ಮಹಾಕುಂಭ: ಸ್ವಚ್ಛತಾ ಕಾರ್ಮಿಕರಿಗೆ 10 ಸಾವಿರ ರೂ. ಬೋನಸ್ ಕೊಟ್ಟ ಯೋಗಿ, ಏಪ್ರಿಲ್‌ನಿಂದ ಕನಿಷ್ಠ ವೇತನ ಹೆಚ್ಚಳ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 45 ದಿನಗಳ ಕಾಲ ಮಹಾ ಕುಂಭ ಮೇಳ ನಡೆಯಿತು. ಈ ಎಲ್ಲಾ ದಿನಗಳಲ್ಲಿ ಆ ಸ್ಥಳವನ್ನು ಶುದ್ಧವಾಗಿಟ್ಟ ಸ್ವಚ್ಛತಾ ಕಾರ್ಮಿಕರಿಗೆ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 10 ಸಾವಿರ ರೂ. ಬೋನಸ್ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ ಏಪ್ರಿಲ್‌ನಿಂದ ಕನಿಷ್ಠ ವೇತನವನ್ನು 16 ಸಾವಿರ ರೂ.ಗೆ ಹೆಚ್ಚಳ ಮಾಡುವ ಭರವಸೆ ನೀಡಿದ್ದಾರೆ.

ಪ್ರಯಾಗ್ರಾಜ್, ಫೆಬ್ರವರಿ 27: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 45 ದಿನಗಳ ಕಾಲ ಮಹಾ ಕುಂಭ ಮೇಳ ನಡೆಯಿತು. ಈ ಎಲ್ಲಾ ದಿನಗಳಲ್ಲಿ ಆ ಸ್ಥಳವನ್ನು ಶುದ್ಧವಾಗಿಟ್ಟ ಸ್ವಚ್ಛತಾ ಕಾರ್ಮಿಕರಿಗೆ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 10 ಸಾವಿರ ರೂ. ಬೋನಸ್ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ ಏಪ್ರಿಲ್‌ನಿಂದ ಕನಿಷ್ಠ ವೇತನವನ್ನು 16 ಸಾವಿರ ರೂ.ಗೆ ಹೆಚ್ಚಳ ಮಾಡುವ ಭರವಸೆ ನೀಡಿದ್ದಾರೆ.
ಒಂದು ಕಾರ್ಯಕ್ರಮ ನಡೆಯಬೇಕೆಂದರೆ ಅದರ ಸಿದ್ಧತೆ ಎಷ್ಟು ಮುಖ್ಯವೋ ಕಾರ್ಯಕ್ರಮದಲ್ಲಿ ಹಾಗೂ ಕಾರ್ಯಕ್ರಮಗಳು ನಡೆದ ಬಳಿಕ ಆ ಸ್ಥಳದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದೂ ಕೂಡ ಅಷ್ಟೇ ಮುಖ್ಯ. ತಾತ್ಕಾಲಿಕ ಆರೋಗ್ಯ ಕಾರ್ಯಕರ್ತರಿಗೆ ನೇರ ಬ್ಯಾಂಕ್ ವರ್ಗಾವಣೆಯನ್ನು ನೀಡಲಾಗುತ್ತದೆ ಮತ್ತು ಅವರೆಲ್ಲರನ್ನೂ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್ ಭಾರತ್ ಯೋಜನೆಗೆ ಲಿಂಕ್ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಪ್ರಯಾಗರಾಜ್‌ನಲ್ಲಿ ನಡೆಯುವ ಮಹಾ ಕುಂಭ ಮೇಳದಲ್ಲಿ ನೈರ್ಮಲ್ಯ ಮತ್ತು ಆರೋಗ್ಯ ಕಾರ್ಯಕರ್ತರಿಗೆ 10,000 ರೂ. ಬೋನಸ್ ನೀಡಲು ನಮ್ಮ ಸರ್ಕಾರ ನಿರ್ಧರಿಸಿದೆ. ಏಪ್ರಿಲ್‌ನಿಂದ ನೈರ್ಮಲ್ಯ ಕಾರ್ಮಿಕರಿಗೆ ಕನಿಷ್ಠ 16,000 ರೂ. ವೇತನ ನೀಡಲಾಗುವುದು ಎಂದರು. ಆಯುಷ್ಮಾನ್ ಯೋಜನೆಗೆ ಲಿಂಕ್ ಮಾಡುವ ಮೂಲಕ ಎಲ್ಲಾ ಉದ್ಯೋಗಿಗಳು ಜನ ಆರೋಗ್ಯ ಬಿಮಾದ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಮತ್ತಷ್ಟು ಓದಿ: Mahakumbh Mela: ಮಹಾಕುಂಭವನ್ನು ‘ಏಕತೆಯ ಮಹಾಯಜ್ಞ’ ಎಂದು ಕರೆದ ಪ್ರಧಾನಿ ಮೋದಿ
2025 ರ ಮಹಾ ಕುಂಭ ಮೇಳದ ಯಶಸ್ವಿ ಆಯೋಜನೆಯಲ್ಲಿ ಪ್ರಯಾಗ್‌ರಾಜ್‌ನಲ್ಲಿ ನೈರ್ಮಲ್ಯ ಮತ್ತು ಆರೋಗ್ಯ ಕಾರ್ಯಕರ್ತರ ಪಾತ್ರಕ್ಕಾಗಿ ಯೋಗಿ ಆದಿತ್ಯನಾಥ್ ಅವರನ್ನು ಸನ್ಮಾನಿಸಿದರು, ಸ್ವಚ್ಛ ಕುಂಭ ಕೋಶ್ ಮತ್ತು ಆಯುಷ್ಮಾನ್ ಯೋಜನೆಯಡಿ ಪ್ರಮಾಣಪತ್ರಗಳನ್ನು ವಿತರಿಸಿದರು.
#WATCH | Prayagraj: Uttar Pradesh CM Yogi Adityanath says “Our government has decided to provide Rs 10,000 bonus to the sanitation and health workers at the Maha Kumbh in Prayagraj. We are going to ensure that from April, a minimum wage of Rs 16,000 will be provided to the… pic.twitter.com/QwywAUsD2S
— ANI (@ANI) February 27, 2025
ಇದಕ್ಕೂ ಮುನ್ನ ಪ್ರಯಾಗ್‌ರಾಜ್‌ನ ಅರೈಲ್ ಘಾಟ್‌ನಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಸಿಎಂ ಯೋಗಿ ಮತ್ತು ಅವರ ಸಂಪುಟದ ಸದಸ್ಯರು ಭಾಗವಹಿಸಿದ್ದರು.ಇಷ್ಟು ದೊಡ್ಡ ಸಭೆ ಜಗತ್ತಿನ ಎಲ್ಲಿಯೂ ನಡೆದಿಲ್ಲ. ಒಟ್ಟು 66.30 ಕೋಟಿ ಭಕ್ತರು ಭಾಗವಹಿಸಿದ್ದರು, ಆದರೆ ಅಪಹರಣ, ಲೂಟಿ ಅಥವಾ ಅಂತಹ ಯಾವುದೇ ಅಪರಾಧ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




