AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣದಲ್ಲಿ ನಡೆಯಬೇಕಿದ್ದ ಸನ್​ ಬರ್ನ್​ ಫೆಸ್ಟಿವಲ್ ರದ್ದು

ಹೊಸ ವರ್ಷದ ಆರಂಭದಲ್ಲಿ ಹೈದರಾಬಾದ್‌ನಲ್ಲಿ ನಡೆಯಬೇಕಿದ್ದ ಸನ್‌ಬರ್ನ್ ಫೆಸ್ಟಿವಲ್(Sunburn Festival)​ ಅನ್ನು ರದ್ದುಗೊಳಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಎಂದು ಪೊಲೀಸರು ಹೇಳಿರುವ ಕಾರಣ, ಇದೀಗ ಬುಕ್ ಮೈ ಶೋ ಕಂಪನಿಯು ಟಿಕೆಟ್ ಮಾರಾಟವನ್ನು ನಿಲ್ಲಿಸಿದೆ. ಅನುಮತಿ ಇಲ್ಲದೇ ಟಿಕೆಟ್ ಮಾರಾಟ ಮಾಡುತ್ತಿದ್ದ ಬುಕ್ ಮೈ ಶೋ ವಿರುದ್ಧ ಪ್ರಕರಣ ದಾಖಲಾಗಿದೆ.

ತೆಲಂಗಾಣದಲ್ಲಿ ನಡೆಯಬೇಕಿದ್ದ ಸನ್​ ಬರ್ನ್​ ಫೆಸ್ಟಿವಲ್ ರದ್ದು
ಸನ್​ಬರ್ನ್​ ಫೆಸ್ಟಿವಲ್ Image Credit source: Eenadu.com
ನಯನಾ ರಾಜೀವ್
|

Updated on: Dec 26, 2023 | 2:17 PM

Share

ಹೊಸ ವರ್ಷದ ಆರಂಭದಲ್ಲಿ ಹೈದರಾಬಾದ್‌ನಲ್ಲಿ ನಡೆಯಬೇಕಿದ್ದ ಸನ್‌ಬರ್ನ್ ಫೆಸ್ಟಿವಲ್(Sunburn Festival)​ ಅನ್ನು ರದ್ದುಗೊಳಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಎಂದು ಪೊಲೀಸರು ಹೇಳಿರುವ ಕಾರಣ, ಇದೀಗ ಬುಕ್ ಮೈ ಶೋ ಕಂಪನಿಯು ಟಿಕೆಟ್ ಮಾರಾಟವನ್ನು ನಿಲ್ಲಿಸಿದೆ. ಅನುಮತಿ ಇಲ್ಲದೇ ಟಿಕೆಟ್ ಮಾರಾಟ ಮಾಡುತ್ತಿದ್ದ ಬುಕ್ ಮೈ ಶೋ ವಿರುದ್ಧ ಪ್ರಕರಣ ದಾಖಲಾಗಿದೆ.

ಬುಕ್ ಮೈ ಶೋ ಮತ್ತು ಸನ್ ಬರ್ನ್ ಆಯೋಜಕರಿಗೆ ಪೊಲೀಸರು ಈಗಾಗಲೇ ನೋಟಿಸ್ ಜಾರಿ ಮಾಡಿದ್ದಾರೆ. ಪೊಲೀಸ್ ಪ್ರಕರಣದ ನಂತರ, ಹೈದರಾಬಾದ್ ಕಾರ್ಯಕ್ರಮವು ಬುಕ್ ಮೈ ಶೋನಲ್ಲಿ ಕಾಣಿಸಿಲ್ಲ. ಹೊಸ ವರ್ಷದ ನೆಪದಲ್ಲಿ ನಡೆಯುವ ಕಾರ್ಯಕ್ರಮಗಳ ಮೇಲೆ ನಿಗಾ ಇಡುವಂತೆ ತೆಲಂಗಾಣ ಸಿಎಂ ರೇವಂತ್ ಆದೇಶ ನೀಡಿದ್ದರು.

ಹೀಗಾಗಿ ಸನ್‌ಬರ್ನ್ ಮತ್ತು ಬುಕ್‌ಮೈಶೋನಂತಹ ಟಿಕೆಟ್‌ಗಳನ್ನು ಮಾರಾಟ ಮಾಡುವ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವ ಕಂಪನಿಗಳಿಗೆ ಪೊಲೀಸ್ ಇಲಾಖೆಯಿಂದ ಅನುಮತಿ ಕಡ್ಡಾಯವಾಗಿದೆ ಎಂದು ಸೈಬರಾಬಾದ್ ಸಿಪಿ ಮಹಂತಿ ಹೇಳಿದ್ದಾರೆ. ಸನ್‌ಬರ್ನ್‌ಗೆ ಯಾವುದೇ ಪರವಾನಗಿ ನೀಡಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸನ್​ ಬರ್ನ್​ ಫೆಸ್ಟಿವಲ್ ವಿದೇಶಿ ಹಬ್ಬ, ಇದೊಂದು ಸಂಗೀತ ನೃತ್ಯೋತ್ಸವ, ಜನರು ಮನ ಬಂದಂತೆ ನೃತ್ಯ ಮಾಡುತ್ತಾರೆ. 2007ರಲ್ಲಿ ಈ ಫೆಸ್ಟಿವಲ್ ಗೋವಾವನ್ನು ಪ್ರವೇಶಿಸಿತ್ತು. ವರ್ಷದಲ್ಲಿ ಮೂರು ದಿನಗಳ ಕಾಲ ಇದು ನಡೆಯುತ್ತಿತ್ತು.

ಮತ್ತಷ್ಟು ಓದಿ: TV9 Festival Of India: ನಾಲ್ಕನೇ ದಿನಕ್ಕೆ ಕಾಲಿಟ್ಟ ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ, ವರ್ಣರಂಚಿತ ಕಾರ್ಯಕ್ರಮಗಳ ವೈಭವ

ಕಾರ್ಯಕ್ರಮದಲ್ಲಿ ಆಹಾರ ಮತ್ತು ಪಾನೀಯಗಳು ಸಹ ಬಹಳ ವಿಶೇಷವಾಗಿವೆ. ತಿಂಡಿ-ತಿನಿಸು ಮಳಿಗೆಗಳ ಜತೆಗೆ ಶಾಪಿಂಗ್ ಸ್ಟಾಲ್ ಗಳನ್ನೂ ಹಾಕಲಾಗುತ್ತದೆ.

2007 ರಿಂದ 2015 ರವರೆಗೆ ನಿರಂತರವಾಗಿ ನಡೆದ ಸನ್ ಬರ್ನ್ ಈವೆಂಟ್ ಅಡೆತಡೆಗಳನ್ನು ಎದುರಿಸಿತು. 2016 ರಲ್ಲಿ, ಗೋವಾ ಸರ್ಕಾರವು ಸನ್‌ಬರ್ನ್ ಶೋಗೆ ಅನುಮತಿಯನ್ನು ರದ್ದುಗೊಳಿಸಿತು. ಸನ್ ಬರ್ನ್ ಕಾರ್ಯಕ್ರಮ ನಡೆಯಬಾರದು ಎಂದು ಆದೇಶ ಹೊರಡಿಸಿದೆ. ಇದರಿಂದಾಗಿ 2016 ಮತ್ತು 2017ರಲ್ಲಿ ಪುಣೆಯಲ್ಲಿ ಸನ್ ಬರ್ನ್ ನಡೆದಿತ್ತು. ಗೋವಾದಲ್ಲಿ ಸರ್ಕಾರ ಬದಲಾವಣೆಯೊಂದಿಗೆ, ಅದು 2019 ರಲ್ಲಿ ಗೋವಾಕ್ಕೆ ಮರಳಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್