Odisha Train Accident: ಪತ್ನಿಯ ಅಂತ್ಯಕ್ರಿಯೆ ನಡೆಸಿ, ಮಗಳ ದೇಹ ಹುಡುಕಲು ಹೋದ ವ್ಯಕ್ತಿ

ಮೊಹಮ್ಮದ್ ಸರ್ಫರಾಜ್ ಎಂಬುವವರ ಪತ್ನಿ ಮತ್ತು ಮಗಳು ರೈಲು ಅಪಘಾತದಲ್ಲಿ ಸಾವನ್ನಪ್ಪಿದ್ದು, ಇದೀಗ ಪತ್ನಿ ದೇಹ ಸಿಕ್ಕಿದ್ದು ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ಆದರೆ ಇದೀಗ ಮತ್ತೆ ಮಗಳ ಮೃತ ದೇಹದ ಹುಡುಕಲು ಶವಾಗಾರಕ್ಕೆ ಹೋಗಿದ್ದಾರೆ.

Odisha Train Accident: ಪತ್ನಿಯ ಅಂತ್ಯಕ್ರಿಯೆ ನಡೆಸಿ, ಮಗಳ ದೇಹ ಹುಡುಕಲು ಹೋದ ವ್ಯಕ್ತಿ
ಮಗಳಿಗಾಗಿ ಕಣ್ಣೀರು ಹಾಕಿದ ತಂದೆ
Follow us
ಅಕ್ಷಯ್​ ಪಲ್ಲಮಜಲು​​
|

Updated on: Jun 06, 2023 | 3:56 PM

ಬಾಲಸೋರ್: ಒಡಿಶಾದಲ್ಲಿ ನಡೆದ ರೈಲು ಅಪಘಾತದಲ್ಲಿ (Odisha Train Accident) 278 ಜನ ಸಾವನ್ನಪ್ಪಿದ್ದು 1,100ಕ್ಕೂ ಹೆಚ್ಚು ಜನ ಗಾಯಗೊಂಡು ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಈಗಾಗಲೇ ಅನೇಕರು ಆಸ್ಪತ್ರೆಯಿಂದ ಮನೆ ಹೋಗಿದ್ದಾರೆ. ಇದೀಗ ಅಲ್ಲಿ ರೈಲು ಹಳಿಗಳ ಮರುಸ್ಥಾಪನೆಗೊಂಡು ರೈಲು ಸಂಚಾರ ಕೂಡ ಆರಂಭವಾಗಿದೆ. ಆದರೆ ದುರಂತದಲ್ಲಿ ಸಾವನ್ನಪ್ಪಿರುವ ತನ್ನ ಕುಟುಂಬದವರ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದೀಗ ಶವಗಳ ಪತ್ತೆ ಕಾರ್ಯ ನಡೆಯುತ್ತಿದೆ. ಮೃತ ದೇಹಗಳನ್ನು ಪತ್ತೆ ಮಾಡಿ ಅವರ ಕುಟುಂಬಕ್ಕೆ ನೀಡುವ ಕಾರ್ಯ ನಡೆಯುತ್ತಿದೆ. ಈಗಾಗಲೇ ರೈಲ್ವೆ ಇಲಾಖೆ ದೇಹವನ್ನು ಪತ್ತೆ ಮಾಡಿ ತೆಗೆದುಕೊಂಡು ಹೋಗುವಂತೆ ಸೂಚನೆ ನೀಡಿದೆ.

ಆದರೆ ಈ ಮಧ್ಯೆ ಒಂದು ಮನಕಲಕುವ ಘಟನೆಯೊಂದು ನಡೆದಿದೆ. ಹೌದು ಮೊಹಮ್ಮದ್ ಸರ್ಫರಾಜ್ ಎಂಬುವವರ ಪತ್ನಿ ಮತ್ತು ಮಗಳು ರೈಲು ಅಪಘಾತದಲ್ಲಿ ಸಾವನ್ನಪ್ಪಿದ್ದು, ಇದೀಗ ಪತ್ನಿ ದೇಹ ಸಿಕ್ಕಿದ್ದು ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ಆದರೆ ಇದೀಗ ಮತ್ತೆ ಮಗಳ ಮೃತ ದೇಹದ ಹುಡುಕಲು ಶವಾಗಾರಕ್ಕೆ ಹೋಗಿದ್ದಾರೆ. ಶವಾಗಾರದಲ್ಲಿ 150ಕ್ಕೂ ಹೆಚ್ಚು ಶವಗಳಲ್ಲಿ ತನ್ನ ಪತ್ನಿಯ ದೇಹವನ್ನು ಗುರುತಿಸಿದ್ದಾರೆ, ಆದರೆ ರೈಲಿನಲ್ಲಿದ್ದ ತನ್ನ ಮಗಳನ್ನು ಇನ್ನೂ ಕಂಡುಹಿಡಿಯಲಾಗಿಲ್ಲ ಎಂದು ಹೇಳಿದ್ದಾರೆ. ಪ್ರತಿದಿನ ಜಿಲ್ಲಾಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದು, ಬಾಲಸೋರ್‌ನ ನಿವಾಸಿಗಳು ಸಹ ಸಹಾಯ ಮಾಡಲು ಮುಂದಾಗಿದ್ದರಿಂದ ಮಗಳ ಮೃತದೇಹವನ್ನು ಪತ್ತೆ ಮಾಡುವ ಕಾರ್ಯ ನಡೆಸುತ್ತಿದೆ.

ಆರಂಭದಲ್ಲಿ ಮೃತದೇಹಗಳು ಬೇರೆ ಬೇರೆ ಸ್ಥಳಗಳಿಗೆ ಹೋಗಿದ್ದರಿಂದ ಸ್ವಲ್ಪ ತೊಂದರೆ ಉಂಟಾಗಿದೆ, ಆದರೆ ಎಲ್ಲರೂ ಈ ಬಗ್ಗೆ ಕಾಳಜಿ ವಹಿಸಿದ್ದಾರೆ. ತನ್ನ ಮಗಳು ಸತ್ತಿದ್ದಾರೋ ಅಥವಾ ಬದುಕಿದ್ದಾರೋ ಗೊತ್ತಿಲ್ಲ, ಅದಕ್ಕಾಗಿಯೇ ಹುಡುಕಾಟ ನಡೆಸುತ್ತಿದ್ದಾರೆ ಎಂದು ಭುವನೇಶ್ವರದ ಬಾಲಸೋರ್ ನಿವಾಸಿ ಮೊಹಮ್ಮದ್ ಅಯೂಬ್ ಎನ್‌ಡಿಟಿವಿಗೆ ತಿಳಿಸಿದರು.

ಇದನ್ನೂ ಓದಿ: Odisha Train Accident: 40 ಪ್ರಯಾಣಿಕರ ಮೃತದೇಹಗಳ ಮೇಲೆ ಒಂದೇ ಒಂದು ಗಾಯದ ಗುರುತು ಕೂಡ ಇರಲಿಲ್ಲ

ತನ್ನ ಮಗಳು ಮತ್ತು ಈ ಸ್ಥಿತಿಗೆ ಬಗ್ಗೆ ಸರ್ಫರಾಜ್ ಕಣ್ಣೀರು ಹಾಕಿದ್ದಾರೆ. ತಾನು ಅನುಭವಿಸಿದ ಕಷ್ಟಗಳನ್ನು ನೆನೆದು ದುಃಖಿಸುತ್ತಿದ್ದಾರೆ. ಇದೀಗ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ತನ್ನ ಮಗಳನ್ನು ಹುಡುಕುವ ಕಾರ್ಯವನ್ನು ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿ ಮತ್ತೆ ಭುವನೇಶ್ವರಕ್ಕೆ ಹೋಗಲು ವ್ಯವಸ್ಥೆ ಮಾಡಿದ್ದಾರೆ. ನಮ್ಮಲ್ಲಿ ಕೇಂದ್ರೀಯ ನಿಯಂತ್ರಣ ಕೊಠಡಿ ಮತ್ತು ಬಾಲಸೋರ್ ಜಿಲ್ಲಾ ನಿಯಂತ್ರಣ ಕೊಠಡಿ ಇದೆ. ನೀವು ಯಾವಾಗಬೇಕಾದರೂ ಕರೆ ಮಾಡಿ ಮತ್ತು ವಿವರಗಳನ್ನು ಪಡೆಯಬಹುದು ಎಂದು ಬಾಲಸೋರ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಕಲೆಕ್ಟರ್ ದತ್ತಾತ್ರೇ ಭೌಸಾಹೇಬ್ ಶಿಂಧೆ ಹೇಳಿದರು.

ಅಪಘಾತದಲ್ಲಿ ಸುಮಾರು 1,100 ಜನರು ಗಾಯಗೊಂಡಿದ್ದಾರೆ, ಅದರಲ್ಲಿ ಸುಮಾರು 900 ಜನರನ್ನು ಚಿಕಿತ್ಸೆ ನಂತರ ಮನೆಗೆ ಕಳುಹಿಸಲಾಗಿದೆ. ಸುಮಾರು 200 ಜನರು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ 278 ಜನರಲ್ಲಿ 101 ಮೃತದೇಹಗಳು ಇನ್ನೂ ಉಳಿದಿವೆ. ಗುರುತಿಸಲಾಗಿದೆ ಎಂದು ಅಧಿಕಾರಿಗಳು ANIಗೆ ತಿಳಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ