ಮದ್ಯ, ಕರ್ಕಶ ಸಂಗೀತ, ಜತೆಗೆ ಈಶ್ವರನ ಚಿತ್ರ: ವಿವಾದ ಹುಟ್ಟುಹಾಕಿದ ಗೋವಾ ಸನ್ ಬರ್ನ್ ಫೆಸ್ಟಿವಲ್
ಒಂದೆಡೆ ಮದ್ಯ ಇನ್ನೊಂದೆಡೆ ಕರ್ಕಶವಾದ ಸಂಗೀತ ಅದರ ಮಧ್ಯೆ ಎಲ್ಇಡಿ ಪರದೆ ಮೇಲೆ ಈಶ್ವರನ ಚಿತ್ರವಿಟ್ಟಿದ್ದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಸಂಬಂಧ ಇದೀಗ ವಿವಾದ ಭುಗಿಲೆದ್ದಿದೆ. ಡಿಸೆಂಬರ್ 28 ರಿಂದ ಗೋವಾದಲ್ಲಿ ಆರಂಭವಾದ ಸನ್ ಬರ್ನ್ ಫೆಸ್ಟಿವಲ್(Sunburn Festival) ಇಂದು ಕೊನೆಗೊಳ್ಳುತ್ತಿದೆ.

ಆಮ್ ಆದ್ಮಿ ಪಕ್ಷದ ಗೋವಾ ಅಧ್ಯಕ್ಷ ಅಮಿತ್ ಪಾಲೇಕರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಸನ್ ಬರ್ನ್ ಫೆಸ್ಟಿವಲ್ನಲ್ಲಿ ನೃತ್ಯ, ಸಂಗೀತ, ಮದ್ಯದ ಮಧ್ಯೆ ಶಿವನ ಚಿತ್ರವನ್ನು ಇರಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಸನಾತನ ಧರ್ಮಕ್ಕೆ ಧಕ್ಕೆಯಾದಂತಾಗಿದೆ ಎಂದಿದ್ದಾರೆ.
ಸನಾತನ ಧರ್ಮದ ಸಮಗ್ರತೆಗೆ ಧಕ್ಕೆ ಉಂಟಾಗಿರುವುದರಿಂದ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಎಪಿ ನಾಯಕ ಒತ್ತಾಯಿಸಿದ್ದಾರೆ. ಸನ್ ಬರ್ನ್ ಇಡಿಎಂ ಉತ್ಸವದ ಆಯೋಜಕರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ಶುಕ್ರವಾರ ರಾತ್ರಿ ಸನ್‌ಬರ್ನ್ ಆಯೋಜಕರ ವಿರುದ್ಧ ಕಾಂಗ್ರೆಸ್ ಮುಖಂಡ ವಿಜಯ್ ಭಿಕೆ ಮಾಪುಸಾದಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ.
ಉದ್ದೇಶಪೂರ್ವಕವಾಗಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಭಿಕೆ ದೂರಿನಲ್ಲಿ ತಿಳಿಸಿದ್ದಾರೆ. 25 ಲಕ್ಷ ಮೌಲ್ಯದ ಮೊಬೈಲ್ ಫೋನ್ಗಳ ಕಳ್ಳತನವಾಗಿದೆ. ನಿವಾರದಂದು ಗೋವಾ ಪೊಲೀಸರು ಗ್ಯಾಂಗ್‌ನ ಏಳು ಸದಸ್ಯರನ್ನು ಬಂಧಿಸಿದ್ದಾರೆ, ಇವರೆಲ್ಲರೂ ಕದಿಯುವ ದೃಷ್ಟಿಯಿಂದಲೇ ಮುಂಬೈನಿಂದ ಬಂದಿದ್ದರು ಎನ್ನಲಾಗಿದೆ.
ಮತ್ತಷ್ಟು ಓದಿ: ತೆಲಂಗಾಣದಲ್ಲಿ ನಡೆಯಬೇಕಿದ್ದ ಸನ್ ಬರ್ನ್ ಫೆಸ್ಟಿವಲ್ ರದ್ದು
ಈ ಸಂದರ್ಭದಲ್ಲಿ ಆರೋಪಿಗಳ ಕದ್ದ 29 ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಉಪ ವರಿಷ್ಠಾಧಿಕಾರಿ ಜಿವ್ಬಾ ದಳವಿ ತಿಳಿಸಿದ್ದಾರೆ.
ಇಂತಹ ಕೃತ್ಯಗಳು ನಡೆಯಬಹುದು ಎಂದು ಪೊಲೀಸರು ಮೊದಲೇ ಸಿದ್ಧತೆ ಮಾಡಿಕೊಂಡಿದ್ದರು. ಹಾಗಾಗಿ ಪೊಲೀಸರು ಸಾಮಾನ್ಯ ಉಡುಪಿನಲ್ಲಿ ತೆರಳಿದ್ದರು. ಅಷ್ಟೇ ಅಲ್ಲದೆ 82 ಲಕ್ಷ ಮೌಲ್ಯದ ಪಾಸ್ಗಳನ್ನು ಕದ್ದು ಮಾರಾಟ ಮಾಡಲು ಯತ್ನಿಸಿದ ಐವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ