Indian Army Day 2021 | ದೇಶ ಕಾಯುವ ಸೈನಿಕರನ್ನು ನೆನೆದ ಬಾಲಿವುಡ್​ ಸ್ಟಾರ್​ನಟರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 15, 2021 | 8:31 PM

ಇಂದು ಭೂ ಸೇನಾ ದಿನಾಚರಣೆ. ಈ ವಿಶೇಷ ದಿನದಂದು ಸಾಕಷ್ಟು ಬಾಲಿವುಡ್​ ಸ್ಟಾರ್​ ನಟರು ಸೈನಿಕರಿಗೆ ವಿಷ್​ ಮಾಡಿದ್ದಾರೆ. ಅಲ್ಲದೆ, ದೇಶ ಕಾಯುವ ಸೈನಿಕರಿಗೆ ನಮನ ಸಲ್ಲಿಸಿದ್ದಾರೆ.

Indian Army Day 2021 | ದೇಶ ಕಾಯುವ ಸೈನಿಕರನ್ನು ನೆನೆದ ಬಾಲಿವುಡ್​ ಸ್ಟಾರ್​ನಟರು
ಸ್ಯಾಂಡಲ್​ವುಡ್​ ಮಂದಿ ಹಾಕಿರುವ ಪೋಸ್ಟ್​ಗಳು
Follow us on

ಕಳೆದ ಹಲವು ವರ್ಷಗಳಿಂದ ಭಾರತೀಯ ಸೇನೆಯ ಕಥಾವಸ್ತು ಇಟ್ಟುಕೊಂಡು ಸಾಕಷ್ಟು ಚಿತ್ರಗಳು ಬಾಲಿವುಡ್​ನಲ್ಲಿ ತೆರೆಗೆ ಬಂದಿವೆ. ಬಾರ್ಡರ್​, ಎಲ್​ಒಸಿ, ಉರಿ: ದಿ ಸರ್ಜಿಕಲ್​ ಸ್ಟ್ರೈಕ್​ ಸೇರಿ ಸಾಕಷ್ಟು ಸಿನಿಮಾಗಳು ಸೇನೆಯನ್ನು ಆಧರಿಸಿ ನಿರ್ಮಾಣವಾಗಿವೆ. ಬಾಲಿವುಡ್​ ಮಂದಿ ಇಂದು (ಜ.15) ಭೂ ಸೇನಾ ದಿನಾಚರಣೆಯ ಅಂಗವಾಗಿ ಶುಭಾಶಯಗಳ ಸುರಿ ಮಳೆ ಹರಿಸಿದ್ದಾರೆ.

ಮೇಜರ್​ ಸಾಬ್​ ಮತ್ತು ಟ್ಯಾಂಗೋ ಚಾರ್ಲಿಯಂಥ ಸಿನಿಮಾದಲ್ಲಿ ನಟಿಸಿದ ಅಜಯ್​ ದೇವಗನ್​ ಸೇನಾ ದಿನಾಚರಣೆಯನ್ನು ನೆನೆದಿದ್ದಾರೆ. ನಮ್ಮ ಸೈನ್ಯ ಇದ್ದರೆ ನಾವು. ಪ್ರತಿಯೊಬ್ಬ ಭಾರತೀಯ ಸೈನಿಕನಿಗೆ ನನ್ನ ಪ್ರಣಾಮಗಳು ಎಂದಿದ್ದಾರೆ ಅಜಯ್​ ದೇವಗನ್​ ಟ್ವೀಟ್​ ಮಾಡಿದ್ದಾರೆ.

ಅಕ್ಷಯ್​ ಕುಮಾರ್​ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಪೋಸ್ಟ್​ ಮಾಡಿದ್ದು, ಈ ವಿಡಿಯೋದಲ್ಲಿ ಅವರು ಸೈನಿಕರ ಜತೆ ವಾಲಿಬಾಲ್​ ಆಡುತ್ತಿದ್ದಾರೆ.

ಉರಿ ಚಿತ್ರದ ನಾಯಕ ವಿಕ್ಕಿ ಕೌಶಲ್, ಸಮುದ್ರ ಮಟ್ಟದಿಂದ 16,000 ಅಡಿ ಎತ್ತರದಲ್ಲಿರುವ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಸೈನಿಕರೊಂದಿಗೆ ಕಳೆದ ದಿನವನ್ನು ಅವರು ನೆನಪು ಮಾಡಿಕೊಂಡರು.

ಇನ್ನು, ನಟ ಸಂಜಯ್​ ದತ್​ ಕೂಡ ಸೇನಾ ದಿನಾಚರಣೆಯಂದು ಸೈನಿಕರನ್ನು ನೆನೆದಿದ್ದಾರೆ. ಎಲ್​ಒಸಿ ಸಿನಿಮಾದ ಸೆಟ್​ನ ಫೋಟೋ ಹಾಕಿ ಸೈನಿಕರ ಕಾರ್ಯವನ್ನು ಶ್ಲಾಘನೆ ಮಾಡಿದ್ದಾರೆ.

Army Day 2021 | ‘ನೆಲದ ಋಣಕ್ಕೆ ಗಂಡು-ಹೆಣ್ಣು ಭೇದವುಂಟೇ’-ಇಲ್ಲಿದೆ ಗಣರಾಜ್ಯೋತ್ಸವ ಪೆರೇಡ್ ಮುನ್ನಡೆಸಿದ ಕ್ಯಾಪ್ಟನ್ ತಾನಿಯಾ ಶೇರ್ಗಿಲ್ ಕಥೆ