ಕಳೆದ ವರ್ಷ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಚೀನಾವನ್ನು ಹಿಂದಿಕ್ಕಿದ ಭಾರತವು 2100ರ ವೇಳೆಗೂ ಅದೇ ಸ್ಥಾನದಲ್ಲಿ ಮುಂದುವರೆಯಲಿದೆ. 2100ರ ವೇಳೆಗೆ ಭಾರತದ ಜನಸಂಖ್ಯೆ ಕಡಿಮೆಯಾದರೂ ಕೂಡ ಚೀನಾಕ್ಕಿಂತ 2.5 ಪಟ್ಟು ಹೆಚ್ಚಿರಲಿದೆ ಎಂದು ವಿಶ್ವಸಂಸ್ಥೆಯ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಜಾಗತಿಕ ಜನಸಂಖ್ಯೆ ಈ ಶತಮಾನದಲ್ಲೇ 10.3 ಶತಕೋಟಿ ತಲುಪುವ ನಿರೀಕ್ಷೆ ಇದೆ. 2080ರ ಸಮಯದಲ್ಲಿ ಈಗಿರುವ 8.2 ಶತಕೋಟಿಯಿಂದ 10.3 ಶತಕೋಟಿ ಆಗಲಿದೆ. ಜಪಾನ್ ಹಾಗೂ ಚೀನಾ ಸೇರಿದಂತೆ 63 ರಾಷ್ಟ್ರಗಳ ಜನಸಂಖ್ಯೆ 2024ಕ್ಕೂ ಮುನ್ನವೇ ಗರಿಷ್ಠ ಮಟ್ಟವನ್ನು ತಲುಪಿದ್ದು, ಭಾರತ ಹಾಗೂ ಅಮೆರಿಕ ಸೇರಿದಂತೆ 126 ದೇಶಗಳ ಜನಸಂಖ್ಯೆ 2100ರ ಸಮಯದಲ್ಲಿ ಗರಿಷ್ಠ ಮಟ್ಟಕ್ಕೇರುವ ನಿರೀಕ್ಷೆ ಇದೆ.
2022ರ ಬಳಿಕ ಜೀವಿತಾವಧಿ ಎಲ್ಲಾ ದೇಶ ಹಾಗೂ ಪ್ರದೇಶಗಳಲ್ಲಿ ಬಹುತೇಕ ಕೋವಿಡ್ ಪೂರ್ವ ಮಟ್ಟ ತಲುಪಿದೆ. ಕೋವಿಡ್ ಸಾಂಕ್ರಾಮಿಕದ ವೇಳೆ ಕುಸಿತ ಕಂಡಿತ್ತು. ಬಳಿಕ 73.3ಕ್ಕೆ ಏರಿಕೆಯಾಗಿತ್ತು. 2054ರ ವೇಳೆಗೆ ಜಾಗತಿಕವಾಗಿ ನಿರೀಕ್ಷಿತ ಜೀವಿತಾವಧಿ 77.4 ವರ್ಷಗಳಿಗೆ ಏರುವ ಸಾಧ್ಯತೆ ಇದೆ.
ಮತ್ತಷ್ಟು ಓದಿ: World Population Day 2024 : ದೇಶದ ಅಭಿವೃದ್ಧಿಗೆ ಹೊರೆಯಾಗದಿರಲಿ ಜನ ಸಂಖ್ಯೆ ಹೆಚ್ಚಳ
ಭಾರತವೀಗ ಚೀನಾವನ್ನು ಹಿಂದಿಕ್ಕಿ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವೆಂದು ಪರಿಗಣಿಸಲ್ಪಟ್ಟಿದೆ. ಇನ್ನು 70 ವರ್ಷಗಳಲ್ಲಿ ಭಾರತದ ಜನಸಂಖ್ಯೆ ದ್ವಿಗುಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
2011ರಲ್ಲಿ ನಡೆದ ಜನಗಣತಿಯಲ್ಲಿ ಭಾರತದ ಜನಸಂಖ್ಯೆ 121 ಕೋಟಿ ಇತ್ತು. ಭಾರತದಲ್ಲಿ ಪುರುಷರ ಜೀವಿತಾವಧಿ 71 ವರ್ಷ ಇತ್ತು ಮತ್ತು ಮಹಿಳೆಯರ ಸರಾಸರಿ ಆಯಸ್ಸು 74 ವರ್ಷಗಳು ಇದ್ದವು. ವಿಶ್ವಸಂಸ್ಥೆಯ ವರದಿಯ ಪ್ರಕಾರ, 2006-2023ರ ಅವಧಿಯಲ್ಲಿ ಭಾರತದಲ್ಲಿ ಬಾಲ್ಯವಿವಾಹ ಶೇ.23 ರಷ್ಟಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ