ದೆಹಲಿ ನವೆಂಬರ್ 15: 1998 ನವೆಂಬರ್ 15ರಂದು ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ (Indraprastha Apollo Hospital) ವೈದ್ಯರ ತಂಡವು ಜೀವ ಉಳಿಸುವ ಯಕೃತ್ತಿನ ಕಸಿ ಮಾಡಿದಾಗ ಸಂಜಯ್ ಕಂದಸಾಮಿಗೆ ಆಗ ಕೇವಲ 20 ತಿಂಗಳು. ದೇಶದ ಮೊದಲ ಮಕ್ಕಳ ಯಕೃತ್ತು ಕಸಿ (liver transplant) ಆಗಿತ್ತು ಅದು. ಇಪ್ಪತ್ತೈದು ವರ್ಷಗಳ ನಂತರ, ಸಂಜಯ್ ಈಗ ಸ್ವತಃ ವೈದ್ಯರಾಗಿದ್ದು, ಕಾಂಚೀಪುರಂನಲ್ಲಿರುವ ಸ್ಥಳೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ಅಭ್ಯಾಸ ಮಾಡುತ್ತಿದ್ದಾರೆ. ಅಂಗಾಂಗ ದಾನಕ್ಕಾಗಿ (organ donation) ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುತ್ತಿರುವ ಇವರು ಕಸಿ ಸ್ವೀಕರಿಸುವವರು ಶಸ್ತ್ರಚಿಕಿತ್ಸೆಯ ನಂತರ ಸಂಪೂರ್ಣವಾಗಿ ಸಾಮಾನ್ಯ ಜೀವನವನ್ನು ಹೇಗೆ ನಡೆಸಬಹುದು ಎಂಬುದನ್ನು ಉದಾಹರಣೆಯ ಮೂಲಕ ಸಾಬೀತುಪಡಿಸಿದ್ದಾರೆ. ಅವರು ತಮ್ಮ ಊರಿಗೆ ತೆರಳುವ ಮೊದಲು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ನಾನು ಶಸ್ತ್ರಚಿಕಿತ್ಸೆ ಬಗ್ಗೆ ನೆನಪಿಟ್ಟುಕೊಳ್ಳಲು ತುಂಬಾ ಚಿಕ್ಕವನಾಗಿದ್ದೆ, ಆದರೆ ನನ್ನ ಹೊಟ್ಟೆಯ ಮೇಲಿನ ಶಸ್ತ್ರಚಿಕಿತ್ಸೆಯ ಗಾಯದ ಬಗ್ಗೆ ನನ್ನ ತಾಯಿಯಲ್ಲಿ ಕೇಳಿದ್ದು ನನಗೆ ನೆನಪಿದೆ. ನನ್ನ ತಂದೆ ನನಗಾಗಿ ಏನು ಮಾಡಿದರು ಮತ್ತು ವೈದ್ಯರು ನನ್ನ ಜೀವವನ್ನು ಹೇಗೆ ಉಳಿಸಿದರು ಎಂಬುದನ್ನು ಅರ್ಥಮಾಡಿಕೊಳ್ಳುವ ವಯಸ್ಸನ್ನು ನಾನು ತಲುಪಿದಾಗ, ನಾನು ಕೂಡ ವೈದ್ಯನಾಗಬೇಕು ಮತ್ತು ಹೆಚ್ಚಿನ ಜೀವಗಳನ್ನು ಉಳಿಸಬೇಕೆಂದು ನಿರ್ಧರಿಸಿದೆ ಎಂದು ಕಂದಸಾಮಿ ಹೇಳಿದ್ದಾರೆ.
ಕಂದಸಾಮಿ ಹುಟ್ಟಿದಾಗ ಕಾಗ್ನೆನ್ಶಿಯಲ್ ಕಂಡೀಷನ್, ಪಿತ್ತರಸದ ಅಟ್ರೆಸಿಯಾ, ಇದು ಪಿತ್ತಜನಕಾಂಗದ ಅಸ್ವಸ್ಥತೆಯಾಗಿದ್ದು, ಇದು ಪಿತ್ತಜನಕಾಂಗದಿಂದ ಪಿತ್ತಕೋಶಕ್ಕೆ ಪಿತ್ತರಸವನ್ನು ಸಾಗಿಸುವ ಟ್ಯೂಬ್‌ಗಳಲ್ಲಿ (ನಾಳಗಳು) ಅಡಚಣೆಯನ್ನು ಉಂಟುಮಾಡುತ್ತದೆ. ಪಿತ್ತಜನಕಾಂಗದ ಒಳಗೆ ಅಥವಾ ಹೊರಗೆ ಪಿತ್ತರಸ ನಾಳಗಳು ಸಾಮಾನ್ಯವಾಗಿ ಬೆಳವಣಿಗೆಯಾಗದಿದ್ದಾಗ ಈ ಕಾಗ್ನೆನ್ಶಿಯಲ್ ಕಂಡೀಷನ್ ಸಂಭವಿಸುತ್ತದೆ. ಅವನ ವಿಷಯದಲ್ಲಿ, ಈ ಸ್ಥಿತಿಯು ಕಾಮಾಲೆಗೆ ಕಾರಣವಾಯಿತು, ಇದು ಅವನ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು.
ಕಸಿ ಮಾಡುವ ಪ್ರಸ್ತಾಪವನ್ನು ಕುಟುಂಬದೊಂದಿಗೆ ಚರ್ಚಿಸಿದಾಗ, ಸಂಜಯ್ ಅವರ ತಂದೆ ಯಾವುದೇ ಹಿಂಜರಿಕೆಯಿಲ್ಲದೆ ದಾನಿಯಾಗಲು ಒಪ್ಪಿಕೊಂಡರು. ಸದ್ಯ ಅವರಿಗೆ 61 ವರ್ಷ ವಯಸ್ಸಾಗಿದ್ದು, ಆರೋಗ್ಯವಾಗಿದ್ದಾರೆ.
ಕಂದಸಾಮಿ ಅವರ ವೈದ್ಯರೂ ಆಗಿದ್ದ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಗಳ ಗುಂಪಿನ ವೈದ್ಯಕೀಯ ನಿರ್ದೇಶಕ ಮತ್ತು ಹಿರಿಯ ಮಕ್ಕಳ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಅನುಪಮ್ ಸಿಬಲ್ ಅವರು 20 ತಿಂಗಳ ಮಗುವಿಗೆ ಯಕೃತ್ತು ಕಸಿ ಮಾಡುವ ನಿರ್ಧಾರವನ್ನು ತೆಗೆದುಕೊಂಡಾಗ ಸಾಕಷ್ಟು ಅನುಮಾನಗಳು ಮತ್ತು ಆತಂಕಗಳು ಇದ್ದವು.
ಮೊದಲ ಬಾರಿಗೆ ಏನನ್ನಾದರೂ ಮಾಡಿದಾಗ, ನೀವು ಭಯಪಡುತ್ತೀರಿ ಮತ್ತು ಉದ್ವಿಗ್ನರಾಗುತ್ತೀರಿ, ವಿಶೇಷವಾಗಿ ಯಾರೊಬ್ಬರ ಜೀವನವು ಅಪಾಯದಲ್ಲಿರುವಾಗ. ಆದರೆ ಸಂಜಯ್ ಮತ್ತು ಅವರ ಕುಟುಂಬದವರು ಸಾಕಷ್ಟು ಧೈರ್ಯ ಮತ್ತು ದೃಢತೆಯನ್ನು ತೋರಿಸಿದರು. ಯಕೃತ್ತು ಸ್ವೀಕರಿಸುವವರು ತಮ್ಮ ಜೀವನದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬೇಕಾಗಿಲ್ಲ ಎಂಬುದಕ್ಕೆ ಅವರು ನಿಜವಾದ ಉದಾಹರಣೆಯಾಗಿದ್ದಾರೆ ಎಂದು ಸಿಬಲ್ ಹೇಳಿದರು.
ಇದನ್ನೂ ಓದಿ: ಕಿಡ್ನಿ ಕಸಿಗೆ ಒಳಗಾಗಿದ್ದ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಬ್ಯಾಡ್ಮಿಂಟನ್ ಆಡುತ್ತಿರುವ ವಿಡಿಯೋ ವೈರಲ್
ಸಂಜಯ್‌ನಿಂದ ಪ್ರೀತಿಯಿಂದ “ಡಾಕ್ಟರ್ ಅಂಕಲ್” ಎಂದು ಕರೆಯಲ್ಪಡುವ ಸಿಬಲ್, ಇತ್ತೀಚೆಗೆ ಮಾರ್ಚ್‌ನಲ್ಲಿ ತನ್ನ ಮದುವೆಗೆ ಕಂದಸಾಮಿ ಕುಟುಂಬದಿಂದ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಯಕೃತ್ತು ಕಸಿ ಮಾಡುವ ಮಕ್ಕಳು ಸಕ್ರಿಯ ಜೀವನವನ್ನು ನಡೆಸುತ್ತಾರೆ. ನಮ್ಮ ಅನೇಕ ರೋಗಿಗಳು ಉತ್ತಮ ವೃತ್ತಿಜೀವನವನ್ನು ಮುಂದುವರೆಸುತ್ತಾರೆ, ಅವರು ಮದುವೆಯಾಗುತ್ತಾರೆ ಮತ್ತು ಸಂಪೂರ್ಣವಾಗಿ ಸಾಮಾನ್ಯ ಜೀವನವನ್ನು ಹೊಂದಿದ್ದಾರೆಎಂದು ಅವರು ಹೇಳಿದರು.
ಕಂದಸಾಮಿ ಅವರ ಕಸಿ ಮಾಡಿದ 25 ನೇ ವಾರ್ಷಿಕೋತ್ಸವವನ್ನು ಗುರುತಿಸಲು ಅಪೋಲೋ ಆಸ್ಪತ್ರೆಯ ವೈದ್ಯರು 500 ನೇ ಮಕ್ಕಳ ಯಕೃತ್ತಿನ ಕಸಿಯನ್ನು ಯಶಸ್ವಿಯಾಗಿ ನಡೆಸಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ