ನವದೆಹಲಿ: ಭಾರತದ 20 ಸೈನಿಕರನ್ನು ಚೀನಾ ಹತ್ಯೆ ಮಾಡಿದ ನಂತರ ಅದರ ವಿರುದ್ಧದ ಭಾರತದ ವಾಣಿಜ್ಯ ಸಮರ ಮತ್ತಷ್ಟು ತಾರಕಕ್ಕೇರಿದೆ. ಚೀನಾದಿಂದ ಆಮದಾಗುವ ಉತ್ಪನ್ನಗಳನ್ನು ನಿಯಂತ್ರಿಸಲು ಭಾರತ ಈಗ ಆತ್ಮನಿರ್ಭರ ಭಾರತ ಹೆಸರಿನಲ್ಲಿ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಅದುವೇ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ -BIS ಸ್ಟ್ರೈಕ್ .
ಹೌದು ಭಾರತ ಮತ್ತು ಚೀನಾ ಗಡಿಯ ಗಲ್ವಾನ್‌ನಲ್ಲಿ ಭಾರತದ ಸೈನಿಕರು ಚೀನಾದ ಕುಟಿಲತೆಗೆ ಹುತಾತ್ಮರಾಗುತ್ತಿದ್ದಂತೆ ಅದರ ವಿರುದ್ಧ ಭಾರತದಲ್ಲಿ ಎದ್ದ ಆಕ್ರೋಶ ಇನ್ನೂ ಕಡಿಮೆಯಾಗಿಲ್ಲ.
ಇದನ್ನೇ ಅಸ್ತ್ರವಾಗಿಸಿಕೊಂಡು ಭಾರತ ಸರ್ಕಾರ ಚೀನಾದ 106 ಆಪ್‌ಗಳನ್ನು ಬ್ಯಾನ್ ಮಾಡಿದೆ. ಈಗ ಚೀನಾದ ಸುಮಾರು 371 ಬಗೆಯ ವಸ್ತುಗಳನ್ನು ಭಾರತೀಯ ಗುಣಮಟ್ಟದ ಅಧೀನದಲ್ಲಿ ಅಂದ್ರೆ ಇಂಡಿಯನ್ ಸ್ಟ್ಯಾಂಡರ್ಡ್ ಮಾನದಂಡದಡಿ ಸೇರಿಸಲು ಸಜ್ಜಾಗಿದೆ.
ಅಂದ್ರೆ ಚೀನಾದಿಂದ ಆಮದಾಗುವ ಟಾಯ್, ಗ್ಲಾಸ್, ಸ್ಟೀಲ್, ಟೆಲಿಕಾಮ್, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ 371 ಕೆಟಗೆರಿಯ ವಸ್ತುಗಳು ಭಾರತದ BIS ಸೂಚಿಸಿದ ಗುಣಮಟ್ಟದಲ್ಲಿರಲೇಬೇಕು.
ಇಲ್ಲದಿದ್ರೆ ಇಂಥ ವಸ್ತುಗಳನ್ನು ವಾಪಸ್ ಕಳಿಸಲಾಗುವದು. ಇದಕ್ಕಾಗಿ ಭಾರತದ ಪ್ರಮುಖ ಬಂದರುಗಳಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಅಧಿಕಾರಿಗಳನ್ನ ನೇಮಿಸಲಾಗುತ್ತೆ. ಅವರು ಚೀನಾದಿಂದ ಆಮದಾದ ವಸ್ತುಗಳನ್ನು ಸ್ಥಳದಲ್ಲಿಯೇ ಪರಿಶೀಲಿಸುತ್ತಾರೆ. ಈ ಹೊಸ ನೀತಿ ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಜಾರಿಯಾಗುತ್ತದೆ.