Army Helicopter Crash: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದ ಮಂಡಲ ಹಿಲ್ಸ್ ಬಳಿ ಪತನ

|

Updated on: Mar 16, 2023 | 2:51 PM

ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದಲ್ಲಿ ಪತನಗೊಂಡಿದ್ದು, ಪೈಲಟ್‌ಗಳಿಗಾಗಿ ಶೋಧ ಕಾರ್ಯಾಚರಣೆ ಆರಂಭವಾಗಿದೆ.

Army Helicopter Crash: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದ ಮಂಡಲ ಹಿಲ್ಸ್ ಬಳಿ ಪತನ
ಪ್ರಾತಿನಿಧಿಕ ಚಿತ್ರ
Follow us on

ಭಾರತೀಯ ಸೇನೆಯ (Indian Army) ಚೀತಾ ಹೆಲಿಕಾಪ್ಟರ್ (Cheetah helicopter) ಗುರುವಾರ ಅರುಣಾಚಲ ಪ್ರದೇಶದ (Arunachal Pradesh) ಮಂಡಲ ಹಿಲ್ಸ್ ಪ್ರದೇಶದ ಬಳಿ ಪತನಗೊಂಡಿದೆ. ಪೈಲಟ್‌ಗಳಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಇಂದು ಬೆಳಗ್ಗೆ 09:15ರ ಸುಮಾರಿಗೆ ಅರುಣಾಚಲ ಪ್ರದೇಶದ ಬೊಮ್‌ಡಿಲಾ ಬಳಿ ಕಾರ್ಯಾಚರಣೆ ನಡೆಸುತ್ತಿದ್ದ ಆರ್ಮಿ ಏವಿಯೇಷನ್ ಚೀತಾ ಹೆಲಿಕಾಪ್ಟರ್ ಎಟಿಸಿ ಸಂಪರ್ಕ ಕಳೆದುಕೊಂಡಿದೆ. ಬೊಮ್ಡಿಲಾ ಪಶ್ಚಿಮದ ಮಂಡಲ ಬಳಿ ಅಪಘಾತ ಸಂಭವಿಸಿದ್ದು ಶೋಧ ಕಾರ್ಯಾಚರಣೆ ಆರಂಭವಾಗಿದೆ ಎಂದು  ಗುವಾಹಟಿ ಡಿಫೆನ್ಸ್ ಪಿಆರ್​​ಒ  ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಈ ದುರ್ಘಟನೆಯಲ್ಲಿ  ಒಬ್ಬ ಲೆಫ್ಟಿನೆಂಟ್ ಕರ್ನಲ್  ಮೇಜರ್  ಕಾಣೆಯಾಗಿದ್ದಾರೆ. ಅವರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ವಾಯುಪಡೆ  ಮತ್ತು ಸೇನೆಯಲ್ಲಿರುವ ಚೇತಕ್ ಮತ್ತು ಚೀತಾ ಹೆಲಿಕಾಪ್ಟರ್‌ಗಳು ಅತಿ ಎತ್ತರದ ಪ್ರದೇಶಗಳಲ್ಲಿ ಪಡೆಗಳ ಜೀವಸೆಲೆಯಾಗಿ ರೂಪುಗೊಂಡಿದ್ದರೂ ಸಹ, ಅವುಗಳಿಗೆ ಬದಲಿ ಅಗತ್ಯವಿದೆ. ಪ್ರಸ್ತುತ ಸುಮಾರು 200 ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್‌ಗಳು ಸೇವೆಯಲ್ಲಿವೆ
ಕಳೆದ ತಿಂಗಳು, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಸೇನೆಯು ತನ್ನ ಒಟ್ಟಾರೆ ಯುದ್ಧ ವಿಮಾನಯಾನ ಪ್ರೊಫೈಲ್ ಅನ್ನು ಹೆಚ್ಚಿಸುವ ಭಾಗವಾಗಿ ಭವಿಷ್ಯದಲ್ಲಿ ಸುಮಾರು 95 ಲಘು ಯುದ್ಧ ಹೆಲಿಕಾಪ್ಟರ್‌ಗಳು ಮತ್ತು 110 ಲೈಟ್ ಯುಟಿಲಿಟಿ ಹೆಲಿಕಾಪ್ಟರ್‌ಗಳ (LUH) ಸೇರ್ಪಡೆಗೆ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:22 pm, Thu, 16 March 23