ದೆಹಲಿ: ಕೊರೊನಾ ಲಸಿಕೆ ವಿತರಣೆಗೆ ಭಾರತದಲ್ಲಿ ದಿನಾಂಕ ನಿಗದಿಯಾಗಿದೆ. ಇಂದು ಪ್ರಧಾನ ಮಂತ್ರಿ ಜೊತೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಗಿದ್ದು, ಜನವರಿ 16ರಿಂದ ದೇಶಾದ್ಯಂತ ಕೊರೊನಾ ಲಸಿಕೆ ವಿತರಣೆ ಆಗಲಿದೆ.
ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್, ಆರೋಗ್ಯ ಕಾರ್ಯಕರ್ತರು ಮತ್ತು ಫ್ರಂಟ್ಲೈನ್ ವಾರಿಯರ್ಸ್ ಲಸಿಕೆ ಪಡೆಯಲಿದ್ದಾರೆ. ನಂತರ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಿಸಲು ಉದ್ದೇಶಿಸಲಾಗಿದೆ. ಸದ್ಯ 3 ಕೋಟಿ ಕೊರೊನಾ ವಾರಿಯರ್ಸ್ ಲಸಿಕೆ ಸ್ವೀಕರಿಸಲಿದ್ದು, ಒಟ್ಟು 27 ಕೋಟಿ ಡೋಸ್ ಕೊರೊನಾ ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರ ಸಿದ್ಧವಾಗಿದೆ.