ಅಪಹರಣಕ್ಕೊಳಗಾದ ಎಂವಿ ಲೀಲಾ ನಾರ್ಫೋಕ್‌ ಹಡಗನ್ನು ಭಾರತೀಯ ನೌಕಾಪಡೆ ರಕ್ಷಿಸಿದ್ದು ಹೀಗೆ

|

Updated on: Jan 06, 2024 | 12:56 PM

ಹಡಗಿನೊಳಗೆ ಐದು ಅಥವಾ ಆರು "ಅಪರಿಚಿತ ಸಶಸ್ತ್ರ ಸಿಬ್ಬಂದಿ" ಬಂದಿದ್ದಾರೆ ಎಂದು ಹಡಗು ಎಸ್ಒಎಸ್ ಸಂದೇಶ ಕಳುಹಿಸಿತ್ತು. ಭಾರತೀಯ ನೌಕಾಪಡೆಯ ಕಮಾಂಡೋಗಳನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಹಡಗಿನಲ್ಲಿ ಕಳುಹಿಸಲಾಗಿತ್ತು. ಇಡೀ ಹಡಗಿನಲ್ಲಿ ಕಾರ್ಯಾಚರಣೆ ನಡೆಸಿದ ನಂತರ, ಕಮಾಂಡೋಗಳು ಹಡಗಿನಲ್ಲಿ ಅಪಹರಣಕಾರರ ಅನುಪಸ್ಥಿತಿಯನ್ನು ದೃಢಪಡಿಸಿದರು

ಅಪಹರಣಕ್ಕೊಳಗಾದ ಎಂವಿ ಲೀಲಾ ನಾರ್ಫೋಕ್‌ ಹಡಗನ್ನು ಭಾರತೀಯ ನೌಕಾಪಡೆ ರಕ್ಷಿಸಿದ್ದು ಹೀಗೆ
ಭಾರತೀಯ ನೌಕಾಪಡೆಯ ರಕ್ಷಣಾ ಕಾರ್ಯಾಚರಣೆ
Follow us on

ದೆಹಲಿ ಜನವರಿ 06: ಸೊಮಾಲಿಯಾ(Somalia) ಕರಾವಳಿಯ ಬಳಿ ಅಪಹರಣಕ್ಕೊಳಗಾಗಿದ್ದ ‘ಎಂವಿ ಲೀಲಾ ನಾರ್ಫೋಕ್‌’ (MV Lila Norfolk) ಎಂಬ ಸರಕು ಸಾಗಣೆ ಹಡಗಿನಲ್ಲಿದ್ದ ಎಲ್ಲಾ 21 ಸಿಬ್ಬಂದಿಯನ್ನು  ಭಾರತೀಯ ನೌಕಾಪಡೆ (Indian Navy) ಶುಕ್ರವಾರ ಸಂಜೆ ರಕ್ಷಿಸಿದೆ. ಹಡಗಿನಿಂದ SOS ಕರೆ ಬಂದ ಕೂಡಲೇ ನೌಕಾಪಡೆಯು ಯುದ್ಧನೌಕೆ, ಕಡಲ ಗಸ್ತು ವಿಮಾನ, ಹೆಲಿಕಾಪ್ಟರ್‌ಗಳು ಮತ್ತು ಪ್ರಿಡೇಟರ್ MQ9B ಡ್ರೋನ್‌ಗಳನ್ನು ನಿಯೋಜಿಸಿತು. 84,000 ಟನ್ ಬಲ್ಕ್ ಕ್ಯಾರಿಯರ್‌ನಲ್ಲಿ 15 ಭಾರತೀಯರು ಸೇರಿದಂತೆ 21 ಸದಸ್ಯರಿದ್ದರು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ.

ಹಡಗಿನೊಳಗೆ ಐದು ಅಥವಾ ಆರು “ಅಪರಿಚಿತ ಸಶಸ್ತ್ರ ಸಿಬ್ಬಂದಿ” ಬಂದಿದ್ದಾರೆ ಎಂದು ಹಡಗು ಎಸ್ಒಎಸ್ ಸಂದೇಶ ಕಳುಹಿಸಿತ್ತು. ಭಾರತೀಯ ನೌಕಾಪಡೆಯ ಕಮಾಂಡೋಗಳನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಹಡಗಿನಲ್ಲಿ ಕಳುಹಿಸಲಾಗಿತ್ತು. ಇಡೀ ಹಡಗಿನಲ್ಲಿ ಕಾರ್ಯಾಚರಣೆ ನಡೆಸಿದ ನಂತರ, ಕಮಾಂಡೋಗಳು ಹಡಗಿನಲ್ಲಿ ಅಪಹರಣಕಾರರ ಅನುಪಸ್ಥಿತಿಯನ್ನು ದೃಢಪಡಿಸಿದರು.
ಬಹುಶಃ ತ್ವರಿತ ಪ್ರತಿಕ್ರಿಯೆ ಮತ್ತು ಎಚ್ಚರಿಕೆ ನೀಡಿದ ನಂತರ ಕಡಲ್ಗಳ್ಳರಿಂದ ಅಪಹರಣದ ಪ್ರಯತ್ನವನ್ನು ಕೈಬಿಟ್ಟಿರಬಹುದು ಎಂದು ಭಾರತೀಯ ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.

ನೌಕಾಪಡೆಯು ರಕ್ಷಣಾ ಕಾರ್ಯಾಚರಣೆಯವ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹಂಚಿಕೊಂಡಿದ್ದು , ಕಮಾಂಡೊಗಳು ಹಡಗಿನಲ್ಲಿ ಹೋಗಿ ತಮ್ಮ ಕಾರ್ಯಾಚರಣೆಯನ್ನು ನಡೆಸುತ್ತಿರುವುದು ಇದರಲ್ಲಿದೆ. ಹಡಗನ್ನು ರಕ್ಷಣೆ ಮಾಡಿದ್ದಕ್ಕಾಗಿ ಹಡಗಿನ ದುಬೈ ಮೂಲದ ಮಾಲೀಕರಾದ ಲೀಲಾ ಗ್ಲೋಬಲ್‌ನ ಮುಖ್ಯ ಕಾರ್ಯನಿರ್ವಾಹಕ ಸ್ಟೀವ್ ಕುಂಜರ್ ಅವರು ಭಾರತೀಯ ನೌಕಾಪಡೆಗೆ ಧನ್ಯವಾದ ತಿಳಿಸಿದ್ದಾರೆ.


ಈ ಸಂದರ್ಭದಲ್ಲಿ ಸುರಕ್ಷಿತವಾಗಿ ಮತ್ತು ಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸಿದ ನಮ್ಮ ಸಿಬ್ಬಂದಿಯ ವೃತ್ತಿಪರತೆಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಸ್ರೇಲ್-ಹಮಾಸ್ ಸಂಘರ್ಷದ ಮಧ್ಯೆ ಹೌತಿ ಉಗ್ರಗಾಮಿಗಳು ಕೆಂಪು ಸಮುದ್ರದಲ್ಲಿ ವ್ಯಾಪಾರಿ ಹಡಗುಗಳ ಮೇಲೆ ದಾಳಿಗಳನ್ನು ಹೆಚ್ಚಿಸುತ್ತಿರುವ ಬಗ್ಗೆ ಹೆಚ್ಚುತ್ತಿರುವ ಕಳವಳದ ಮಧ್ಯೆ ಅಪಹರಣ ಪ್ರಯತ್ನವು ಬಂದಿದೆ. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಇಂತಹ ಕಡಲ ಘಟನೆಗಳನ್ನು ದೃಢವಾಗಿ ಎದುರಿಸಲು ಸೂಚನೆಗಳನ್ನು ನೀಡಿದರು.

ಇದನ್ನೂ ಓದಿ:ಅಪಹರಣಕ್ಕೊಳಗಾದ ಹಡಗಿನಲ್ಲಿದ್ದ 15 ಭಾರತೀಯರು ಸೇರಿದಂತೆ ಎಲ್ಲ ಸಿಬ್ಬಂದಿಯ ರಕ್ಷಣೆ 

21 ಭಾರತೀಯ ಸಿಬ್ಬಂದಿಗಳೊಂದಿಗೆ ಲೈಬೀರಿಯನ್ ಧ್ವಜದ ನೌಕೆ MV ಕೆಮ್ ಪ್ಲುಟೊ ಡಿಸೆಂಬರ್ 23 ರಂದು ಭಾರತದ ಪಶ್ಚಿಮ ಕರಾವಳಿಯಲ್ಲಿ ಡ್ರೋನ್ ದಾಳಿಗೆ ಗುರಿಯಾಗಿತ್ತು. MV ಕೆಮ್ ಪ್ಲುಟೊ ಅಲ್ಲದೆ, ಭಾರತಕ್ಕೆ ತೆರಳುತ್ತಿದ್ದ ಮತ್ತೊಂದು ವಾಣಿಜ್ಯ ತೈಲ ಟ್ಯಾಂಕರ್ ಅದೇ ದಿನ ದಕ್ಷಿಣ ಕೆಂಪು ಸಮುದ್ರದಲ್ಲಿ ಶಂಕಿತ ಡ್ರೋನ್ ದಾಳಿಗೆ ಒಳಗಾಯಿತು. ನೌಕೆಯಲ್ಲಿ 25 ಭಾರತೀಯ ಸಿಬ್ಬಂದಿಯ ತಂಡವಿತ್ತು. ಮತ್ತೊಂದು ಘಟನೆಯಲ್ಲಿ, ಮಾಲ್ಟಾ-ಧ್ವಜದ ಹಡಗು MV ರುಯೆನ್ ಅನ್ನು ಡಿಸೆಂಬರ್ 14 ರಂದು ಕಡಲ್ಗಳ್ಳರು ಅಪಹರಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:56 pm, Sat, 6 January 24