ಒಡಿಶಾದ (Odisha) ಬಹನಾಗಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ (Train Accident) ಸಂಬಂಧಿಕರು ಎಲ್ಲಿದ್ದಾರೆ ಎಂದು ಪತ್ತೆ ಹಚ್ಚಲು ಕುಟುಂಬಗಳಿಗೆ ಅನುಕೂಲವಾಗುವಂತೆ, ಒಡಿಶಾ ಸರ್ಕಾರದ ಬೆಂಬಲದೊಂದಿಗೆ ಭಾರತೀಯ ರೈಲ್ವೆ (Indian Railways) ಪತ್ತೆಹಚ್ಚಲು ಬೇಕಾಗಿರುವ ಕ್ರಮ ಕೈಗೊಂಡಿದೆ. ಈ ರೈಲು ಅಪಘಾತದಲ್ಲಿ ಪ್ರಯಾಣಿಕರ ಕುಟುಂಬ ಸದಸ್ಯರು/ಸಂಬಂಧಿಗಳು/ಸ್ನೇಹಿತರು ಮತ್ತು ಹಿತೈಷಿಗಳು ಈ ಕೆಳಗಿನ ವಿವರಗಳನ್ನು ಬಳಸಿಕೊಂಡು ಮೃತರ ಫೋಟೋಗಳು, ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಪ್ರಯಾಣಿಕರ ಪಟ್ಟಿಗಳು ಮತ್ತು ಗುರುತಿಸಲಾಗದ ವ್ಯಕ್ತಿಗಳ ಮಾಹಿತಿ ಬಳಸಿಕೊಂಡು ಪತ್ತೆ ಮಾಡಬಹುದು ಎಂದು ಪಿಐಬಿ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಒಡಿಶಾದ ದುರಂತ ಬಹನಾಗಾ ರೈಲು ಅಪಘಾತದಲ್ಲಿ ಮೃತರ ಫೋಟೋಗಳ ಲಿಂಕ್:
https://srcodisha.nic.in/Photos%20Of%20Deceased%20with%20Disclaimer.pdf
ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಯಾಣಿಕರ ಪಟ್ಟಿಗಳ ಲಿಂಕ್:
https://www.bmc.gov.in/train-accident/download/Lists-of-Passengers-Undergoing-Treatment-in-Different-Hospitals_040620230830.pdf
SCB ಕಟಕ್‌ನಲ್ಲಿ ಚಿಕಿತ್ಸೆಯಲ್ಲಿರುವ ಅಪರಿಚಿತ ವ್ಯಕ್ತಿಗಳ ಲಿಂಕ್:
https://www.bmc.gov.in/train-accident/download/Un-identified-person-under-treatment-at-SCB-Cuttack.pdf
ರೈಲು ಅಪಘಾತಕ್ಕೊಳಗಾದ ಪ್ರಯಾಣಿಕರ ಕುಟುಂಬಗಳು / ಸಂಬಂಧಿಕರನ್ನು ಸಂಪರ್ಕಿಸಲು ರೈಲ್ವೆ ಸಹಾಯವಾಣಿ ಸಂಖ್ಯೆ 139 ಹಗಲಿರುಳು ಕೆಲಸ ಮಾಡುತ್ತಿದೆ. ಸಹಾಯವಾಣಿ 139 ಅನ್ನು ರೈಲ್ವೆಯ ಹಿರಿಯ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ:Odisha Train Accident: ಶವಗಳ ರಾಶಿಯಿಂದ ಮಗನನ್ನು ಜೀವಂತವಾಗಿ ಹೊರ ತೆಗೆದ ತಂದೆ
ಅಲ್ಲದೆ, ಬಿಎಂಸಿ ಸಹಾಯವಾಣಿ ಸಂಖ್ಯೆ 18003450061/1929 ಸಹ 24×7 ಕಾರ್ಯನಿರ್ವಹಿಸುತ್ತಿದೆ. ಮುನ್ಸಿಪಲ್ ಕಮಿಷನರ್ ಕಚೇರಿ, ಭುವನೇಶ್ವರ್, ಕಂಟ್ರೋಲ್ ರೂಂ ಅನ್ನು ಸ್ಥಾಪಿಸಿದ್ದು, ಅಲ್ಲಿಂದ ವಾಹನಗಳೊಂದಿಗೆ ಜನರನ್ನು ಆಸ್ಪತ್ರೆ ಅಥವಾ ಶವಾಗಾರಕ್ಕೆ ಕರೆದೊಯ್ದು ಶವ ಪತ್ತೆ ಮಾಡಲು ಸಹಾಯ ಮಾಡಲಾಗುವುದು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ