ಹೆಲ್ಮೆಟ್ ಹಾಕಿಲ್ಲ ಅಂತಾ.. ಬೈಕ್ ಸವಾರನ ಹಣೆಗೆ Key ಯಿಂದ ಇರಿದೇಬಿಟ್ಟ ಖಾಕಿ!
ಡೆಹ್ರಾಡೂನ್: ಹೆಲ್ಮೆಟ್ ಧರಿಸದ ಬೈಕ್ ಸವಾರನಿಗೆ ಪೊಲೀಸರು ವಾಹನದ ಬೀಗದ ಕೈಯಿಂದಲೇ ಇರಿದಿರುವ ಘಟನೆ ಉತ್ತರಾಖಂಡ್ನ ಉಧಮ್ ಸಿಂಗ್ ಜಿಲ್ಲೆಯ ರುದ್ರಾಪುರದಲ್ಲಿ ನಡೆದಿದೆ. ನಿನ್ನೆ ರಾತ್ರಿ ಬೈಕ್ಗೆ ಪೆಟ್ರೋಲ್ ತುಂಬಿಸಲು ಸ್ನೇಹಿತನೊಟ್ಟಿಗೆ ತೆರಳಿದ ಯುವಕನನ್ನ ಉತ್ತರಾಖಂಡದ ನಗರ ಗಸ್ತು ಪಡೆಯ ಮೂವರು ಸಿಬ್ಬಂದಿ ತಡೆದಿದ್ದಾರೆ. ಚೆಕ್ಪಾಯಿಂಟ್ ಕರ್ತವ್ಯದಲ್ಲಿದ್ದ ಸಿಬ್ಬಂದಿ ನೀನು ಹೆಲ್ಮೆಟ್ ಯಾಕೆ ಧರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ಪ್ರಕರಣ ವಿಕೋಪಕ್ಕೆ ತಿರುಗಿದೆ. ಗಲಾಟೆಯ ಭರದಲ್ಲಿ ಪೊಲೀಸರು ಯುವಕನ ಬೈಕ್ ಬೀಗದ […]
ಡೆಹ್ರಾಡೂನ್: ಹೆಲ್ಮೆಟ್ ಧರಿಸದ ಬೈಕ್ ಸವಾರನಿಗೆ ಪೊಲೀಸರು ವಾಹನದ ಬೀಗದ ಕೈಯಿಂದಲೇ ಇರಿದಿರುವ ಘಟನೆ ಉತ್ತರಾಖಂಡ್ನ ಉಧಮ್ ಸಿಂಗ್ ಜಿಲ್ಲೆಯ ರುದ್ರಾಪುರದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಬೈಕ್ಗೆ ಪೆಟ್ರೋಲ್ ತುಂಬಿಸಲು ಸ್ನೇಹಿತನೊಟ್ಟಿಗೆ ತೆರಳಿದ ಯುವಕನನ್ನ ಉತ್ತರಾಖಂಡದ ನಗರ ಗಸ್ತು ಪಡೆಯ ಮೂವರು ಸಿಬ್ಬಂದಿ ತಡೆದಿದ್ದಾರೆ. ಚೆಕ್ಪಾಯಿಂಟ್ ಕರ್ತವ್ಯದಲ್ಲಿದ್ದ ಸಿಬ್ಬಂದಿ ನೀನು ಹೆಲ್ಮೆಟ್ ಯಾಕೆ ಧರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ಪ್ರಕರಣ ವಿಕೋಪಕ್ಕೆ ತಿರುಗಿದೆ. ಗಲಾಟೆಯ ಭರದಲ್ಲಿ ಪೊಲೀಸರು ಯುವಕನ ಬೈಕ್ ಬೀಗದ ಕೈಯನ್ನ ಕಸಿದು ಆತನ ಹಣೆಗೆ ಇರಿದುಬಿಟ್ಟರಂತೆ.
ಮೂವರು ಪೊಲೀಸರನ್ನ ಅಮಾನತು ಕೊನೆಗೆ, ಇರಿತದಿಂದ ತೀವ್ರ ರಕ್ತಸ್ರಾವವಾದ ಯುವಕನನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೊತೆಗೆ, ಪೊಲೀಸರ ವಿರುದ್ಧ ಪ್ರತಿಭಟನೆಗೂ ಇಳಿದಿದ್ದಾರೆ. ಸ್ಥಳೀಯ ಶಾಸಕ ರಾಜ್ಕುಮಾರ್ ಠುಕ್ರಾಲ್ ಮಧ್ಯ ಪ್ರವೇಶಿಸಿದ ಮೇಲೆ ಪ್ರತಿಭಟನೆಯನ್ನ ಕೈಬಿಡಲಾಯ್ತು.
ಇನ್ನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮೂವರು ಪೊಲೀಸರನ್ನ ಅಮಾನತ್ತು ಮಾಡಲಾಗಿದೆ. ಜೊತೆಗೆ, ತನಿಖೆಗೆ ಕೂಡ ಆದೇಶ ನೀಡಲಾಗಿದೆ.
उत्तराखंड के ऊधमसिंह नगर में बाइक सवार से चेकिंग के दौरान कहासुनी में पुलिसकर्मियों ने बाइक की चाबी ही माथे में घुसा दी। तीन पुलिसकर्मियों को सस्पेंड तो कर दिया लेकिन ऐसे पुलिसकर्मी सड़क और थाने पर ड्यूटी देने लायक नहीं है। pic.twitter.com/vzn0VVIHBc
— Jitender Sharma (@capt_ivane) July 28, 2020
Published On - 2:14 pm, Tue, 28 July 20