AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

West Bengal Elections 2021: ‘ಬಂಗಾಳದ ಜನತೆಯನ್ನು ದೌರ್ಜನ್ಯದಿಂದ ರಕ್ಷಿಸಲು ಬಿಜೆಪಿ ಜತೆ ಕೈಜೋಡಿಸುತ್ತೇನೆ‘; ಟಿಎಂಸಿ ಸಂಸದ ಶಿಶಿರ್​ ಅಧಿಕಾರಿ

ಬಿಜೆಪಿ ರಾಷ್ಟ್ರಾಧ್ಯಕ್ಷ, ಗೃಹ ಸಚಿವ ಅಮಿತ್ ಶಾ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಶಿಶಿರ್ ಅಧಿಕಾರಿ ಈ ಘೋಷಣೆ ಮಾಡಿದ್ದಾರೆ. ಈ ಮೂಲಕ ಟಿಎಂಸಿ ಪಕ್ಷದ ಇನ್ನೊಂದು ಹಿರಿಯ ತಲೆ ಬಿಜೆಪಿ ಸೇರುವುದು ಖಚಿತವಾದಂತಾಗಿದೆ.

West Bengal Elections 2021: ‘ಬಂಗಾಳದ ಜನತೆಯನ್ನು ದೌರ್ಜನ್ಯದಿಂದ ರಕ್ಷಿಸಲು ಬಿಜೆಪಿ ಜತೆ ಕೈಜೋಡಿಸುತ್ತೇನೆ‘; ಟಿಎಂಸಿ ಸಂಸದ ಶಿಶಿರ್​ ಅಧಿಕಾರಿ
ಅಮಿತ್ ಶಾ ಪ್ರಚಾರ ಸಭೆಯಲ್ಲಿ ಟಿಎಂಸಿ ಸಂಸದ ಶಿಶಿರ್ ಅಧಿಕಾರಿ
guruganesh bhat
| Edited By: |

Updated on: Mar 21, 2021 | 1:33 PM

Share

ಕೊಲ್ಕತ್ತಾ: ಪಶ್ಚಿಮ ಬಂಗಾಳಿಗರು ಅನುಭವಿಸುತ್ತಿರುವ ದೌರ್ಜನ್ಯದಿಂದ ರಕ್ಷಿಸಬೇಕಿದೆ. ಬಂಗಾಳವನ್ನು ರಕ್ಷಿಸಲು ನಾವು ನಿಮ್ಮೊಂದಿಗಿರುತ್ತೇವೆ ಎಂದು ಟಿಎಂಸಿ ಸಂಸದ, ಸುವೇಂದು ಅಧಿಕಾರಿ ಅವರ ತಂದೆ ಶಿಶಿರ್ ಅಧಿಕಾರಿ ಹೇಳಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ, ಗೃಹ ಸಚಿವ ಅಮಿತ್ ಶಾ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಶಿಶಿರ್ ಅಧಿಕಾರಿ ಈ ಘೋಷಣೆ ಮಾಡಿದ್ದಾರೆ. ಈ ಮೂಲಕ ಟಿಎಂಸಿ ಪಕ್ಷದ ಇನ್ನೊಂದು ಹಿರಿಯ ತಲೆ ಬಿಜೆಪಿ ಸೇರುವುದು ಖಚಿತವಾದಂತಾಗಿದೆ. ಅಲ್ಲದೇ ಅವರು ತಮ್ಮ ಭಾಷಣದಲ್ಲಿ ‘ ಜೈ ಸಿಯಾ ರಾಮ್’ ಎಂದು ಘೋಷಿಸುವ ಮೂಲಕ ರಾಮನಾಮ ಪಠಿಸಿದ್ದಾರೆ.

ಇಂದು ನಡೆಯಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸುತ್ತೇನೆ ಎಂದು ಟಿಎಂಸಿ ಸಂಸದ, ಸುವೇಂದು ಅಧಿಕಾರಿ ಅವರ ತಂದೆ ಶಿಶಿರ್ ಅಧಿಕಾರಿ ಪ್ರಚಾರ ಸಭೆ ಆರಂಭಕ್ಕೂ ಮುನ್ನವೇ ತಿಳಿಸಿದ್ದರು. ಈ ಮೂಲಕ ‘ನನ್ನ ತಂದೆ ಮತ್ತು ಸಹೋದರರನ್ನು ಬಿಜೆಪಿಗೆ ಕರೆತರುತ್ತೇನೆ’ ಎಂದು ಘೋಷಿಸಿದ್ದ ಸುವೇಂದು ಅಧಿಕಾರಿ ಮಾತು ನೂರಕ್ಕೆ ನೂರು ಪ್ರತಿಶತಃ ಸತ್ಯವಾಗುವುದು ಖಚಿತವಾದಂತಾಗಿದೆ.

2020ರ ಡಿಸೆಂಬರ್ 19ರಂದು  ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಪ್ರಭಾವಿ ನಾಯಕರಾಗಿದ್ದ ಸುವೇಂದು ಅಧಿಕಾರಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಮಿಡ್ನಾಪುರ್​ನಲ್ಲಿ ಅಮಿತ್ ಶಾ ನೇತೃತ್ವದಲ್ಲಿ ನಡೆಯುತ್ತಿರುವ ಬಿಜೆಪಿ ಮೆರವಣಿಗೆಯಲ್ಲಿ ಅವರು ಭಾಗವಹಿಸಿದ್ದರು.

ಪಶ್ಚಿಮ ಬಂಗಾಳವನ್ನು ಅಭಿವೃದ್ಧಿಗೊಳಿಸುವ, ಹಿರಿಯರು ಮೆಚ್ಚುವಂಥಾ ರಾಜ್ಯ ಕಟ್ಟುವ ಆಶಯವನ್ನು ಸುವೇಂದು ಅಧಿಕಾರಿ ಹೇಳಿದ್ದರು. ಅಧಿಕಾರಿ ಜೊತೆಗೆ ತಪಸಿ ಮೊಂಡಲ್, ಅಶೋಕೆ ದಿಂಡಾ, ಸುದೀಪ್ ಮುಖರ್ಜಿ, ಸಾಯ್ಕತ್ ಪಂಜಾ, ಶಿಲ್​ಭದ್ರ ದತ್ತಾ, ದೀಪಾಲಿ ಬಿಸ್ವಾಸ್, ಸುಕ್ರ ಮುಂಡ, ಶ್ಯಾಮಾಪ್ದ ಮುಖರ್ಜಿ, ಬಿಸ್ವಜಿತ್ ಕುಂಡು, ಬನಸ್ರಿ ಮೈತಿ ಕೂಡ ಬಿಜೆಪಿ ಸೇರಿದ್ದರು.

ಟಿಎಂಸಿ ತೊರೆದ ಇಡೀ ಕುಟುಂಬ ಸುವೇಂದು ಅಧಿಕಾರಿಯ ಕಿರಿಯ ಸಹೋದರ ಜನವರಿ 1ರಂದು ಟಿಎಂಸಿಯಿಂದ ಬಿಜೆಪಿ ಸೇರಿದ್ದರು. ಪೂರ್ವ ಮಿಡ್ನಾಪುರ್ ಜಿಲ್ಲೆಯ ಕಾಂಥಿ ಮುನ್ಸಿಪಾಲಿಟಿ ಅಧ್ಯಕ್ಷರಾಗಿದ್ದ ಸೌಮೇಂದು ಅಧಿಕಾರಿಯನ್ನು  ಟಿಎಂಸಿ ಪ್ರಸ್ತುತ ಹುದ್ದೆಯಿಂದ ತೆಗೆದು ಹಾಕಿತ್ತು. ಸುಮಾರು 12 ಮಂದಿ ತೃಣಮೂಲ ಕೌನ್ಸಿಲರ್​ಗಳ ಜತೆ ಸೌಮೇಂದು ಬಿಜೆಪಿ ಸೇರಿದ್ದರು. ಅಧಿಕಾರಿ ಕುಟುಂಬದಲ್ಲಿ ಸುವೇಂದು ಅಧಿಕಾರಿ ಅವರ ಅಪ್ಪ ಶಿಶಿರ್ ಮತ್ತು ಸಹೋದರ ದಿಬ್ಯೇಂದು ಟಿಎಂಸಿ ಸಂಸದರಾಗಿದ್ದರು.

ಕಮಲ ನಮ್ಮ ಮನೆಯಲ್ಲಿ ಮಾತ್ರ ಅರಳುವುದಿಲ್ಲ ಕೊಲ್ಕತ್ತಾದ ಹರೀಶ್ ಮುಖರ್ಜಿ ಮತ್ತು ಹರೀಶ್ ಚಟರ್ಜಿ ರಸ್ತೆಗಳಲ್ಲಿಯೂ ಅರಳುತ್ತದೆ ಎಂದು ಸುವೇಂದು ಅಧಿಕಾರಿ ಹೇಳಿದ್ದರು. ಮಮತಾ ಬ್ಯಾನರ್ಜಿ ಅವರ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ಸುವೇಂದು ಅಧಿಕಾರಿಯನ್ನು ಲೇವಡಿ ಮಾಡಿದಕ್ಕೆ ಸುವೇಂದು ಈ ರೀತಿ ಟಾಂಗ್ ನೀಡಿದ್ದರು.

ಇದನ್ನೂ ಓದಿ: ರಾಮಾಯಣ ಧಾರಾವಾಹಿಯಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ನಟ ಅರುಣ್ ಗೋವಿಲ್ ಬಿಜೆಪಿಗೆ ಸೇರ್ಪಡೆ

ರಾಜಕೀಯ ವಿಶ್ಲೇಷಣೆ | ಪಶ್ಚಿಮ ಬಂಗಾಳದಲ್ಲಿ ಹಾಲಿ ಸಂಸದರು, ಅರ್ಥಶಾಸ್ತ್ರಜ್ಞ, ಸಿನಿಮಾ ತಾರೆಯರನ್ನು ಕಣಕ್ಕಿಳಿಸಿದ ಬಿಜೆಪಿ