ದೇಶದ ಮೂಲೆ ಮೂಲೆಗೂ ಹಾರಲಿವೆ ಕೊರೊನಾ ಲಸಿಕೆ ಹೊತ್ತ ವಿಮಾನಗಳು!

| Updated By: ಸಾಧು ಶ್ರೀನಾಥ್​

Updated on: Jan 08, 2021 | 11:56 AM

ಸಾಗಾಟದ ಸಂದರ್ಭದಲ್ಲಿ 24 ತಾಸಿಗೂ ಅಧಿಕ ಕಾಲ ಲಸಿಕೆಯನ್ನು ಕಡಿಮೆ ಉಷ್ಣಾಂಶದಲ್ಲಿ ಶೇಖರಿಸಿಬಲ್ಲ ಉಪಕರಣಗಳು ಹಾಗೂ ಅದನ್ನು ನಿರ್ವಹಿಸಲು ಬೇಕಾದ ಸಿಬ್ಬಂದಿ ವರ್ಗವನ್ನು ಸಿದ್ಧಪಡಿಸಲಾಗಿದೆ.

ದೇಶದ ಮೂಲೆ ಮೂಲೆಗೂ ಹಾರಲಿವೆ ಕೊರೊನಾ ಲಸಿಕೆ ಹೊತ್ತ ವಿಮಾನಗಳು!
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ದೇಶಾದ್ಯಂತ ಕೊರೊನಾ ಲಸಿಕೆ ವಿತರಿಸಲು ಭಾರತೀಯ ವಾಯುಸೇನೆ ಮತ್ತು ನಾಗರಿಕ ವಿಮಾನಯಾನವನ್ನು ಪ್ರಮುಖವಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ವಾಯಸೇನೆಗೆ ಸೇರಿದ C-130Js ಮತ್ತು AN-32s ಏರ್​ಕ್ರಾಫ್ಟ್​ ಹಾಗೂ ನಾಗರಿಕ ವಿಮಾನಯಾನಗಳನ್ನು ಬಳಸಿ ದೇಶದ ಮೂಲೆಮೂಲೆಗೆ ಕೊರೊನಾ ಲಸಿಕೆ ತಲುಪಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಸಾಗಣೆ ಸಂದರ್ಭದಲ್ಲಿ 24 ತಾಸಿಗೂ ಅಧಿಕ ಕಾಲ ಲಸಿಕೆಯನ್ನು ಕಡಿಮೆ ಉಷ್ಣಾಂಶದಲ್ಲಿ ಶೇಖರಿಸಿಬಲ್ಲ ಉಪಕರಣಗಳು ಹಾಗೂ ಅದನ್ನು ನಿರ್ವಹಿಸಲು ಬೇಕಾದ ಸಿಬ್ಬಂದಿ ವರ್ಗವನ್ನು ಸಿದ್ಧಪಡಿಸಲಾಗಿದೆ ಎಂದು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ನಾಗರಿಕ ವಿಮಾನಯಾನದ ಮೂಲಕ ದೊಡ್ಡಮಟ್ಟದ ವಿತರಣೆ ಆಗಲಿದೆ. ಭಾರತ್​ ಬಯೋಟೆಕ್​ ಸಂಸ್ಥೆಯ ಕೊವ್ಯಾಕ್ಸಿನ್​ ಮತ್ತು ಸೆರಮ್​ ಸಂಸ್ಥೆಯ ಕೊವಿಶೀಲ್ಡ್​ ಲಸಿಕೆಗಳ ತುರ್ತು ಬಳಕೆಗೆ ಕಳೆದ ವಾರವಷ್ಟೇ ಅನುಮತಿ ಸಿಕ್ಕಿದೆ. ಸದ್ಯ ದೇಶದಲ್ಲಿ ಕೊರೊನಾ ಲಸಿಕೆ ತಾಲೀಮು ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲವೂ ಯಶಸ್ವಿಯಾದರೆ ಕೆಲವೇ ದಿನಗಳಲ್ಲಿ ಕೊರೊನಾ ಲಸಿಕೆ ವಿತರಿಸಲಾಗುವುದು ಎಂಬ ಮಾತುಗಳು ಕೇಳಿಬರುತ್ತಿವೆ.

ಲಸಿಕೆ ವಿತರಣೆಗೆ ಮೊದಲು ಇನ್ನೊಮ್ಮೆ ತಾಲೀಮು.. ಇಂದೇ ನಡೆಯಲಿದೆ ಕೊವಿನ್​ ಸಾಫ್ಟ್​ವೇರ್​ ಪರಿಶೀಲನೆ