ಕಡಲತೀರದಲ್ಲಿ ಜಾಗಿಂಗ್ ಮಾಡಿದ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್

| Updated By: ganapathi bhat

Updated on: Apr 06, 2022 | 11:13 PM

ದಿಯು ಕಡಲತೀರದಲ್ಲಿ ಜಾಗಿಂಗ್ ಮಾಡಿರುವ ವೀಡಿಯೋವನ್ನು ಟ್ವಿಟರ್ ಖಾತೆಯಲ್ಲಿ ರಾಮ್​ನಾಥ್ ಕೋವಿಂದ್ ಹಂಚಿಕೊಂಡಿದ್ದಾರೆ. ಬಿಳಿ ಕುರ್ತಾ, ಪೈಜಾಮಾ ಧರಿಸಿರುವ ರಾಷ್ಟ್ರಪತಿ ಘೋಘ್ಲಾ ಬೀಚ್​ನಲ್ಲಿ ಮುಂಜಾವಿನ ಸಮಯ ಕಳೆದಿದ್ದಾರೆ.

ಕಡಲತೀರದಲ್ಲಿ ಜಾಗಿಂಗ್ ಮಾಡಿದ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್
ಕಡಲತೀರದಲ್ಲಿ ಜಾಗಿಂಗ್ ಮಾಡಿದ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್
Follow us on

ದಿಯು: ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ದಿಯುನ ಘೋಘ್ಲಾ ಬೀಚ್​ನಲ್ಲಿ ಇಂದು ಜಾಗಿಂಗ್ ಮಾಡಿದ್ದಾರೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಜನರಿಗೆ ತಿಳಿಸಿರುವ ಅವರು, 2020 ಕಷ್ಟದ ವರ್ಷವಾಗಿತ್ತು. 2021ರಲ್ಲಿ ನಾವೆಲ್ಲರೂ ಒಟ್ಟಾಗಿ ಮತ್ತೆ ಪುಟಿದೇಳಬೇಕು. ಹೊಸ ವರ್ಷವು ನಮ್ಮ ಬಾಳಲ್ಲಿ ಆರೋಗ್ಯ ಹಾಗೂ ಸಮೃದ್ಧಿ ತರಲಿ ಎಂದು ಕೇಳಿಕೊಂಡಿದ್ದಾರೆ.

ದಿಯು ಕಡಲತೀರದಲ್ಲಿ ಜಾಗಿಂಗ್ ಮಾಡಿರುವ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲಿ ರಾಮ್​ನಾಥ್ ಕೋವಿಂದ್ ಹಂಚಿಕೊಂಡಿದ್ದಾರೆ. ಬಿಳಿ ಕುರ್ತಾ, ಪೈಜಾಮಾ ಧರಿಸಿರುವ ರಾಷ್ಟ್ರಪತಿ, ಘೋಘ್ಲಾ ಬೀಚ್​ನಲ್ಲಿ ಮುಂಜಾವಿನ ಸಮಯ ಕಳೆದಿದ್ದಾರೆ.

ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಅವರು ಕೇಂದ್ರಾಡಳಿತ ಪ್ರದೇಶಗಳಾದ ದಿಯು, ದಾಮನ್, ದಾದ್ರ, ನಾಗರ್ ಹವೇಲಿಯ ನಾಲ್ಕು ದಿನಗಳ ಭೇಟಿಯಲ್ಲಿದ್ದಾರೆ. ಶುಕ್ರವಾರ ದಿಯು ತಲುಪಿರುವ ಕೋವಿಂದ್, ನಿನ್ನೆ ಘೋಘ್ಲಾ ಬೀಚ್​ನಲ್ಲಿ ಲೈಟ್ ಮತ್ತು ಸೌಂಡ್ ಶೋ ಉದ್ಘಾಟಿಸಿದ್ದಾರೆ. ಬೀಚ್​ನ ಸ್ವಚ್ಛತೆಯನ್ನು ಕಂಡು ರಾಮನಾಥ್ ಕೋವಿಂದ್ ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೆ ಘೋಘ್ಲಾ ಬೀಚ್ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆ ಪಡೆದಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ರೇಪಿಸ್ಟ್‌ಗಳು ಕ್ಷಮಾದಾನಕ್ಕೆ ಅರ್ಹರೇ ಅಲ್ಲ -ರಾಷ್ಟ್ರಪತಿ ಕೋವಿಂದ್

Published On - 5:02 pm, Mon, 28 December 20