Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಟೀಸರ್ ಬಿಡುಗಡೆ ಮಾಡಿದ ಕಾಂಗ್ರೆಸ್

ಕಾಂಗ್ರೆಸ್ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ದೇಶವಾಸಿಗಳಿಗೆ ನ್ಯಾಯ, ಸಮಾನತೆ, ಉದ್ಯೋಗ ಮತ್ತು ಗೌರವದ ಅಗತ್ಯವನ್ನು ಒತ್ತಿಹೇಳುತ್ತದೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ದೃಶ್ಯಗಳು ಇದರಲ್ಲಿವೆ. ಇದು ನ್ಯಾಯವನ್ನು ಒದಗಿಸುವ ಸಮಯ ಮತ್ತು ನಿರ್ಗತಿಕರಿಗೆ ಅವರ ಹಕ್ಕುಗಳನ್ನು ಪಡೆಯುವ ಸಮಯವಾಗಿದೆ ಎಂಬ ಭಾವನೆಯನ್ನು ವಿಡಿಯೊ ಪ್ರತಿಧ್ವನಿಸುತ್ತದೆ.

ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಟೀಸರ್ ಬಿಡುಗಡೆ ಮಾಡಿದ ಕಾಂಗ್ರೆಸ್
ರಾಹುಲ್ ಗಾಂಧಿ
Follow us
ರಶ್ಮಿ ಕಲ್ಲಕಟ್ಟ
|

Updated on: Jan 06, 2024 | 2:41 PM

ದೆಹಲಿ ಜನವರಿ 06 : ಜನವರಿ 14 ರಿಂದ ಮಾರ್ಚ್ 30 ರವರೆಗೆ ಮಣಿಪುರದಿಂದ ಮಹಾರಾಷ್ಟ್ರದವರೆಗೆ ವಿಸ್ತರಿಸಿರುವ ರಾಹುಲ್ ಗಾಂಧಿಯವರ (Rahul Gandhi) ಭಾರತ್  ಜೋಡೋ ನ್ಯಾಯ್ ಯಾತ್ರೆಯನ್ನು(Bharat Jodo Nyay Yatra) ಪ್ರಾರಂಭಿಸಲು ತಯಾರಿ ನಡೆಸುತ್ತಿರುವ ಕಾಂಗ್ರೆಸ್ (Congress) ಪಕ್ಷವು ಪ್ರಚಾರದ ವಿಡಿಯೊವನ್ನು ಬಿಡುಗಡೆ ಮಾಡಿದೆ. ಬಿಜೆಪಿ ವಿರುದ್ಧ ಮುಸುಕಿನ ದಾಳಿ ನಡೆಸಿದ ಕಾಂಗ್ರೆಸ್, ಪ್ರಸ್ತುತ ಆಡಳಿತದಲ್ಲಿ ಭಾರತದ ಬಡ ಜನರು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ “ಅಸಮಾನತೆ ಮತ್ತು ಅನ್ಯಾಯ” ಎಂದು ಪಕ್ಷವು 58 ಸೆಕೆಂಡುಗಳ ವಿಡಿಯೊವನ್ನು ಬಿಡುಗಡೆ ಮಾಡಿದೆ. ಯಾತ್ರೆಯ ಪೋಸ್ಟರ್ ಅನ್ನು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಪಕ್ಷದ ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು.

ಎಲ್ಲರಿಗೂ ನ್ಯಾಯ, ಸಮಾನತೆ, ಉದ್ಯೋಗ ಮತ್ತು ಗೌರವದ ಅಗತ್ಯವಿದೆ

ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ದೇಶವಾಸಿಗಳಿಗೆ ನ್ಯಾಯ, ಸಮಾನತೆ, ಉದ್ಯೋಗ ಮತ್ತು ಗೌರವದ ಅಗತ್ಯವನ್ನು ವಿಡಿಯೊ ಒತ್ತಿಹೇಳುತ್ತದೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ದೃಶ್ಯಗಳು ಇದರಲ್ಲಿವೆ. ಇದು ನ್ಯಾಯವನ್ನು ಒದಗಿಸುವ ಸಮಯ ಮತ್ತು ನಿರ್ಗತಿಕರಿಗೆ ಅವರ ಹಕ್ಕುಗಳನ್ನು ಪಡೆಯುವ ಸಮಯವಾಗಿದೆ ಎಂಬ ಭಾವನೆಯನ್ನು ವಿಡಿಯೊ ಪ್ರತಿಧ್ವನಿಸುತ್ತದೆ. “ನೀವು ಆಕಾಶದ ಬಗ್ಗೆ ಮಾತನಾಡುತ್ತಿದ್ದೀರಿ, ಅವರು (ಬಡವರು) ಇನ್ನೂ ಭೂಮಿಯ ಮೇಲೆ ಅನ್ಯಾಯವನ್ನು ಎದುರಿಸುತ್ತಿದ್ದಾರೆ, ನೀವು ಶ್ರೀಮಂತರ ಹೃದಯದಲ್ಲಿದ್ದೀರಿ, ಅವರು ಇನ್ನೂ ಕಾಲುಗಳ ಕೆಳಗೆ ತುಳಿಯುತ್ತಿದ್ದಾರೆ. ತಮ್ಮ ಹಕ್ಕುಗಳು, ಸಮಾನತೆಯ ಹಕ್ಕು, ಉದ್ಯೋಗದ ಹಕ್ಕು, ಗೌರವಿಸುವ ಹಕ್ಕುಗಳನ್ನು ಪಡೆಯಲು ಅವರು ಧೂಳಿನಿಂದ ಮೇಲೇರುತ್ತಿದ್ದಾರೆ. ಈ ಬಾರಿ ನ್ಯಾಯ ಸಿಗುತ್ತದೆ, ನಿರ್ಗತಿಕರಿಗೆ ಅವರ ಹಕ್ಕುಗಳು ಸಿಗುತ್ತವೆ” ಎಂದು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ದೃಶ್ಯಗಳಿರುವ ಈ ವಿಡಿಯೊ ಹೇಳುತ್ತಿದೆ.

ಏನಿದು ಭಾರತ್ ನ್ಯಾಯ್ ಯಾತ್ರೆ

ಈ ಯಾತ್ರೆಯು 2022 ರ ಅಂತ್ಯದಿಂದ 2023 ರ ಆರಂಭದವರೆಗೆ ನಡೆದ ಅವರ ಭಾರತ್ ಜೋಡೋ ಯಾತ್ರೆಯ ಎರಡನೇ ಹಂತವಾಗಿದೆ ಎಂದು ಊಹಿಸಲಾಗಿದೆ. ಭಾರತ್ ಜೋಡೋ ಯಾತ್ರೆ 136 ದಿನಗಳ ಕಾಲ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿತ್ತು . ಭಾರತ್ ನ್ಯಾಯ್ ಯಾತ್ರೆಯ ವಿವರಗಳು ಮತ್ತು ಮಾರ್ಗಸೂಚಿಗಳನ್ನು ಇನ್ನೂ ಬಹಿರಂಗಪಡಿಸಬೇಕಾಗಿಲ್ಲ, ಇದು ಹಿಂದಿನ ಯಾತ್ರೆಗಿಂತ ಹೆಚ್ಚು ದೂರವನ್ನು ಕ್ರಮಿಸುವ ನಿರೀಕ್ಷೆಯಿದೆ. ಹಿಂದಿನ ಯಾತ್ರೆಯಲ್ಲಿ 12 ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶಗಳು ಮತ್ತು 75 ಜಿಲ್ಲೆಗಳಿಗೆ ಹೋಲಿಸಿದರೆ ಯಾತ್ರೆಯ ಭಾಗವಾಗಿ 6,200 ಕಿಮೀ ಕ್ರಮಿಸಲು ಮತ್ತು 14 ರಾಜ್ಯಗಳು ಮತ್ತು 85 ಜಿಲ್ಲೆಗಳಲ್ಲಿ ಪ್ರಯಾಣಿಸಲು ಕಾಂಗ್ರೆಸ್ ನಾಯಕ ಸಜ್ಜಾಗಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಜನವರಿ 14ರಂದು ಆರಂಭ

ಭಾರತ್ ನ್ಯಾಯ್ ಯಾತ್ರೆ ಏಕೆ ಭಿನ್ನ?

ಮಣಿಪುರದಲ್ಲಿ ಕಾಂಗ್ರೆಸ್ ಮುಖ್ಯಸ್ಥರು ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನವೇ ಮುಕ್ತಾಯವಾಗುವುದರಿಂದ ಇದು ಮಹತ್ವ ಪಡೆದುಕೊಂಡಿದೆ. ಇದರ ಹೊರತಾಗಿಯೂ, ಭಾರತ್ ಜೋಡೋ ಯಾತ್ರೆಯಂತೆಯೇ ಭಾರತ್ ನ್ಯಾಯ್ ಯಾತ್ರೆಯು ರಾಜಕೀಯ ರ್ಯಾಲಿಯಾಗುವುದಿಲ್ಲ ಎಂದು ಕಾಂಗ್ರೆಸ್ ಪುನರುಚ್ಚರಿಸಿದೆ.

ಈ ಯಾತ್ರೆಯಲ್ಲಿನ ಮುಖ್ಯ ಪ್ರಯಾಣದ ವಿಧಾನವು ಬಸ್‌ನಲ್ಲಿದೆ, ಇದು ಹಿಂದಿನ ಯಾತ್ರೆಯ ಪ್ರಯಾಣದ ವಿಧಾನಗಳಿಂದ ಭಿನ್ನ ಎಂಬುದವನ್ನು ಸೂಚಿಸುತ್ತದೆ. ಈ ಬದಲಾವಣೆಯು ಚುನಾವಣೆಗೆ ಮುನ್ನ ಯಾತ್ರೆಯನ್ನು ತ್ವರಿತಗೊಳಿಸುವ ಉದ್ದೇಶವನ್ನು ಹೊಂದಿಲ್ಲ, ಬದಲಿಗೆ ವಿಭಿನ್ನ ಮಾದರಿಯನ್ನು ಪ್ರಯತ್ನಿಸುವ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ