ಶ್ರೀನಗರ: ಉಗ್ರರನ್ನ ಛೂ ಬಿಡ್ತಿದ್ದ ಪಾಕ್ನ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆಯು ದಾಳಿ ನಡೆಸಿದೆ. ಪಿಒಕೆಯ ನೀಲಂ ಕಣಿವೆಯಲ್ಲಿ ಆರ್ಟಿಲರಿ ಗನ್ ಮೂಲಕ ಲಷ್ಕರ್ ಇ ತೋಯ್ಬಾದ ನಾಲ್ಕು ಟೆರರ್ ಲಾಂಚ್ ಪ್ಯಾಡ್ಗಳನ್ನು ಭಾರತೀಯ ಸೇನೆಯು ಧ್ವಂಸಗೊಳಿಸಿದೆ.
ಕಾಶ್ಮೀರದ ಕುಪ್ವಾರಾದಲ್ಲಿರೋ ತಂಗ್ದರ್ ಸೆಕ್ಟರ್ನಲ್ಲಿ ಗಡಿ ನುಸುಳಲು ಯತ್ನಿಸ್ತಿದ್ದ ಉಗ್ರರನ್ನ ಭಾರತೀಯ ಸೇನೆಯು ಹಿಮ್ಮೆಟ್ಟಿಸಿ, ಅಡಗುದಾಣಗಳನ್ನ ಧ್ವಂಸಗೊಳಿಸಿದೆ. ಭಾರತೀಯ ಸೇನೆಯ ದಾಳಿಯಲ್ಲಿ 11 ಪಾಕ್ ಸೈನಿಕರು, 22 ಮಂದಿ ಉಗ್ರರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕಾಶ್ಮೀರದ ತಗಂಧರ್ ಸೆಕ್ಟರ್ನಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದ ಭಾರತವು ಪಾಕ್ ಆಕ್ರಮಿತ ಕಾಶ್ಮೀರದ ಟೆರರ್ ಲಾಂಚ್ಗಳನ್ನು ಉಡೀಸ್ ಮಾಡಿದೆ.
Published On - 4:50 pm, Sun, 20 October 19