
ನವದೆಹಲಿ (ಫೆಬ್ರವರಿ 27): ಅಮೆರಿಕದಲ್ಲಿ ಕೋಮಾದಲ್ಲಿರುವ ಭಾರತೀಯ ವಿದ್ಯಾರ್ಥಿನಿ ನೀಲಂ ಶಿಂಧೆ ಅವರ ಕುಟುಂಬವು ಅವರನ್ನು ಭೇಟಿ ಮಾಡಲು ವೀಸಾ ಕೋರುತ್ತಿದೆ. ಅವರು ಮೊದಲು ಅಮೆರಿಕದಲ್ಲಿ (United States) ಅಪಘಾತಕ್ಕೀಡಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರು.ಇದೀಗ ಈ ವಿಷಯದಲ್ಲಿ ಭಾರತದ ವಿದೇಶಾಂಗ ಸಚಿವಾಲಯ (MEA) ಮಧ್ಯಪ್ರವೇಶಿಸಿದೆ ಎಂದು ವರದಿಯಾಗಿದೆ. ಗಾಯಗೊಂಡ 35 ವರ್ಷದ ಭಾರತೀಯ ಮಹಿಳೆ ನೀಲಂ ತಾನಾಜಿ ಶಿಂಧೆ ಅವರ ಕುಟುಂಬಕ್ಕೆ ಸಾಧ್ಯವಾದಷ್ಟು ಬೇಗ ಅಮೆರಿಕಕ್ಕೆ ಪ್ರಯಾಣಿಸಲು ಅನುವು ಮಾಡಿಕೊಡಲು ಅಮೆರಿಕದ ಅಧಿಕಾರಿಗಳು ತುರ್ತು ವೀಸಾ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತಿದ್ದಾರೆ.
ವಿದೇಶಾಂಗ ಸಚಿವಾಲಯದ ಅಮೆರಿಕದ ವಿಭಾಗವು ಸಂಬಂಧಿತ ಅಮೆರಿಕದ ಅಧಿಕಾರಿಗಳನ್ನು ಸಂಪರ್ಕಿಸಿದೆ, ಅವರು ನೀಲಂ ಅವರ ಕುಟುಂಬಕ್ಕೆ ವೀಸಾ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಅಗತ್ಯವಿರುವ ಕಾರ್ಯವಿಧಾನಗಳನ್ನು ಪರಿಶೀಲಿಸುತ್ತಿದ್ದಾರೆ. ಸದ್ಯದಲ್ಲೇ ಅವರಿಗೆ ಅಮೆರಿಕಕ್ಕೆ ಪ್ರಯಾಣಿಸಲು ಅನುಮತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ನೀಲಂ ಅವರ ಕುಟುಂಬವು ಅಮೆರಿಕದ ವೀಸಾವನ್ನು ತ್ವರಿತವಾಗಿ ಪಡೆಯಲು ಕೇಂದ್ರದ ಸಹಾಯವನ್ನು ಕೋರುತ್ತಿತ್ತು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
Student Neelam Shinde has met with an accident in the USA and is hospitalized in a local hospital. Her father, Tanaji Shinde, from Satara, Maharashtra, India, urgently needs to visit his daughter due to a medical emergency. Tanaji Shinde has applied for an urgent visa to the USA…
— Supriya Sule (@supriya_sule) February 26, 2025
ಇದನ್ನೂ ಓದಿ: ಅಮೆರಿಕಕ್ಕೆ ಹೋಗಲು ಇಬಿ-5 ವೀಸಾ ಬದಲು ಹೊಸ ಗೋಲ್ಡ್ ಕಾರ್ಡ್: ಬೆಲೆ 5 ಮಿಲಿಯನ್ ಡಾಲರ್
ಫೆಬ್ರವರಿ 14ರಂದು ಕ್ಯಾಲಿಫೋರ್ನಿಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೂಳೆ ಮುರಿತಕ್ಕೊಳಗಾದ ನಂತರ ಕೋಮಾದಲ್ಲಿರುವ ಭಾರತೀಯ ವಿದ್ಯಾರ್ಥಿನಿ ನೀಲಂ ಶಿಂಧೆ (35) ಅವರ ಕುಟುಂಬವು ಆಕೆಯೊಂದಿಗೆ ಇರಲು ವೀಸಾಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಮಹಾರಾಷ್ಟ್ರದ ಸತಾರದವರಾದ ನೀಲಂ ಶಿಂಧೆ ಅವರ ಎದೆ ಮತ್ತು ತಲೆಗೆ ಗಾಯಗಳಾಗಿವೆ. ಇದಾದ ಎರಡು ದಿನಗಳ ನಂತರ ಅವರ ಕುಟುಂಬಕ್ಕೆ ಅಪಘಾತದ ಬಗ್ಗೆ ತಿಳಿದುಬಂದಿದೆ. ಆಸ್ಪತ್ರೆಯು ಅವರ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲು ಅನುಮತಿ ಕೋರಿದೆ. ಇದೀಗ ನೀಲಂ ಕೋಮಾದಲ್ಲಿದ್ದಾರೆ. ಹೀಗಾಗಿ, ಆಕೆಯ ಕುಟುಂಬಸ್ಥರು ತುರ್ತಾಗಿ ಅಮೆರಿಕಕ್ಕೆ ತೆರಳಬೇಕಾದ ಅನಿವಾರ್ಯತೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:28 pm, Thu, 27 February 25