ರಾಜಕೀಯ ವಿಶ್ಲೇಷಣೆ | ಪಶ್ಚಿಮ ಬಂಗಾಳದಲ್ಲಿ ಹಾಲಿ ಸಂಸದರು, ಅರ್ಥಶಾಸ್ತ್ರಜ್ಞ, ಸಿನಿಮಾ ತಾರೆಯರನ್ನು ಕಣಕ್ಕಿಳಿಸಿದ ಬಿಜೆಪಿ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯು ಇಡೀ ದೇಶದ ರಾಜಕೀಯ ಆಸಕ್ತರ ಗಮನ ಸೆಳೆದಿದೆ. ಅಧಿಕಾರ ಉಳಿಸಿಕೊಳ್ಳುವ ಹುಮ್ಮಸ್ಸಿನಲ್ಲಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಎದುರು ಬಿಜೆಪಿಯ ಘಟಾನುಘಟಿ ನಾಯಕರು ಗುಟುರು ಹಾಕಿದ್ದಾರೆ. ಈ ಬರಹದಲ್ಲಿ ಪಶ್ಚಿಮ ಬಂಗಾಳ ಚುನಾವಣೆಯ ಒಳಹೊರಗಿನ ವಿಶ್ಲೇಷಣೆ ಮುಂದಿಟ್ಟಿದೆ ಟಿವಿ9 ಚುನಾವಣಾ ಅಧ್ಯಯನ ತಂಡ.

ರಾಜಕೀಯ ವಿಶ್ಲೇಷಣೆ | ಪಶ್ಚಿಮ ಬಂಗಾಳದಲ್ಲಿ ಹಾಲಿ ಸಂಸದರು, ಅರ್ಥಶಾಸ್ತ್ರಜ್ಞ, ಸಿನಿಮಾ ತಾರೆಯರನ್ನು ಕಣಕ್ಕಿಳಿಸಿದ ಬಿಜೆಪಿ
ಬಿಜೆಪಿಗೆ ಪ್ರತಿಷ್ಠೆಯ ಕಣ ಪಶ್ಚಿಮ ಬಂಗಾಳ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Mar 14, 2021 | 10:34 PM

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯು ಇಡೀ ದೇಶದ ರಾಜಕೀಯ ಆಸಕ್ತರ ಗಮನ ಸೆಳೆದಿದೆ. ಅಧಿಕಾರ ಉಳಿಸಿಕೊಳ್ಳುವ ಹುಮ್ಮಸ್ಸಿನಲ್ಲಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಎದುರು ಬಿಜೆಪಿಯ ಘಟಾನುಘಟಿ ನಾಯಕರು ಗುಟುರು ಹಾಕಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಬಿಜೆಪಿಯ ತಾರಾವರ್ಚಸ್ಸಿನ ದೊಡ್ಡಪಡೆಯೇ ಪಶ್ಚಿಮ ಬಂಗಾಳದಲ್ಲಿ ನಿಯಮಿತವಾಗಿ ಚುನಾವಣಾ ಪ್ರಚಾರ ನಡೆಸುತ್ತಿದೆ. ಈ ಬರಹದಲ್ಲಿ ಪಶ್ಚಿಮ ಬಂಗಾಳ ಚುನಾವಣೆಯ ಒಳಹೊರಗಿನ ಹರಿತ ವಿಶ್ಲೇಷಣೆ ಮುಂದಿಟ್ಟಿದ್ದಾರೆ ಟಿವಿ9 ಚುನಾವಣಾ ಅಧ್ಯಯನ ತಂಡದ ಪಾರ್ಥ ಪ್ರತಿಮ್ ದಾಸ್.

ಒಟ್ಟು 8 ಹಂತಗಳಲ್ಲಿ ಪಶ್ಚಿಮ ಬಂಗಾಳದ ಚುನಾವಣೆ ನಡೆಯಲಿದೆ. ಬಿಜೆಪಿಯು ಭಾನುವಾರ (ಮಾರ್ಚ್ 14) 3ನೇ ಹಂತದ ಚುನಾವಣೆ ನಡೆಯಲಿರುವ 27 ಕ್ಷೇತ್ರಗಳು ಮತ್ತು 4ನೇ ಹಂತದಲ್ಲಿ ಮತದಾನ ನಡೆಯಲಿರುವ 38 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ಹಾಲಿ ಸಂಸದರು, ಚಿತ್ರತಾರೆಯರು ಮತ್ತು ಅರ್ಥಶಾಸ್ತ್ರಜ್ಞ ಸಹ ಬಿಜೆಪಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಚುನಾವಣೆಯನ್ನು ಬಿಜೆಪಿ ಅದೆಷ್ಟು ಗಂಭೀರವಾಗಿ ಪರಿಗಣಿಸಿದೆ ಎನ್ನುವುದಕ್ಕೆ ಈ ಪಟ್ಟಿಯೇ ಒಂದು ನಿದರ್ಶನ ಎನ್ನಲಾಗುತ್ತಿದೆ.

ನಾಲ್ವರು ಹಾಲಿ ಸಂಸದರ ಸ್ಪರ್ಧೆ ಈ ಬಾರಿಯ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ನಾಲ್ವರು ಹಾಲಿ ಸಂಸದರನ್ನು ಬಿಜೆಪಿ ಕಣಕ್ಕಿಳಿಸುತ್ತಿದೆ. ಅವರೆಂದರೆ ನಿತೀಶ್ ಪ್ರಾಮಾಣಿಕ್ ದಿನ್ಹಾಟಾ, ಬಾಬೂಲಾಲ್ ಸುಪ್ರಿಯೊ, ಸ್ವಪನ್ ದಾಸ್​ಗುಪ್ತ ಮತ್ತು ಲಾಕೆಟ್ ಚಟರ್ಜಿ.

ದಿನ್ಹಾಟಾ ವಿಧಾನಸಭಾ ಕ್ಷೇತ್ರದಿಂದ ಕೂಚ್​ಬೆಹಾರ್ (ಎಸ್​ಸಿ ಮೀಸಲು) ಕ್ಷೇತ್ರದ ಸಂಸದ ನಿತೀಶ್ ಪ್ರಾಮಾಣಿಕ್ ಸ್ಪರ್ಧಿಸುತ್ತಿದ್ದಾರೆ. ದಿನ್ಹಾಟಾ ಕ್ಷೇತ್ರದಲ್ಲಿ ಎಸ್​ಸಿ ಶೇ 41, ಎಸ್​ಟಿ ಶೇ 0.4 ಮತ್ತು ಮುಸ್ಲಿಮ್ ಸಮುದಾಯಕ್ಕೆ ಸೇರಿದ ಶೇ 32ರಷ್ಟು ಮತದಾರರಿದ್ದಾರೆ. ದಿನ್ಹಾಟಾ ಕ್ಷೇತ್ರದಲ್ಲಿ ಪ್ರಭಾವಿ ನಾಯಕ ಎನಿಸಿರುವ ಉದಯನ್ ಗುಹಾ ಟಿಎಂಸಿ ಪಕ್ಷದ ಹುರಿಯಾಳು. ಈ ಕ್ಷೇತ್ರದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ರಾಜ್​ಬೊನ್​ಶಿ (ಎಸ್​ಸಿ) ಸಮುದಾಯಕ್ಕೆ ಸೇರಿದವರು ಬಿಜೆಪಿ ನಿತೀಶ್​ ಪ್ರಾಮಾಣಿಕ್. ಇಬ್ಬರು ಘಟಾನುಘಟಿಗಳು ಸ್ಪರ್ಧಿಸಿರುವ ದಿನ್ಹಾಟಾದಲ್ಲಿ ಜಿದ್ದಾಜಿದ್ದಿ ಪೈಪೋಟಿ ನಿರೀಕ್ಷಿತ.

ಟೊಲ್ಲಿಗಂಜ್ ಕ್ಷೇತ್ರದಿಂದ ಬಾಬುಲಾಲ್ ಸುಪ್ರಿಯೊ ಸ್ಪರ್ಧಿಸುತ್ತಿದ್ದಾರೆ. ಮಮತಾ ಬ್ಯಾನರ್ಜಿಯ ನಂಬಿಕಸ್ಥ ಬಂಟ ಎನಿಸಿದ ಆರೂಪ್ ಬಿಸ್ವಾಸ್ ಇಲ್ಲಿನ ಟಿಎಂಸಿ ಹುರಿಯಾಳು. ಮಮತಾ ಬ್ಯಾನರ್ಜಿಯ ಅತ್ಯಾಪ್ತರನ್ನು ಕಟ್ಟಿಹಾಕಲು ಪಣತೊಟ್ಟಿರುವ ಬಿಜೆಪಿ, ಬಾಬುಲಾಲ್ ಸುಪ್ರಿಯೊ ಮೂಲಕ ಅರೂಪ್ ಬಿಸ್ವಾಸ್​ರನ್ನು ಮಣಿಸಲು ತಂತ್ರ ಹೂಡಿದೆ. ಟೊಲ್ಲಿಗಂಜ್ ಕ್ಷೇತ್ರದಲ್ಲಿ ಎಸ್​ಸಿ ಶೇ 4, ಎಸ್​ಟಿ ನಗಣ್ಯ, ಮುಸ್ಲಿಂ ಸಮುದಾಯಕ್ಕೆ ಸೇರಿದವರು ಶೇ 4ರಷ್ಟು ಮತದಾರರಿದ್ದಾರೆ.

ಧಾರ್ಮಿಕ ಪ್ರವಾಸಿಗರನ್ನು ದೊಡ್ಡಸಂಖ್ಯೆಯಲ್ಲಿ ಆಕರ್ಷಿಸುವ ಪಶ್ಚಿಮ ಬಂಗಾಳದ ತಾರಕೇಶ್ವರ ಶಿವದೇವಾಲಯ ನಿಮಗೆ ಗೊತ್ತಿರಬಹುದು. ತಾರಕೇಶ್ವರ ಕ್ಷೇತ್ರದಿಂದ ಈ ಬಾರಿ ಬಿಜೆಪಿಯ ಹಿರಿಯ ನಾಯಕ ಸ್ವಪನ್ ದಾಸ್​ಗುಪ್ತ ಕಣಕ್ಕಿಳಿದಿದ್ದಾರೆ. ಅವರೆದುರು ಟಿಎಂಸಿಯ ರಾಮೇಂದು ಸಿಂಘರಾಯ್ ಸ್ಪರ್ಧಿಸಿದ್ದಾರೆ. ಕ್ಷೇತ್ರದಲ್ಲಿ ಎಸ್​ಸಿ ಶೇ 27, ಎಸ್​ಟಿ ಶೇ 5 ಮತ್ತು ಮುಸ್ಲಿಂ ಸಮುದಾಯದ ಶೇ 10ರಷ್ಟು ಮತದಾರರಿದ್ದಾರೆ. ಚುಂಚುರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ನಟ, ಹಾಲಿ ಸಂಸದ ಲಾಕೆಟ್ ಚಟರ್ಜಿ ಸ್ಪರ್ಧಿಸುತ್ತಿದ್ದಾರೆ. ಇವರು ಪ್ರಸ್ತುತ ಹೂಗ್ಲಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಚುಂಚುರಾ ಕ್ಷೇತ್ರದಲ್ಲಿ ಎಸ್​ಸಿ ಶೇ 22, ಎಸ್​ಟಿ ಶೇ 4 ಮತ್ತು ಮುಸ್ಲಿಂ ಸಮುದಾಯದ ಶೇ 7ರಷ್ಟು ಮತದಾರರಿದ್ದಾರೆ.

ಹೂಗ್ಲಿ ಜಿಲ್ಲೆಯ ತಾರಕೇಶ್ವರ ಮತ್ತು ಚುಂಚುರಾ ಕ್ಷೇತ್ರಗಳಲ್ಲಿ ಬಿಜೆಪಿಯು ಇಬ್ಬರು ಹಾಲಿ ಸಂಸದರನ್ನೇ ಕಣಕ್ಕಿಳಿಸುತ್ತಿದೆ. ಈ ಜಿಲ್ಲೆಯಲ್ಲಿ ಬಿಜೆಪಿಯು ಕಠಿಣ ಪರಿಶ್ರಮ ವಹಿಸಲಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೆ?

ಇದನ್ನೂ ಓದಿ: ಬಿಜೆಪಿಯಿಂದ ಕೇರಳ, ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Ashok-Lahiri-Nirmala-Sitharaman

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ರೊಂದಿಗೆ ಅರ್ಥಶಾಸ್ತ್ರಜ್ಞ ಅಶೋಕ್ ಲಾಹಿರಿ

ಚುನಾವಣಾ ಕಣದಲ್ಲಿ ಅರ್ಥಶಾಸ್ತ್ರಜ್ಞ ಆಲಿಪುರ್​ದೌರ್ ಕ್ಷೇತ್ರದಲ್ಲಿ ಬಿಜೆಪಿಯ ಹುರಿಯಾಳಾಗಿ ಖ್ಯಾತ ಅರ್ಥಶಾಸ್ತ್ರಜ್ಞ, ಕೇಂದ್ರ ಸರ್ಕಾರದ ಮಾಜಿ ಆರ್ಥಿಕ ಸಲಹೆಗಾರ ಅಶೋಕ್ ಲಾಹಿರಿ ಸ್ಪರ್ಧಿಸುತ್ತಿದ್ದಾರೆ. ಈ ಮೂಲಕ ಬೆಂಗಾಲಿ ಬುದ್ಧಿಜೀವಿಗಳ ವಲಯಕ್ಕೆ ಬಿಜೆಪಿ ಪ್ರಬಲ ಸಂದೇಶ ರವಾನಿಸಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. 15ನೇ ಹಣಕಾಸು ಆಯೋಗದ ಸದಸ್ಯ, ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್​ನ ಅಧ್ಯಾಪಕ, ಬಂಧನ್ ಬ್ಯಾಂಕ್​ನ ಅಧ್ಯಕ್ಷ, ಏಷ್ಯನ್ ಡೆವಲಪ್​ಮೆಂಟ್ ಬ್ಯಾಂಕ್​ನ ಕಾರ್ಯನಿರ್ವಾಹಕ ನಿರ್ದೇಶಕರಾಗಿಯೂ ಅಶೋಕ್ ಲಾಹಿರಿ ತಮ್ಮ ಛಾಪು ಮೂಡಿಸಿದವರು.

ಟಿಎಂಸಿ ಶಾಸಕರಿಗೆ ಬಿಜೆಪಿ ಟಿಕೆಟ್ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಟಿಕೆಟ್ ಪಡೆದು ಜಯಗಳಿಸಿದ್ದ ನಾಲ್ವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಅವರೆಂದರೆ; ರಾಜೀವ್ ಬ್ಯಾನರ್ಜಿ (ದೊಮ್​ಜುರ್), ರವೀಂದ್ರನಾಥ ಭಟ್ಟಾಚಾರ್ಯ (ಸಿಂಗುರ್), ದೀಪಕ್ ಹಾಲ್ದರ್ (ಡೈಮಂಡ್ ಹಾರ್ಬರ್) ಮತ್ತು ಪ್ರಭೀರ್ ಘೋಷಲ್ (ಉತ್ತರ್​ಪರ). ಸಿಂಗುರ್​ನಲ್ಲಿ ಜಿದ್ದಾಜಿದ್ದಿ ಹೋರಾಟ ನಿರೀಕ್ಷಿತ. ಇಲ್ಲಿ ಬಿಜೆಪಿಯ ರವೀಂದ್ರನಾಥ್ ಭಟ್ಟಾಚಾರ್ಯ ಎದುರು ಟಿಎಂಸಿಯ ಬೆಚರಮ್​ ಮನ್ನಾ ಕಣಕ್ಕಿಳಿದಿದ್ದಾರೆ. ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ ಬಿಗಿಹಿಡಿತವಿರುವ ಡೈಮಂಡ್ ಹಾರ್ಬರ್​ನಲ್ಲಿ ಬಿಜೆಪಿಯ ದೀಪಕ್ ಹಾಲ್ದರ್​ಗೆ ಗೆಲುವು ಸುಲಭವಲ್ಲ. ಉತ್ತರ್​ಪರದಲ್ಲಿ ಬಿಜೆಪಿಯ ಟಿಕೆಟ್ ಪಡೆದಿರುವ ಪ್ರಬೀರ್ ಘೋಷಲ್ ಅವರನ್ನು ಮಮತಾ ಬಗ್ಗೆ ಉತ್ತಮ ಅಭಿಪ್ರಾಯ ಇರಿಸಿಕೊಂಡಿರುವ ಪತ್ರಕರ್ತ ಎಂದೇ ಗುರುತಿಸಲಾಗುತ್ತದೆ.

ಬಿಜೆಪಿ ಪಾಳಯದಲ್ಲಿ ಸಿನಿ ತಾರೆಯರು ಬಿಜೆಪಿ ನಾಲ್ವರು ಸಿನಿಮಾ ತಾರೆಗಳನ್ನೂ ಈ ಬಾರಿ ಕಣಕ್ಕಿಳಿಸಿದೆ. ಸೋನಾರ್​ಪುರ್ ದಕ್ಷಿಣ ಕ್ಷೇತ್ರದಿಂದ ಅಂಜನಾ ಬಸು, ಬೆಹಾಲಾ ಪರ್ಬಾ ಕ್ಷೇತ್ರದಿಂದ ಪಾಯಲ್ ಸರ್ಕಾರ್, ಶ್ಯಾಂಪುರ್ ಕ್ಷೇತ್ರದಿಂದ ತನುಶ್ರೀ ಚಕ್ರವರ್ತಿ, ಚಂಡಿತಲಾ ಕ್ಷೇತ್ರದಿಂದ ಯಶ್​ದಾಸ್​ಗುಪ್ತ ಸ್ಪರ್ಧಿಸುತ್ತಿದ್ದಾರೆ.

ಇದನ್ನೂ ಓದಿ: ನಾನು ಗಾಯಗೊಂಡ ಹುಲಿ: ಪ್ರಚಾರ ಸಭೆಯಲ್ಲಿ ಅಬ್ಬರಿಸಿದ ಮಮತಾ ಬ್ಯಾನರ್ಜಿ

Published On - 10:15 pm, Sun, 14 March 21

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ