ಲ ಎಂದು ಸೋಮವಾರ ಹೇಳಿದ್ದ ಸಾವಂತ್ ನೆರೆ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕರ್ನಾಟಕದ ಸ್ಥಿತಿಗತಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದಿದ್ದಾರೆ. ಸೋಮವಾರ ಗೋವಾದಲ್ಲಿ 24 ಹೊಸ ಪ್ರಕರಣಗಳು ಪತ್ತೆ ಆಗಿದ್ದು ಇಲ್ಲಿಯವರೆಗೆ 59,315 ಪ್ರಕರಣಗಳು ವರದಿಯಾಗಿದೆ.
(India sees 96 500 daily Coronavirus cases 445 Covid deaths were reported in the last 24 hours)
Published On - 10:10 am, Tue, 6 April 21