ಭಾರತ-ತಾಂಜಾನಿಯಾ ಫ್ರೆಂಡ್ಲಿ ರನ್: ಫಿಟ್‌ನೆಸ್ ಐಕಾನ್ ಮಿಲಿಂದ್ ಸೋಮನ್ ಭಾಗಿ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 31, 2023 | 8:23 PM

India-Tanzania friendly run: ಆಫ್ರಿಕನ್ ದೇಶವಾದ ತಾಂಜಾನಿಯಾದಲ್ಲಿರುವ ಭಾರತೀಯ ಹೈಕಮಿಷನ್ ಮತ್ತು ತಾಂಜಾನಿಯಾದ ಸಂಸ್ಕೃತಿ, ಕ್ರೀಡೆ ಮತ್ತು ಕಲೆಗಳ ಸಚಿವಾಲಯವು ನಿನ್ನೆ 120 ಕಿಲೋಮೀಟರ್ ಭಾರತ ಮತ್ತು ತಾಂಜಾನಿಯಾ ಸ್ನೇಹ ಓಟವನ್ನು ಆಯೋಜಿಸಲಾಗಿತ್ತು. ಭಾರತೀಯ ಫಿಟ್‌ನೆಸ್ ಐಕಾನ್ ಮಿಲಿಂದ್ ಸೋಮನ್ ಭಾಗವಹಿಸಿದ್ದರು.

ಭಾರತ-ತಾಂಜಾನಿಯಾ ಫ್ರೆಂಡ್ಲಿ ರನ್: ಫಿಟ್‌ನೆಸ್ ಐಕಾನ್ ಮಿಲಿಂದ್ ಸೋಮನ್ ಭಾಗಿ
ಭಾರತ-ತಾಂಜಾನಿಯಾ ಫ್ರೆಂಡ್ಲಿ ರನ್
Follow us on

ಆಫ್ರಿಕನ್ ದೇಶವಾದ ತಾಂಜಾನಿಯಾದಲ್ಲಿರುವ ಭಾರತೀಯ ಹೈಕಮಿಷನ್ ಮತ್ತು ತಾಂಜಾನಿಯಾದ ಸಂಸ್ಕೃತಿ, ಕ್ರೀಡೆ ಮತ್ತು ಕಲೆಗಳ ಸಚಿವಾಲಯವು ನಿನ್ನೆ 120 ಕಿಲೋಮೀಟರ್ ಭಾರತ ಮತ್ತು ತಾಂಜಾನಿಯಾ ಸ್ನೇಹ ಓಟ (India-Tanzania friendly run) ವನ್ನು ಆಯೋಜಿಸಲಾಗಿತ್ತು. ಭಾರತೀಯ ಫಿಟ್‌ನೆಸ್ ಐಕಾನ್, ಬಾಲಿವುಡ್ ನಟ ಮಿಲಿಂದ್ ಸೋಮನ್ ಅವರು ತಾಂಜಾನಿಯಾ ಮತ್ತು ಭಾರತ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ್ದರು. 4 ಸಾವಿರಕ್ಕೂ ಹೆಚ್ಚು ಜನರು ಈ ಒಂದು ಸ್ನೇಹದ ಓಟದಲ್ಲಿ ಭಾಗವಹಿಸಿದ್ದರು.

ತಾಂಜಾನಿಯಾದ ಕಾನೂನು ಮತ್ತು ಸಾಂವಿಧಾನಿಕ ವ್ಯವಹಾರಗಳ ಸಚಿವ ಡಾ. ಪಿಂಡಿ ಚಾನಾ ಅವರು ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದ್ದು, ಉಭಯ ದೇಶಗಳ ಈ ಉಪಕ್ರಮವನ್ನು ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಆಯುಕ್ತೆ ಬಿನಯ ಎಸ್. ಪ್ರಧಾನ್​, ಜನರ ನಡುವಿನ ಸಂಬಂಧವನ್ನು ಉತ್ತೇಜಿಸಲು ಮತ್ತು ಫಿಟ್ ಇಂಡಿಯಾ ಆಂದೋಲನವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಈ ಉಪಕ್ರಮ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

ಭಾರತ ಮತ್ತು ತಾಂಜಾನಿಯಾದ ಜನರ ನಡುವೆ ಪರಸ್ಪರ ವ್ಯಾಪಾರ ಸಂಬಂಧ ಹೊಂದಿರುವ ಸುದೀರ್ಘ ಇತಿಹಾಸವಿದೆ. ಈ ವರ್ಷ ಭಾರತ ಮತ್ತು ತಾಂಜಾನಿಯಾ ನಡುವಿನ ಸಂಬಂಧಕ್ಕೆ ಕಾರ್ಯತಂತ್ರದ ಪಾಲುದಾರಿಕೆಯ ಸ್ಥಾನಮಾನವನ್ನು ನೀಡಲಾಗಿದೆ.

ಇದನ್ನೂ ಓದಿ: ಮದ್ಯ, ಕರ್ಕಶ ಸಂಗೀತ, ಜತೆಗೆ ಈಶ್ವರನ ಚಿತ್ರ: ವಿವಾದ ಹುಟ್ಟುಹಾಕಿದ ಗೋವಾ ಸನ್​ ಬರ್ನ್​ ಫೆಸ್ಟಿವಲ್

ಕಳೆದ ತಿಂಗಳು ನವೆಂಬರ್‌ನಲ್ಲಿ, ಐಐಟಿ ಮದ್ರಾಸ್‌ನ ಮೊದಲ ಕಡಲಾಚೆಯ ಕ್ಯಾಂಪಸ್​ನ್ನು ಸಹ ಜಂಜಿಬಾರ್‌ನಲ್ಲಿ ಉದ್ಘಾಟಿಸಲಾಗಿತ್ತು. ಇದು ತಾಂಜಾನಿಯಾದೊಂದಿಗಿನ ಭಾರತದ ಸಂಬಂಧವನ್ನು ಮತ್ತು ಜಾಗತಿಕ ಬದ್ಧತೆಯನ್ನು ಪ್ರದರ್ಶಿಸುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:22 pm, Sun, 31 December 23