ದೇಶದ 100ನೇ ಕಿಸಾನ್ ರೈಲಿಗೆ ಪ್ರಧಾನಿ ಮೋದಿಯಿಂದ ಹಸಿರು ನಿಶಾನೆ, ವಿಶೇಷತೆಗಳು ಏನು ಗೊತ್ತಾ?
ಕೊವಿಡ್-19 ಸವಾಲಿನ ನಡುವೆಯೂ ಕಳೆದ ನಾಲ್ಕು ತಿಂಗಳಲ್ಲಿ ಕಿಸಾನ್ ರೈಲು ನೆಟ್ವರ್ಕ್ ವಿಸ್ತರಣೆಗೊಂಡಿದೆ. ದೇಶದ 100ನೇ ಕಿಸಾನ್ ರೈಲು ಇಂದು ಸಂಚಾರ ಆರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರೈತ ಸಮುದಾಯಕ್ಕೆ ಅಭಿನಂದನೆ ಸಲ್ಲಿಸಿದರು.
ದೆಹಲಿ: ಕೊವಿಡ್-19 ಸವಾಲಿನ ನಡುವೆಯೂ ಕಳೆದ ನಾಲ್ಕು ತಿಂಗಳಲ್ಲಿ ಕಿಸಾನ್ ರೈಲು ನೆಟ್ವರ್ಕ್ ವಿಸ್ತರಣೆಗೊಂಡಿದೆ. ದೇಶದ 100ನೇ ಕಿಸಾನ್ ರೈಲು ಇಂದು ಸಂಚಾರ ಆರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರೈತ ಸಮುದಾಯಕ್ಕೆ ಅಭಿನಂದನೆ ಸಲ್ಲಿಸಿದರು.
ದೆಹಲಿಯಲ್ಲಿ ಇಂದು (ಡಿ.28) ಸಂಜೆ ದೇಶದ 100ನೇ ಕಿಸಾನ್ ರೈಲು ಸಂಚಾರಕ್ಕೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿ ಮೋದಿ ಮಾತನಾಡಿದರು. ರೈತರ ಕಲ್ಯಾಣ ಹಾಗೂ ರೈತರ ಆದಾಯ ಹೆಚ್ಚಳಕ್ಕೆ ಕಿಸಾನ್ ರೈಲು ನೆಟ್ವರ್ಕ್ ವಿಸ್ತರಣೆ ದೊಡ್ಡ ಹೆಜ್ಜೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಿಸಾನ್ ರೈಲು, ಸಂಚಾರಿ ಶೈತ್ಯಾಗಾರ ಇದ್ದಂತೆ. ಹಣ್ಣು, ತರಕಾರಿ, ಹಾಲು, ಮೀನು ಮುಂತಾದ ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯಲು ಕಿಸಾನ್ ರೈಲು ಸಹಕಾರಿಯಾಗಿರಲಿದೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಕೃಷಿ ಸಂಪದ ಯೋಜನೆಯಡಿ, ಮೆಗಾ ಫುಡ್ ಪಾರ್ಕ್ಸ್, ಕೋಲ್ಡ್ ಚೈನ್ ವ್ಯವಸ್ಥೆ, ಆಗ್ರೋ ಪ್ರೊಸೆಸಿಂಗ್ನಂತಹ ಸುಮಾರು 6,500 ಪ್ರಾಜೆಕ್ಟ್ಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ಆತ್ಮನಿರ್ಭರ್ ಪ್ಯಾಕೇಜ್ ಮೂಲಕ, ಮೈಕ್ರೋ ಫುಡ್ ಪ್ರೊಸೆಸಿಂಗ್ ಕೈಗಾರಿಕೆಗಳಿಗೆ 10 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ಸರ್ಕಾರದ ಯೋಜನೆಗಳನ್ನು ಪ್ರಧಾನಿ ವಿವರಿಸಿದರು. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ರೈಲ್ವೇ ಖಾತೆ ಸಚಿವ ಪಿಯೂಶ್ ಗೋಯಲ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
100ನೇ ಕಿಸಾನ್ ರೈಲಿನಲ್ಲಿ ಏನೆಲ್ಲಾ ವ್ಯವಸ್ಥೆ ಇರಲಿದೆ? ಮಹಾರಾಷ್ಟ್ರದ ಸಂಗೋಲಾದಿಂದ ಪಶ್ಚಿಮ ಬಂಗಾಳದ ಶಾಲಿಮಾರ್ವರೆಗೆ ರೈಲು ಸಂಚಾರ ನಡೆಸಲಿರುವ ಕಿಸಾನ್ ರೈಲು, 2,132 ಕಿ.ಮೀ.ಗಳನ್ನು ಸುಮಾರು 39 ಗಂಟೆಗಳಲ್ಲಿ ತಲುಪಲಿದೆ. 400 ಟನ್ಗಳಷ್ಟು ಹಣ್ಣು, ತರಕಾರಿ, ಕೃಷಿ ಉತ್ಪನ್ನಗಳನ್ನು ರೈಲು ಹೊತ್ತೊಯ್ಯಲಿದೆ. ಮಧ್ಯಪ್ರದೇಶ, ಚತ್ತೀಸ್ಗಢ, ಒಡಿಸ್ಸಾ ಮೂಲಕ ರೈಲು ಪ್ರಯಾಣ ನಡೆಸಲಿದೆ.
ಸದ್ಯ ದೇಶದ 9 ಮಾರ್ಗಗಳಲ್ಲಿ ಕಿಸಾನ್ ರೈಲು ಸಂಚಾರ ನಡೆಸುತ್ತಿದೆ. ರೈತರಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹಾಗೂ ಬಳಕೆದಾರ ಗ್ರಾಹಕರಿಗೆ ಉತ್ತಮ ಸಂಪರ್ಕ ವ್ಯವಸ್ಥೆ ಒದಗಿಸುವ ಉದ್ದೇಶವನ್ನು ಕಿಸಾನ್ ರೈಲು ಹೊಂದಿದೆ.
ಮೊತ್ತ ಮೊದಲ ಚಾಲಕ ರಹಿತ ಮೆಟ್ರೋಗೆ ಹಸಿರು ನಿಶಾನೆ ದೇಶದ ಮೊತ್ತ ಮೊದಲ ಚಾಲಕ ರಹಿತ ಮೆಟ್ರೋ (Driverless Metro) ರೈಲು ಸಂಚಾರವನ್ನು ಕೂಡ ಇಂದಿನಿಂದ (ಡಿ.28) ಆರಂಭಿಸಲಾಯಿತು. ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ನ (DMRC) ಈ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 11 ಗಂಟೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಇದನ್ನೂ ಓದಿ: ಕಿಸಾನ್ ರೈಲು ಮತ್ತು ಮೊದಲ ಚಾಲಕ ರಹಿತ ಮೆಟ್ರೋ ರೈಲು ಸಂಚಾರಕ್ಕೆ ಇಂದು ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ
ದೆಹಲಿಯಲ್ಲಿ ಮೊದಲ ಮೆಟ್ರೋ ರೈಲು ಅಟಲ್ ಬಿಹಾರಿ ವಾಜಪೇಯಿ ಅವರ ಶ್ರಮದಿಂದ ಆರಂಭಗೊಂಡಿತು. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಾಗ ಕೇವಲ 5 ನಗರಗಳಲ್ಲಿ ಮೆಟ್ರೋ ಸೇವೆ ಲಭ್ಯವಿತ್ತು. ಇಂದು, ದೇಶದ 18 ನಗರಗಳು ಮೆಟ್ರೋ ರೈಲು ಸೌಲಭ್ಯ ಹೊಂದಿದೆ. 2025ರ ಒಳಗಾಗಿ, ರಾಷ್ಟ್ರದ 25 ನಗರಗಳಿಗೆ ಮೆಟ್ರೋ ರೈಲು ಸೇವೆ ಒದಗಿಸಲು ಸರ್ಕಾರ ಸಿದ್ಧವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಟ್ಟು 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದ ರಾಜಧಾನಿಯಾಗಿ, ದೆಹಲಿ ಜಾಗತಿಕ ಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾವೆಲ್ಲರೂ ಜೊತೆಯಾಗಿ ದೆಹಲಿಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಕೆಲಸ ಮಾಡಬೇಕು ಎಂದು ಮೋದಿ ಮಾತನಾಡಿದರು. ಕಾಮನ್ ಮೊಬಿಲಿಟಿ ಕಾರ್ಡ್ನ್ನು ಕೂಡ ಇದೇ ವೇಳೆ ಲಾಂಚ್ ಮಾಡಲಾಯಿತು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Delhi: PM Narendra Modi inaugurates India’s first driverless train on Delhi Metro’s Magenta Line & launches National Common Mobility Card on the Airport Express Line, via video conferencing. pic.twitter.com/QpDTPZ8Z3h
— ANI (@ANI) December 28, 2020
ನಿರಂಕಾರಿ ಮೈದಾನವೀಗ ‘ಕಿಸಾನ್ ಪುರ’! Delhi Chalo ಚಳುವಳಿಕಾರರಿಂದ ಮರು ನಾಮಕರಣ
Published On - 6:39 pm, Mon, 28 December 20