ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯುತ್ತಿದ್ದು, ವಿಶ್ವದ ಹಲವು ಗಣ್ಯರು ಸಭೆಗೆ ಆಗಮಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಏರ್ಪಡಿಸಿದ್ದ ಔತಣಕೂಟದಲ್ಲಿ ಭಾರತದ ವೈವಿಧ್ಯಮಯ ಸಂಗೀತವನ್ನು ಅನಾವರಣಗೊಳಿಸಲಾಯಿತು. ಗಂಧರ್ವ ಆಟೋದ್ಯಂ ಕಾರ್ಯಕ್ರಮದ ಪ್ರಮುಖ ಹೈಲೈಟ್ ಎಂದೇ ಹೇಳಬಹುದು, ಇದು ಹಿಂದೂಸ್ತಾನಿ, ಕರ್ನಾಟಕ, ಜಾನಪದ ಹಾಗೂ ಸಮಕಾಲೀನ ಸಂಗೀತವನ್ನು ಶಾಸ್ತ್ರೀಯ ವಾದ್ಯಗಳೊಂದಿಗೆ ಪ್ರದರ್ಶಿಸುವ ಕಲೆಯಾಗಿದೆ. ಭಾರತದಾದ್ಯಂತ ಸಂಗೀತ ವಾದ್ಯಗಳ ಸೊಗಸಾದ ಸ್ವರಮೇಳವನ್ನು ಒಳಗೊಂಡಿರುವ ಒಂದು ಅನನ್ಯ ಸಂಗೀತ ಸಂಯೋಜನೆಯಾಗಿದೆ.
ಹಿಂದೂಸ್ತಾನಿ ಸಂಗೀತ: ರಾಗ್ ರ್ದಾರಿ ಕಾಂಡ ಹಾಗೂ ಕಾಫಿ ಖೇಲತ್ ಹೋರಿ
ಜಾನಪದ ಸಂಗೀತ: ರಾಜಸ್ಥಾನ-ಕೇಸರಿಯಾ ಬಾಲಮ್, ಘೂಮರ್ ಮತ್ತು ನಿಂಬುಡಾ ನಿಂಬುಡಾ
ಕರ್ನಾಟಕ ಸಂಗೀತ: ರಾಗ ಮೋಹನಮ್-ಸ್ವಾಗತಂ ಕೃಷ್ಣ
ಜಾನಪದ ಸಂಗೀತ: ಕಾಶ್ಮೀರ, ಸಿಕ್ಕಿಂ ಮತ್ತು ಮೇಘಾಲಯ- ಬೊಮ್ರು ಮೊಬ್ರು
ಹಿಂದೂಸ್ತಾನಿ ಸಂಗೀತ-ರಾಗ ದೇಶ್ ಮತ್ತು ಎಕ್ಲಾ ಚಲೋ ರೆ
ಜಾನಪದ ಸಂಗೀತ: ಮಹಾರಾಷ್ಟ್ರ-ಅಬೀರ್ ಗುಲಾಲ್, ರೇಷ್ಮಾ ಚಾರೆ ಘನಿ, ಗಜಾರ್
ಕರ್ನಾಟಕ ಸಂಗೀತ-ರಾಗ ಮಧ್ಯಮಾವತಿ, ಲಕ್ಷ್ಮೀ ಬಾರಮ್ಮ
ಜಾನಪದ ಸಂಗೀತ: ಗುಜರಾತ್ ಮೊಬಾರ್ನಿ ಮತ್ತು ರಾಮದೇವ್ ಪೀರ್ ಹೆಲೋ
ಸಾಂಪ್ರದಾಯಿಕ ಹಾಗೂ ಭಕ್ತಿ ಸಂಗೀತ: ಪಶ್ಚಿಮ ಬಂಗಾಳ ಭಟಿಯಾಲಿ ಹಾಗೂ ಅಚ್ಯುತಮ್ ಕೇಶವಂ
ಜಾನಪದ ಸಂಗೀತ:ಜಾನಪದ ಸಂಗೀತ : ಕರ್ನಾಟಕ – ಮಧು ಮೇಕಮ್ ಕಣ್ಣೈ, ಕಾವೇರಿ ಚಿಂದು ಮತ್ತು ಆಡ್ ಪಂಬೆ
ಭಕ್ತಿ ಸಂಗೀತ : ಶ್ರೀ ರಾಮಚಂದ್ರ ಕೃಪಾಲು , ವೈಷ್ಣವ ಜನ ಟು ಮತ್ತು ರಘುಪತಿ ರಾಘವ
ಹಿಂದೂಸ್ತಾನಿ, ಕರ್ನಾಟಕ ಮತ್ತು ಜಾನಪದ ಸಂಗೀತ : ರಾಗ್ ಮತ್ತು ಜಾನಪದ ಸಂಗೀತ ಭೈರವಿ- ದಾದ್ರಾ, ಮಿಲೇ ಸುರ್ ಮೇರಾ ತುಮ್ಹಾರಾ .
ಮತ್ತಷ್ಟು ಓದಿ: ಜಿ20 ಶೃಂಗಸಭೆಯು ವಿಶ್ವದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಬಹುದೆಂದು ಸಾಬೀತುಪಡಿಸಿದೆ: ಜೋ ಬೈಡನ್
ನಮ್ಮ ಅಪ್ರತಿಮ ಮತ್ತು ಅನನ್ಯ ಸಂಗೀತ ಪರಂಪರೆಯನ್ನು ಪ್ರದರ್ಶಿಸುವ ವಿವಿಧ ಅಪರೂಪದ ವಾದ್ಯಗಳ ಬಳಕೆಯನ್ನು ಒಳಗೊಳ್ಳುತ್ತವೆ.
ವಾದ್ಯಗಳಲ್ಲಿ ಸುರ್ಸಿಂಗಾರ್, ಮೋಹನ್ ವೀಣೆ, ಜಲತರಂಗ್, ಜೋಡಿಯ ಪಾವಾ, ಧಂಗಲಿ, ದಿಲ್ರುಬಾ, ಸಾರಂಗಿ, ಕಾಮೈಚಾ, ಮತ್ತ ಕೋಕಿಲ ವೀಣೆ, ನಲ್ತರಂಗ್, ತುಂಗ್‌ಬುಕ್, ಪಖಾವಾಜ್, ರಬಾಬ್, ರಾವಣಹತ್ತ, ತಾಲ್ ದಾನ, ರುದ್ರ ವೀಣೆ, ಇತ್ಯಾದಿ ಬಳಕೆ ಮಾಡಲಾಗುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ