ಪ್ಯಾಲೆಸ್ತೀನ್​​ನ ಭಾರತದ ರಾಯಭಾರಿ ಮುಕುಲ್​ ಆರ್ಯಾ ಸಾವು; ರಾಯಭಾರಿ ಕಚೇರಿಯಲ್ಲೇ ಸಿಕ್ಕ ಮೃತದೇಹ, ತನಿಖೆಗೆ ಆದೇಶ

| Updated By: Lakshmi Hegde

Updated on: Mar 07, 2022 | 9:08 AM

ಪ್ಯಾಲಿಸ್ತೀನ್​ ಸರ್ಕಾರ ಕೂಡ ಮುಕುಲ್​ ಆರ್ಯ ನಿಧನಕ್ಕೆ ಸಂತಾಪ ಸೂಚಿಸಿದೆ. ಅಲ್ಲಿನ ಕೇಂದ್ರ ವಿದೇಶಾಂಗ ಇಲಾಖೆ ಸಚಿವ ಡಾ. ರಿಯಾದ್ ಅಲ್​ ಮಲಿಕಿ ತೀವ್ರ ನೋವು ವ್ಯಕ್ತಪಡಿಸಿದ್ದಾರೆ.

ಪ್ಯಾಲೆಸ್ತೀನ್​​ನ ಭಾರತದ ರಾಯಭಾರಿ ಮುಕುಲ್​ ಆರ್ಯಾ ಸಾವು; ರಾಯಭಾರಿ ಕಚೇರಿಯಲ್ಲೇ ಸಿಕ್ಕ ಮೃತದೇಹ, ತನಿಖೆಗೆ ಆದೇಶ
ಮುಕುಲ್ ಆರ್ಯಾ
Follow us on

ಪ್ಯಾಲೆಸ್ತೀನ್​ ದೇಶಕ್ಕೆ ಭಾರತದ ರಾಯಭಾರಿಯಾಗಿದ್ದ ಮುಕುಲ್ ಆರ್ಯಾ ( ಮೃತಪಟ್ಟಿದ್ದಾರೆ. ಈ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಎಸ್.ಜೈಶಂಕರ್​ ಟ್ವೀಟ್ ಮಾಡಿದ್ದು, ಪ್ಯಾಲೆಸ್ತೀನ್​​ನ ರಾಮಲ್ಲಾದಲ್ಲಿದ್ದ ಭಾರತದ ರಾಯಭಾರಿ ಮುಕುಲ್​ ಆರ್ಯಾ ನಿಧನದ ವಾರ್ತೆ ಕೇಳಿ ತುಂಬ ಶಾಕ್​ ಆಗಿದೆ.  ಪ್ರತಿಭಾವಂತ ಅಧಿಕಾರಿಯಾಗಿದ್ದರು.  ಮುಕುಲ್​ ನಿಧನದ ದುಃಖ ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ಕರುಣಿಸಲಿ ಎಂದು ಹೇಳಿದ್ದಾರೆ. ಮುಕುಲ್ ಆರ್ಯಾ ಮೃತದೇಹ ರಾಯಭಾರಿ ಕಚೇರಿಯಲ್ಲಿ ಪತ್ತೆಯಾಗಿದ್ದು, ಅವರ ಸಾವಿನ ಬಗ್ಗೆ ಕೆಲವು ಅನುಮಾನ ವ್ಯಕ್ತವಾಗಿದೆ. ಮುಕುಲ್ ಆರ್ಯ ಸಾವಿಗೆ ಸಂಬಂಧಪಟ್ಟು ತನಿಖೆ ನಡೆಸಲು ಪ್ಯಾಲಿಸ್ತೀನ್​ ಆಡಳಿತ ಆದೇಶ ನೀಡಿದೆ.

ಅತ್ತ ಪ್ಯಾಲಿಸ್ತೀನ್​ ಸರ್ಕಾರ ಕೂಡ ಮುಕುಲ್​ ಆರ್ಯ ನಿಧನಕ್ಕೆ ಸಂತಾಪ ಸೂಚಿಸಿದೆ. ಅಲ್ಲಿನ ಕೇಂದ್ರ ವಿದೇಶಾಂಗ ಇಲಾಖೆ ಸಚಿವ ಡಾ. ರಿಯಾದ್ ಅಲ್​ ಮಲಿಕಿ ತೀವ್ರ ನೋವು ವ್ಯಕ್ತಪಡಿಸಿದ್ದಾರೆ. ಭಾರತದ ರಾಯಭಾರಿ ಆರ್ಯಾ ನಿಧನದಿಂದ ದುಃಖವಾಗಿದೆ. ಮೃತದೇಹವನ್ನು ಭಾರತಕ್ಕೆ ಕಳಿಸಲು ಅಗತ್ಯವಿರುವ ಎಲ್ಲ ಪ್ರಕ್ರಿಯೆಗಳನ್ನೂ ನಡೆಸಲಾಗುವುದು. ಈ ಸಂಬಂಧ ಭಾರತದ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದೂ ಹೇಳಿದ್ದಾರೆ. ಪ್ಯಾಲಿಸ್ತೀನ್​ ಅಧ್ಯಕ್ಷ ಮೊಹಮದ್​ ಅಬ್ಬಾಸ್​ ಮತ್ತು ಪ್ರಧಾನಮಂತ್ರಿ ಡಾ. ಮುಹಮ್ಮದ್​ ಷ್ಟಯೇ ಅವರಿಗೂ ಈ ವಿಚಾರ ತಿಳಿಸಲಾಗಿದೆ. ಅವರೂ ಕೂಡ ಸಂತಾಪ ವ್ಯಕ್ತಪಡಿಸಿದ್ದು, ಭಾರತದ ರಾಯಭಾರಿ ನಿಧನದ ವಿಷಯವನ್ನು ಭದ್ರತಾ ಸಿಬ್ಬಂದಿ, ಪೊಲೀಸ್​, ಸಾರ್ವಜನಿಕ ಆಡಳಿತಗಳಿಗೆ ತಿಳಿಸಲು ಸೂಚಿಸಿದ್ದಾರೆ ಎಂದೂ ಕೂಡ ಪ್ಯಾಲಿಸ್ತೀನ್​ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಮುಕುಲ್ ಆರ್ಯಾ ಇವರು ವೃತ್ತಿಯಲ್ಲಿ ರಾಜತಾಂತ್ರಿಕರು. ಈ ಹಿಂದೆ ದೆಹಲಿಯಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆಯಲ್ಲಿ ಕೂಡ ಕೆಲಸ ಮಾಡಿದ್ದಾರೆ. ಪ್ಯಾರಿಸ್​​ನಲ್ಲಿರುವ ಯುನೆಸ್ಕೋದಲ್ಲಿ ಭಾರತದ ಶಾಶ್ವತ ನಿಯೋಗದ ಪ್ರತಿನಿಧಿಯಾಗಿದ್ದರು. ಅಷ್ಟೇ ಅಲ್ಲ, ಕಾಬೂಲ್​ ಮತ್ತು ಮಾಸ್ಕೋದಲ್ಲಿ ಕೂಡ ಭಾರತದ ರಾಯಭಾರಿಯಾಗಿದ್ದರು. ದೆಹಲಿಯಲ್ಲಿಯೇ ಬೆಳೆದು ಶಿಕ್ಷಣ ಪಡೆದ ಮುಕುಲ್ ಆರ್ಯಾ, ಜೆಎನ್​ಯು ಮತ್ತು ದೆಹಲಿ ಯೂನಿವರ್ಸಿಟಿಯಲ್ಲಿ ಆರ್ಥಿಕತೆ ಅಧ್ಯಯನ ಮಾಡಿದ್ದಾರೆ. 2008ರಲ್ಲಿ ಇಂಡಿಯನ್ ಫಾರಿನ್​ ಸರ್ವೀಸ್​ ಸೇರಿದ್ದರು.

ಇದನ್ನೂ ಓದಿ: ಸೋನಾಕ್ಷಿ ಸಿನ್ಹಾಗೆ ಬಂಧನ ಭೀತಿ; ಜಾಮೀನು ರಹಿತ ವಾರೆಂಟ್​ ಜಾರಿ ಮಾಡಿದ ಕೋರ್ಟ್​: ಏನಿದು ಕೇಸ್​?