Indian Army Recruitment 2021: ಎಂಜಿನಿಯರಿಂಗ್​ ಪದವೀಧರರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ; ಆನ್​​ಲೈನ್​ ಮೂಲಕ ಅರ್ಜಿ ಆಹ್ವಾನ

|

Updated on: Mar 21, 2021 | 12:52 PM

ಭಾರತೀಯ ಸೇನೆಯ ಶಾಶ್ವತ ಆಯೋಗಕ್ಕಾಗಿ ಈ ನೇಮಕಾತಿ ನಡೆಯುತ್ತಿದ್ದು ಒಟ್ಟು 40 ಖಾಲಿ ಹುದ್ದೆಗಳಿವೆ ಎಂದು ಹೇಳಿದೆ. ಯಾವ ಪೋಸ್ಟ್​ನಲ್ಲಿ ಎಷ್ಟು ವೆಕೆನ್ಸಿಗಳು ಖಾಲಿ ಇವೆ, ಅರ್ಜಿ ಸಲ್ಲಿಸಿವುದು ಹೇಗೆ? ಇಲ್ಲಿದೆ ಸಮಗ್ರ ಮಾಹತಿ..

Indian Army Recruitment 2021: ಎಂಜಿನಿಯರಿಂಗ್​ ಪದವೀಧರರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ;  ಆನ್​​ಲೈನ್​ ಮೂಲಕ ಅರ್ಜಿ ಆಹ್ವಾನ
ಭಾರತೀಯ ಸೇನೆ (ಪ್ರಾತಿನಿಧಿಕ ಚಿತ್ರ)
Follow us on

ನೀವು ಇಂಜಿನಿಯರಿಂಗ್ ಓದುತ್ತಿದ್ದರೆ, ಅಥವಾ​ ಪದವೀಧರರಾಗಿದ್ದು, 20-27ವರ್ಷದವರಾಗಿದ್ದರೆ ನಿಮಗೆ ಭಾರತೀಯ ಸೇನೆಯಲ್ಲಿದೆ ಉದ್ಯೋಗವಕಾಶ. 2021ರ ಜುಲೈನಿಂದ ಡೆಹ್ರಾಡೂನ್​​ನ ಭಾರತೀಯ ಸೇನಾ ಅಕಾಡೆಮಿಯಲ್ಲಿ ಪ್ರಾರಂಭವಾಗುವ 133ನೇ ತಾಂತ್ರಿಕ ಪದವಿ (TGC-133) ಕೋರ್ಸ್​​ಗೆ ಭಾರತೀಯ ಸೇನೆ ಆನ್​ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಿದೆ. ಅರ್ಜಿ ಸಲ್ಲಿಕೆಗೆ ಕೊನೇ ದಿನ ಮಾರ್ಚ್​ 26. ಈ ಬಗ್ಗೆ ಭಾರತೀಯ ಸೇನೆ ತನ್ನ joinindianarmy.nic.in. ನಲ್ಲಿ ಅಧಿಸೂಚನಾ ಪ್ರಕಟಣೆ ಹೊರಡಿಸಿದ್ದು, ಆಸಕ್ತರು, ಅರ್ಹರು ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.

ಭಾರತೀಯ ಸೇನೆಯ ಶಾಶ್ವತ ಆಯೋಗಕ್ಕಾಗಿ ಈ ನೇಮಕಾತಿ ನಡೆಯುತ್ತಿದ್ದು ಒಟ್ಟು 40 ಖಾಲಿ ಹುದ್ದೆಗಳಿವೆ ಎಂದು ಹೇಳಿದೆ. ಯಾವ ಪೋಸ್ಟ್​ನಲ್ಲಿ ಎಷ್ಟು ವೆಕೆನ್ಸಿಗಳು ಖಾಲಿ ಇವೆ? ಇಲ್ಲಿದೆ ನೋಡಿ ಮಾಹಿತಿ..

  • ಸಿವಿಲ್​/ ಕಟ್ಟಡ ನಿರ್ಮಾಣ ತಂತ್ರಜ್ಞಾನ -11
  • ಮೆಕ್ಯಾನಿಕಲ್​-3
  • ಎಲೆಕ್ಟ್ರಿಕಲ್​/ಎಲೆಕ್ಟ್ರಿಕಲ್​ ಆ್ಯಂಡ್​ ಎಲೆಕ್ಟ್ರಾನಿಕ್ಸ್​-4
  • ಕಂಪ್ಯೂಟರ್​ ಸೈನ್ಸ್​ ಮತ್ತು ಎಂಜಿನಿಯರಿಂಗ್​/ಕಂಪ್ಯೂಟರ್​ ಟೆಕ್ನಾಲಜಿ/ ಎಂ.ಎಸ್​ಸಿ ಕಂಪ್ಯೂಟರ್​ ಸೈನ್ಸ್​-9
  • ಮಾಹಿತಿ ತಂತ್ರಜ್ಞಾನ (Technology) -3
  • ಎಲೆಕ್ಟ್ರಾನಿಕ್ಸ್​ ಆ್ಯಂಡ್ ಟೆಲಿಕಮ್ಯೂನಿಕೇಷನ್​ -2
  • ಟೆಲಿಕಮ್ಯೂನಿಕೇಶನ್​ ಎಂಜನಿಯರಿಂಗ್​-1
  • ಎಲೆಕ್ಟ್ರಾನಿಕ್​ ಆ್ಯಂಡ್ ಕಮ್ಯೂನಿಕೇಷನ್​-1
  • ಸೆಟಲೈಟ್​ ಕಮ್ಯೂನಿಕೇಷನ್​-1
  • ಎರೋನಾಟಿಕಲ್​/ಎರೋಸ್ಪೇಸ್​/ಏವಿಯಾನಿಕ್ಸ್-3
  • ಆಟೋಮೊಬೈಲ್​ ಎಂಜಿನಿಯರಿಂಗ್​-1
  • ಟೆಕ್ಸ್​​ಟೈಲ್ ಎಂಜಿನಿಯರಿಂಗ್​-1

ವಯಸ್ಸಿನ ಮಿತಿ ಇದೆ
ಈ ಕೋರ್ಸ್​​ಗೆ ಅರ್ಜಿ ಸಲ್ಲಿಸುವವರು 20 ವರ್ಷ ಮೇಲ್ಪಟ್ಟವರಾಗಿರಬೇಕು.. 27ವರ್ಷ ಒಳಗಿರಬೇಕು. ಅಂದರೆ 1994 ರ ಜುಲೈ 2 ರಿಂದ 2001ರ ಜುಲೈ 1ರ ಮಧ್ಯದ ವರ್ಷದಲ್ಲಿ ಜನಿಸಿದವರಾಗಿರಬೇಕು. ಹಾಗೇ, ಇದೆರಡೂ ಡೇಟ್​ಗಳಲ್ಲಿ ಹುಟ್ಟಿದವರೂ ಅಪ್ಲೈ ಮಾಡಬಹುದು. ಅವಿವಾಹಿತರಾಗಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

  • ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ..
  • www.joinindianarmy.nic.in. ವೆಬ್​ಸೈಟ್​ಗೆ ಭೇಟಿ ಕೊಡಿ
  • Officer Entry Apply/Login ಎಂಬಲ್ಲಿ ಕ್ಲಿಕ್​ ಮಾಡಿ. ನಂತರ ರಿಜಿಸ್ಟ್ರೇಶನ್​ ಮೇಲೆ ಕ್ಲಿಕ್​ ಮಾಡಿ. ನೀವು ಅದಾಗಲೇ www.joinindianarmy.nic.in. ನಲ್ಲಿ ರಿಜಿಸ್ಟರ್ ಆಗಿದ್ದರೆ ಮತ್ತೆ ನೋಂದಣಿ ಅಗತ್ಯವಿಲ್ಲ.
  • ಅಲ್ಲಿರುವ ಅರ್ಜಿಯನ್ನು ತುಂಬಿ
  • ಅದಾದ ಬಳಿಕ ಅಪ್ಲೈ ಆನ್​ಲೈನ್​ ಎಂಬಲ್ಲಿ ಕ್ಲಿಕ್​ ಮಾಡಿ.
  • ಅಧಿಕಾರಿಗಳ ಆಯ್ಕೆ ‘ಅರ್ಹತೆ’(Eligibility) ಎಂಬ ಪುಟ ಸ್ಕ್ರೀನ್​ ಮೇಲೆ ಕಾಣಿಸಿಕೊಳ್ಳುತ್ತದೆ
  • ಅದರಲ್ಲಿ Technical Graduate Course ಗೆ ಅಪ್ಲೈ ಮಾಡಿ.
  • ಆಗೊಂದು ಅಪ್ಲಿಕೇಶನ್​ ಫಾರ್ಮ್​ ತೆರೆದುಕೊಳ್ಳುತ್ತದೆ. ಅದರಲ್ಲಿ ಸೂಚನೆಯನ್ನು ಓದಿ ಮತ್ತು ಕಂಟಿನ್ಯೂ ಎಂಬಲ್ಲಿ ಕ್ಲಿಕ್​ ಮಾಡಿ. ನಂತರ ಅಲ್ಲಿರುವ ಖಾಲಿ ಜಾಗಗಳನ್ನು ಭರ್ತಿ ಮಾಡಿ.

ಅರ್ಹತೆ ಏನಿರಬೇಕು?
ಕೋರ್ಸ್​ಗೆ ಅರ್ಜಿ ಸಲ್ಲಿಸುವವರು ಎಂಜಿನಿಯರಿಂಗ್ ಪದವೀಧರರಾಗಿರಬೇಕು. ಒಮ್ಮೆ ನೀವಿನ್ನೂ ಎಂಜಿನಿಯರಿಂಗ್ ಓದುತ್ತಿದ್ದರೂ ಅಪ್ಲೈ ಮಾಡಬಹುದು. ಎಂಜನಿಯರಿಂಗ್​ ಅಂತಿಮ ವರ್ಷದಲ್ಲಿ ಇರುವವರು 2021ರ ಜುಲೈ ಒಳಗಿನ ಎಲ್ಲ ಸೆಮಿಸ್ಟರ್​ ಪರೀಕ್ಷೆಗಳ ಮಾರ್ಕ್​ಶೀಟ್​ ಸಲ್ಲಿಸಬೇಕು. ಹಾಗೇ ತರಬೇತಿ ಶುರುವಾಗುವ 12 ವಾರದ ಒಳಗೆ ಡಿಗ್ರಿ ಸರ್ಟಿಫಿಕೇಟ್​ ಸಲ್ಲಿಸಬೇಕು.

ಇದನ್ನೂ ಓದಿ: ಕೆಲಸ ಮಾಡುವಾಗ ಬ್ರೇಕ್​ಗಳನ್ನು ತೆಗೆದುಕೊಳ್ಳುವುದು ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರಿಗೂ ಪ್ರಯೋಜನಕಾರಿ: ಅಧ್ಯಯನ

ಇಟ್ಟಿಗೆ ಫ್ಯಾಕ್ಟರಿಯಿಂದ ಪರಿಸರ ಮಾಲಿನ್ಯ; ಕಡಿವಾಣ ಹಾಕಲು ಚಾಮರಾಜನಗರ ಜನತೆಯ ಒತ್ತಾಯ