ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಸೋಮವಾರ ಭವ್ಯವಾಗಿ ಹಾರಿಸಲಾಯಿತು. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಎರಡು ವರ್ಷಗಳ ಅವಧಿಯ ಸದಸ್ಯ ರಾಷ್ಟ್ರವಾಗಿ ಭಾರತವು ಆಯಕಟ್ಟಿನ ಸ್ಥಾನ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ, ವಿಶ್ವ ಸಂಸ್ಥೆಯ ಅಂಗವಾದ ಭದ್ರತಾ ಮಂಡಳಿಯಲ್ಲಿ ಭಾರತ ಸ್ಥಾನ ಪಡೆದಿದೆ.
ಭಾರತವು, 2021 ಆಗಸ್ಟ್ನಲ್ಲಿ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ರಾಷ್ಟ್ರವಾಗಲಿದೆ. ಹಾಗೂ 2022ರ ಸಭೆಯಲ್ಲೂ ಭಾಗವಹಿಸಲಿದೆ. ಪ್ರತೀ ಸದಸ್ಯ ರಾಷ್ಟ್ರವು ಒಂದು ತಿಂಗಳ ಅವಧಿಗೆ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿದೆ. ಇಂಗ್ಲಿಷ್ ವರ್ಣಮಾಲೆಯ ಅನುಸಾರ ಅಧ್ಯಕ್ಷ ಸ್ಥಾನ ಸಿಗಲಿದೆ. ಅದರಂತೆ, ಭಾರತಕ್ಕೆ ಈ ವರ್ಷದ ಆಗಸ್ಟ್ನಲ್ಲಿ ಅಧ್ಯಕ್ಷ ಸ್ಥಾನ ಲಭಿಸಲಿದೆ.
ವಿಶ್ವ ಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿಯಾಗಿರುವ ರಾಯಭಾರಿ ಟಿ.ಎಸ್. ತಿರುಮೂರ್ತಿ ಭಾರತದ ಧ್ವಜವನ್ನು ಭದ್ರತಾ ಮಂಡಳಿಯಲ್ಲಿ ಅಳವಡಿಸಿ, ಪ್ರಾತಿನಿಧಿಕ ಮಾತುಗಳನ್ನಾಡಿದರು. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯತ್ವವು ಭಾರತಕ್ಕೆ ಎಂಟನೇ ಬಾರಿಗೆ ಲಭ್ಯವಾಗುತ್ತಿದೆ. ಇಂಥಾ ಸಂತಸದ ಸಂದರ್ಭದಲ್ಲಿ ಭಾರತೀಯ ರಾಯಭಾರಿಯಾಗಿ ನಾನು ಈ ಸ್ಥಾನದಲ್ಲಿ ಇರುವುದು ಗೌರವಪೂರ್ಣ ವಿಷಯವಾಗಿದೆ ಎಂದು ಟಿ.ಎಸ್. ತಿರುಮೂರ್ತಿ ಹೆಮ್ಮೆಯಿಂದ ತಿಳಿಸಿದರು.
Indian flag raised at United Nations Security Council. pic.twitter.com/EXYEioEI0W
— Varoon Galagali (@gvaroon) January 5, 2021
ಭಾರತ ಮೂಲದ ಶ್ರವಣ್ ಅಯ್ಯರ್ ಕ್ಲಿಕ್ಕಿಸಿದ ಫೋಟೊಗೆ ವಿಶ್ವಸಂಸ್ಥೆಯ WMO 2021 ಪ್ರಶಸ್ತಿ
Published On - 11:24 am, Tue, 5 January 21